ಧಾರವಾಡ: ಇಲ್ಲಿನ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕಳೆದ ನಾಲ್ಕು ದಿನಗಳ ಹಿಂದೆಯಷ್ಟೇ ಗುತ್ತಿಗೆ ಆಧಾರದ ಮೇಲೆ 52 ಜನರನ್ನ ನೇಮಕ ಮಾಡಿಕೊಳ್ಳಲು ಹಿಂದಿನ ಕುಲಪತಿಗಳು ಆದೇಶ ಮಾಡಿದ್ದರು. ಆದರೆ ಈ ಆದೇಶ ಬಂದ ಮೇಲೆ ಹಲವರು ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪ ಮಾಡಿದ್ದರು.
ಈ ಹಿನ್ನೆಲೆ ಗುತ್ತಿಗೆ ನೌಕರಿಗಾಗಿ ಅರ್ಜಿ ಸಲ್ಲಿಸಿದ್ದವರು ಕರ್ನಾಟಕ ವಿವಿ ಕುಲಪತಿ ಹಾಗೂ ಕುಲ ಸಚಿವರನ್ನು ಭೇಟಿ ಮಾಡಿ ತಮ್ಮ ಅಳಲನ್ನ ತೋಡಿಕೊಂಡಿದ್ದಾರೆ. ಇನ್ನು ಈ ನೇಮಕಾತಿ ವೇಳೆ 52 ಜನರ ಬಳಿ ಹಣ ಪಡೆದು ತಮಗೆ ಬೇಕಾದವರಿಗೆ ನೇಮಕ ಮಾಡಿಕೊಳ್ಳಲಾಗಿದೆ ಎಂದು ಕೆಲ ಅರ್ಜಿದಾರರು ಆರೋಪ ಮಾಡಿದ್ದಾರೆ.
ಆದ್ರೆ ಈ ಬಗ್ಗೆ ಮಾತನಾಡಿದ ಪ್ರಭಾರ ಕುಲಪತಿ ಎಸ್.ಎ.ಶಿರಾಳಶೆಟ್ಟಿ, ನೇಮಕಾತಿಗಳನ್ನು ರದ್ದು ಮಾಡುವುದಾಗಿ ಹೇಳಿದ್ದಾರೆ. ಇನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಆದವರನ್ನ ಕೂಡಾ ಹಿಂದಕ್ಕೆ ತೆಗೆದುಕೊಳ್ಳುವ ಆದೇಶ ನೀಡುವುದಾಗಿ ಪ್ರಭಾರಿ ಕುಲಪತಿ ಹೇಳಿದ್ದಾರೆ.
ಇನ್ನು ಕವಿವಿಯಲ್ಲಿ ಗುತ್ತಿಗೆ ಕೆಲಸ ಮಾಡುತಿದ್ದ ಕುಟುಂಬಗಳಿಗೆ ಕೂಡಾ ಕೆಲಸ ನೀಡಬೇಕು ಎಂದು ಕೆಲವರು ಅರ್ಜಿ ಸಲ್ಲಿಸಿದ್ರು. ಆದ್ರೆ ಅವರಿಗೂ ಕೂಡಾ ಕೆಲಸ ನೀಡುತ್ತಿಲ್ಲ ಎಂದು ಆರೋಪ ಮಾಡಿದ್ದಾರೆ.