ಹುಬ್ಬಳ್ಳಿ: ಸಂತ ಹಜರತ್ ಖ್ವಾಜಾ ಗರೀಬ ನವಾಜ ಅವರ ಕುರಿತು ಧರ್ಮನಿಂದನೆ ಹಾಗೂ ಅವಹೇಳನಕಾರಿ ಹೇಳಿಕೆ ನೀಡಿರುವ ಖಾಸಗಿ ಸುದ್ದಿ ವಾಹಿನಿಯ ನಿರೂಪಕನ ವಿರುದ್ಧ ಕ್ರಮಕ್ಕೆ ವಿವಿಧ ಸಂಘಗಳು ಆಗ್ರಹಿಸವೆ.
ಈ ಕುರಿತಂತೆ ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ, ಪಂಗಡಗಳ ಪೌರ ಕಾರ್ಮಿಕರ ಮತ್ತು ನೌಕರರ ಸಂಘದ ಸದಸ್ಯರು ಈ ರೀತಿ ಅವಹೇಳನಕಾರಿ ಹೇಳಿಕೆ ನೀಡಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ತಹಶೀಲ್ದಾರರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಡಾ.ವಿಜಯ ಗುಂಟ್ರಾಳ, ಬಾಬಾಜಾನ್ ಮುಧೋಳ, ಫಾರುಕು ಅಬೂಬನವರ, ಇಮ್ತಿಯಾಜ್ ಬೇಳಿವಸಾರ, ಫರೀದ್ ಬೆಂಗಳೂರಿ, ಆಶಮ ಮಜಾನದಾರ, ಇಲಿಯಾಸ್ ಮನಿಯಾರ್, ಅಶ್ಪಾಕ್ ಗುಳೇದಗುಡ್ಡ ಸೇರಿದಂತೆ ಮುಂತಾದವರು ಇದ್ದರು.