ಧಾರವಾಡ: ವಕ್ಫ್ ಮತ್ತು ದೇವಸ್ಥಾನಗಳ ಆಸ್ತಿ ದುರ್ಬಳಕೆ ತಡೆಯಬೇಕಿದೆ. ಇದಕ್ಕಾಗಿ ವಕ್ಫ್, ದೇವಸ್ಥಾನ ಆಸ್ತಿಗಳ ಸರ್ವೆ ಮಾಡಲಾಗುವುದು. ಡ್ರೋಣ್ ಮೂಲಕ ಸರ್ವೇ ನಡೆಯಲಿದೆ ಎಂದು ವಕ್ಫ್ ಮತ್ತು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಂದಾಯ ಸಚಿವರ ಮುಂದೆ ಪ್ರಸ್ತಾಪ ಸಹ ಮಾಡಲಾಗಿದೆ. ಅಧಿವೇಶನ ಮುಗಿದ ತಕ್ಷಣ ಡ್ರೋಣ್ ಸರ್ವೇ ನಡೆಯಲಿದೆ. ಸರ್ವೇ ಬಳಿಕ ಎಲ್ಲ ವಿವರ ನಮಗೆ ಸಿಗಲಿದೆ. ಸರ್ವೆ ಆಧರಿಸಿ ಆಸ್ತಿಗಳಿಗೆ ಕಾಂಪೌಂಡ್ ಹಾಕುತ್ತೇವೆ ಎಂದರು.
ಮೇಕೆದಾಟು ಬಗ್ಗೆ ಕಾಂಗ್ರೆಸ್, ಬಿಜೆಪಿ ವಿರುದ್ಧ ಮಾಜಿ ಸಿಎಂ ಹೆಚ್‌ಡಿಕೆ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವರು, ಹೆಚ್‌ಡಿಕೆ ಯಾವುದೇ ಹೇಳಿಕೆ ನೀಡಿರಬಹುದು. ಕಾಂಗ್ರೆಸ್ ಸರ್ಕಾರ ಇದ್ದಾಗಲೂ ಈ ಹೋರಾಟ ಇತ್ತು. ನಮ್ಮ ಮುಖ್ಯಮಂತ್ರಿಗಳು ಕೇಂದ್ರದಿಂದ ಇದಕ್ಕೊಂದು ದಾರಿ ಹುಡುಕುತ್ತಾರೆ. ಜನರಿಗೆ ಸದುಪಯೋಗ ಆಗಲಿದೆ ಎಂದು ಹೇಳಿದರು.
ಇದನ್ನೂ ಓದಿ: ಗಣಿಗಾರಿಕೆ ಸ್ಥಳಗಳಿಗೆ ಚಾಮರಾಜನಗರ ಡಿಸಿ, ಭೂ ವಿಜ್ಞಾನಿಗಳು ಭೇಟಿ, ತಪಾಸಣೆ
ದೈವ ಸಂಕಲ್ಪ ಯೋಜನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಈಗಾಗಲೇ ಮೊದಲ ಹಂತದಲ್ಲಿ 25 ದೇವಸ್ಥಾನಗಳನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಮಾಸ್ಟರ್ ಪ್ಲಾನ್ ತಯಾರಾಗುತ್ತಿದೆ. ಇದಕ್ಕಾಗಿ 1,140 ಕೋಟಿ ವೆಚ್ಚ ಆಗಲಿದೆ. ಟೆಂಪಲ್ ಟೂರಿಸಂ ಸಹ ಮಾಡಲಿದ್ದೇವೆ ಎಂದು ಉತ್ತರಿಸಿದರು.