ಹುಬ್ಬಳ್ಳಿ : ರೈಲ್ವೆ ನಿಲ್ದಾಣ ಹಾಗೂ ನಿಂತಿರುವ ರೈಲಿನಲ್ಲಿ ನಡೆಯುತ್ತಿದ್ದ ಕ್ರೈಂಗಳಿಗೆ ಕಡಿವಾಣ ಹಾಕಲು ನೈಋತ್ಯ ರೈಲ್ವೆ ವಲಯ ಹೊಸ ನಿರ್ಧಾರ ಕೈಗೊಂಡಿದೆ. ಈ ವಿಡಿಯೋ ಸರ್ವಿಲೆನ್ಸ್ ಸಿಸ್ಟಮ್ಗಳನ್ನು ನಿಲ್ದಾಣದಲ್ಲಿ ಅಳವಡಿಸಲು ಮುಂದಾಗಿದೆ.
ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ ಬರುವ ನಿಲ್ದಾಣಗಳಲ್ಲಿ ಭದ್ರತೆಯನ್ನು ಬಲ ಪಡಿಸುವ ಉದ್ದೇಶದಿಂದ ವಿಡಿಯೋ ಸರ್ವಿಲೆನ್ಸ್ ಸಿಸ್ಟಮ್ (ವಿಎಸ್ಎಸ್ ತೀವ್ರ ನಿಗಾ ವ್ಯವಸ್ಥೆ) ವ್ಯವಸ್ಥೆ ಜಾರಿಗೊಳಿಸಿದೆ. ಇಂಟರ್ನೆಟ್ ಪ್ರೋಟೋಕಾಲ್ ಆಧಾರಿತ ವಿಡಿಯೋ ಸರ್ವಿಲಿಯನ್ಸ್ ಸಿಸ್ಟಮ್ ಅಳವಡಿಸಿದ್ದು, ನೈಋತ್ಯ ವಲಯದ ನಿಲ್ದಾಣದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಭದ್ರತೆ ನೀಡಲು ಈ ಯೋಜನೆ ಜಾರಿಗೊಳಿಸಿದೆ.
ಓದಿ: ಇಂದೂ ಸಹ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ.. ಜನಸಾಮಾನ್ಯನ ಸ್ಥಿತಿ ದುಸ್ತರ!
ವಿಡಿಯೋ ಸರ್ವಿಲೆನ್ಸ್ ಸಿಸ್ಟಮ್‌ನ ಪ್ರಯಾಣಿಕರ ಕಾಯುವ ಸ್ಥಳ, ಟಿಕೆಟ್ ವಿತರಣೆ ಸ್ಥಳ, ಪಾದಚಾರಿ ಮೇಲು ಸೇತುವೆ, ಪಾರ್ಕಿಂಗ್ ಹಾಗೂ ಬುಕಿಂಗ್ ಸ್ಥಳದಲ್ಲಿ ವ್ಯವಸ್ಥೆ ಮಾಡಲಾಗಿದೆ. ದೇಶದ 983 ನಿಲ್ದಾಣದಲ್ಲಿ ಹಾಗೂ ನೈಋತ್ಯ ರೈಲ್ವೆಯ 11 ನಿಲ್ದಾಣದಲ್ಲಿ ವಿಡಿಯೋ ಸರ್ವಿಲೆನ್ಸ್ ಸಿಸ್ಟಮ್ ಅಳವಡಿಕೆಗೆ ರೈಲ್ವೆ ಸಚಿವಾಲಯ ಅನುಮೋದನೆ ನೀಡಿದೆ. 4ಕೆ ರೆಸ್ಯೂಲೇಶನ್ ಸಾಮರ್ಥ್ಯದ ಹೆಚ್ಡಿ ಕ್ಯಾಮೆರಾಗಳನ್ನು ಹೊಂದಿರುವ ಸಿಸ್ಟಮ್ ನಿಲ್ದಾಣದಲ್ಲಿನ ಚಲನವಲನಗಳನ್ನು ರೆಕಾರ್ಡ್ ಮಾಡುವ ಸಾಮರ್ಥ್ಯ ಹೊಂದಿದೆ.