ETV Bharat / state

ಕುಂದಗೋಳ ವಿಧಾನಸಭಾ ಉಪ ಸಮರ : ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳ ಬೆಂಬಲಿಗರ ವಾಟ್ಸ್‌ಆ್ಯಪ್ ವಾರ್ - undefined

ಬೆಂಗಳೂರಿನಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಯಡಿಯೂರಪ್ಪ ಎಸ್.ಐ.ಚಿಕ್ಕನಗೌಡರಿಗೆ ಟಿಕೆಟ್ ನೀಡಲು ಪಟ್ಟು ಹಿಡಿದಿದ್ದರು. ಈ ಕುರಿತು ಎಸ್.ಐ.ಚಿಕ್ಕನಗೌಡರ ಅವರಿಗೆ ಟಿಕೆಟ್ ನೀಡುವುದಾಗಿ ಕೂಡ ವರಿಷ್ಠರು ಭರವಸೆ ನೀಡಿರುವ ಹಿನ್ನೆಲೆಯಲ್ಲಿಯೇ ಇನ್ನೋರ್ವ ಆಕಾಂಕ್ಷಿ ಎಂ.ಆರ್.ಪಾಟೀಲ ಬೆಂಬಲಿಗ ಬಿಜೆಪಿ ಕಾರ್ಯಕರ್ತರು ಹಾಗೂ ಎಂ.ಆರ್ ಪಾಟೀಲ್ ಅಭಿಮಾನಿ ಬಳಗದ ವಾಟ್ಸ್‌ಆ್ಯಪ್‌ ಗ್ರುಪ್​ನಲ್ಲಿ ಬಿಜೆಪಿಯ ಕೆಲ ಕಾರ್ಯಕರ್ತರು ಚಿಕ್ಕನಗೌಡ್ರ ಟಿಕೆಟ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ವಾಟ್ಸಪ್ ವಾರ್
author img

By

Published : Apr 27, 2019, 9:02 AM IST

ಹುಬ್ಬಳ್ಳಿ: ಸಚಿವ ಸಿ.ಎಸ್​ ಶಿವಳ್ಳಿ ಅಕಾಲಿಕ ಅಗಲಿಕೆಯಿಂದ ತೆರವಾದ ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಈಗಾಗಲೇ ಘೋಷಣೆಯಾಗಿದೆ. ಮೇ19ಕ್ಕೆ ಮತದಾನವೂ ನಡೆಯುತ್ತಿರುವ ಹಿನ್ನೆಲೆ ಬಿಜೆಪಿಯಲ್ಲಿ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಅಸಮಾಧಾನ ಬುಗಿಲೆದ್ದಿದೆ.

