ಹುಬ್ಬಳ್ಳಿ: ಗ್ರಾಮದಲ್ಲಿ ಪ್ರಥಮ ಕೊರೊನಾ ಪ್ರಕರಣ ದೃಢಪಡುತ್ತಿದಂತೆ ಇಡೀ ಗ್ರಾಮಸ್ಥರು ಎಚ್ಚೆತ್ತುಕೊಂಡಿದ್ದಾರೆ. ಕುಂದಗೋಳ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ಮೊದಲ ಕೊರೊನಾ ಕೇಸ್ ಪತ್ತೆಯಾಗಿದೆ. ಇದರಿಂದ ಗ್ರಾಮಸ್ಥರೇ ಸ್ವಯಂಪ್ರೇರಿತರಾಗಿ ಗ್ರಾಮದ ಎಲ್ಲ ಅಂಗಡಿಗಳನ್ನು ಬಂದ್ ಮಾಡಿಸಿ ಸೀಲ್ ಡೌನ್ ಮಾಡಿದ್ದಾರೆ.
ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಭುಗೌಡ ರಸ್ತೆಗಿಳಿದು ಜನರಲ್ಲಿ ಆತ್ಮಸ್ಥೈರ್ಯ ತುಂಬುತ್ತಿದ್ದಾರೆ. ಊರಿನ ಎಲ್ಲಾ ಪ್ರದೇಶಗಳಿಗೂ ಸ್ಯಾನಿಟೈಸ್ ಮಾಡಿಸಲಾಗಿದೆ. ಕೊರೊನಾ ಒಬ್ಬರಿಂದೊಬ್ಬರಿಗೆ ಹರಡಬಾರದು. ಹಾಗಾಗಿ, ಎಲ್ಲರೂ ಮನೆಯಲ್ಲೇ ಇರುವಂತೆ ಮನವಿ ಮಾಡುತ್ತಿದ್ದಾರೆ.