ಧಾರವಾಡ: ಇಲ್ಲಿನ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಅಂದಾ ದರ್ಬಾರ್ ನಡೆಯುತ್ತಿದೆ ಎಂದು ಆರೋಪಿಸಿದ ಮಹಿಳೆ ಕಚೇರಿ ಮುಂದೆ ತನ್ನ ಅಳಲು ತೋಡಿಕೊಳ್ಳುವ ಮೂಲಕ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.
ಇಲ್ಲಿ ಹಣ ನೀಡಿದವರಿಗೆ ಮಾತ್ರ ಕೆಲಸ ಮಾಡಿಕೊಡಲಾಗುತ್ತದೆ. ಹಣ ಕೊಡದಿದ್ದರೆ ಕೆಲಸ ಮಾಡಿಕೊಡಲ್ಲ. ಅಧಿಕಾರಿಗಳು ರೈತರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಖಾತೆ ಬದಲಾವಣೆ, ಆಸ್ತಿ ಖರೀದಿಗೆ ಬಂದ ಜನರನ್ನು ವಿನಾಕಾರಣ ಸುತ್ತಾಡಿಸುತ್ತಾರೆ ಎಂದು ಹಾವೇರಿಯ ರೈತ ಮಹಿಳೆ ರೇಣುಕಾ ಕೆಂಚಣ್ಣವರ ಎಂಬುವರು ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡಿದ್ದಾರೆ.
ಬೆಳಗ್ಗೆ 6 ಗಂಟೆಗೆ ಹಾವೇರಿಯಿಂದ ಬಂದು ಕಾದು ಕಾದು ಸುಸ್ತಾಗಿದೆ. ಜಾಗ ಬದಲಾವಣೆ ಸಲುವಾಗಿ ಕಳೆದ ಮೂರು ತಿಂಗಳಿಂದ ಹಾವೇರಿಯಿಂದ ಇದೇ ರೀತಿ ಅಲೆಯುತ್ತಿದ್ದೇನೆ. ಅಲೆದೆಲೆದು ಸಾಕಾಗಿದೆ ಎಂದು ಅಧಿಕಾಗಳೆದುರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಸುದ್ದಿ ಮಾಡಲು ಬಂದ ಮಾಧ್ಯಮ ಸಿಬ್ಬಂದಿ ಮೇಲೂ ಅಧಿಕಾರಿಗಳು ದರ್ಪ ತೋರಿದ ಘಟನೆ ನಡೆಯಿತು.