Whatsapp war
ವಾಟ್ಸ್‌ಆ್ಯಪ್ ವಾರ್

ಮಾಜಿ ಶಾಸಕ ಎಸ್. ಐ. ಚಿಕ್ಕನಗೌಡ ಹಾಗೂ ಬಿಜೆಪಿ ಮುಖಂಡ ಎಂ. ಆರ್ ಪಾಟೀಲ್‌ ಕುಂದಗೋಳ ಕ್ಷೇತ್ರದ ಬಿಜೆಪಿ ಟಿಕೆಟ್‌ನ ಪ್ರಬಲ ಆಕಾಂಕ್ಷಿಗಳು. ಆದರೆ, ಬೆಂಗಳೂರಿನಲ್ಲಿ ನಿನ್ನೆ ನಡೆದ ಕೋರ್ ಕಮಿಟಿ ಸಭೆಯಲ್ಲಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ತಮ್ಮ ನೆಂಟರಾಗಿರುವ ಎಸ್.ಐ.ಚಿಕ್ಕನಗೌಡರಿಗೆ ಟಿಕೆಟ್ ನೀಡಲು ಪಟ್ಟು ಹಿಡಿದಿದ್ದರು. ಈ ಕುರಿತು ಎಸ್.ಐ.ಚಿಕ್ಕನಗೌಡರ ಅವರಿಗೆ ಟಿಕೆಟ್ ನೀಡುವುದಾಗಿ ಕೂಡ ವರಿಷ್ಠರು ಭರವಸೆ ನೀಡಿರುವ ಹಿನ್ನೆಲೆಯಲ್ಲಿಯೇ ಇನ್ನೋರ್ವ ಆಕಾಂಕ್ಷಿ ಎಂ.ಆರ್.ಪಾಟೀಲ ಬೆಂಬಲಿಗ ಬಿಜೆಪಿ ಕಾರ್ಯಕರ್ತರು ಹಾಗೂ ಎಂ.ಆರ್ ಪಾಟೀಲ್ ಅಭಿಮಾನಿ ಬಳಗ ವಾಟ್ಸ್‌ಆ್ಯಪ್ ಗ್ರೂಪ್​ನಲ್ಲಿ ಬಿಜೆಪಿಯ ಕೆಲ ಕಾರ್ಯಕರ್ತರು ಚಿಕ್ಕನಗೌಡರಿಗೆ ಟಿಕೆಟ್ ನೀಡ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಸ್ವತಃ ಬಿಜೆಪಿ ಕಾರ್ಯಕರ್ತರ ಮಧ್ಯೆ ಚಿಕ್ಕನಗೌಡರ ಸೋಲುತ್ತಾರೆಂದು ಚರ್ಚೆ ನಡೆದಿದೆ. ಭಿನ್ನಮತ ಸ್ಪೋಟಗೊಂಡಿರುವುದರಿಂದಾಗಿ ಬಿಜೆಪಿ ಪಾಳಯದಲ್ಲಿ ಆತಂಕದ ಬೇಗುದಿ ಸೃಷ್ಟಿಯಾಗಿದೆ.

ಸಿ.ಎಸ್‌ ಶಿವಳ್ಳಿ ಧರ್ಮಪತ್ನಿ ಕುಸುಮಾ ಶಿವಳ್ಳಿ ವಿರುದ್ಧ ಚಿಕ್ಕನಗೌಡ ಸೋಲ್ತಾರೆ ಎಂಬುದು ಕೂಡ ವಾಟ್ಸ್ಆ್ಯಫ್ ಗ್ರುಪ್‌ನಲ್ಲಿ ಚರ್ಚೆಯಾಗಿದೆ. ಬಿಜೆಪಿ ಪಾಳಯದಲ್ಲಿ ಟಿಕೆಟ್ ವಿಷಯಕ್ಕೆ ಸಂಬಂಧಿಸಿದಂತೆ ಆಂತರಿಕ ಭಿನ್ನಮತ ಸ್ಪೋಟಗೊಂಡಿರುವುದು ಇಬ್ಬರ ಜಗಳದಲ್ಲಿ ಮೂರನೇಯವರಿಗೆ ಲಾಭ ಎನ್ನುವಂತೆ ಗೋಚರಿಸುತ್ತಿದೆ. ಅಲ್ಲದೇ ಪ್ರಕಾಶಗೌಡ ಪಾಟೀಲ ಎಂಬುವರು ತಮ್ಮ ಟ್ವಿಟರ್ ಖಾತೆಯಿಂದ ನರೇಂದ್ರ ಮೋದಿಯವರಿಗೆ ಸಂದೇಶ ಕಳಿಸಿದ್ದಾರೆ. ಕುಂದಗೋಳ ವಿಧಾನಸಭಾ ಚುನಾವಣೆ ಗ್ರೌಂಡ್ ರಿಪೋರ್ಟ್ ಪರಿಶೀಲಿಸಿ ಪ್ರಬಲ ಅಭ್ಯರ್ಥಿಗೆ ಟಿಕೆಟ್ ನೀಡಬೇಕು. ಆದರೆ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರು ಇದರ ಕುರಿತು ಯಾವುದೇ ಸೂಕ್ತ ಕ್ರಮಕೈಗೊಂಡಿಲ್ಲ ಎಂದು ಸಂದೇಶದಲ್ಲಿ ತಿಳಿಸಿದ್ದಾರೆ. ಅಷ್ಟೇ ಅಲ್ಲ, ಎಂ.ಆರ್.ಪಾಟೀಲ ಪ್ರಬಲ ಅಭ್ಯರ್ಥಿಯಾಗಿದ್ದು, ಅವರಿಗೆ ಟಿಕೆಟ್ ನೀಡಲು ಮನವಿ ಮಾಡಿಕೊಂಡಿದ್ದಾರೆ.

sample description

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.