ಧಾರವಾಡ: ಉತ್ತರಾಖಂಡದ ನಿವಾಸಿ ಓಂಕಾರ್ ಸಿಂಗ್ ಎಂಬುವರು 'ಇವಿಎಂ ಹಠಾವೋ ದೇಶ್ ಬಚಾವೋ’ ಎಂಬ ಆಂದೋಲನವನ್ನು ಕೈಗೊಂಡಿದ್ದಾರೆ. ಸುಮಾರು 90ದಿನಗಳಿಂದ 7000 ಕಿ.ಮೀವರೆಗೆ ಪಾದಯಾತ್ರೆ ಮೂಲಕ ವಿವಿಧ ರಾಜ್ಯಗಳಲ್ಲಿ ಜಾಗೃತಿ ಜಾಥಾ ನಡೆಸುತ್ತಿದ್ದು, ಇಂದು ನಗರಕ್ಕೆ ಆಗಮಿಸಿದರು.
ನಗರಕ್ಕೆ ಆಗಮಿಸಿದ ಓಂಕಾರ್ ಅವರನ್ನು ಕಾಂಗ್ರೆಸ್ ಕಾರ್ಯಕರ್ತರು ಹೂಮಾಲೆ ಹಾಕುವ ಮೂಲಕ ಬರಮಾಡಿಕೊಂಡರು. ಇವರು ಉತ್ತರಾಖಂಡದಿಂದ ಸುಮಾರು 90 ದಿನಗಳಿಂದ ಪಾದಯಾತ್ರೆ ನಡೆಸುತ್ತಿದ್ದು, ಉತ್ತರಪ್ರದೇಶ, ದೆಹಲಿ, ಹರಿಯಾಣ, ರಾಜಸ್ತಾನ, ಗುಜರಾತ್, ಮಹಾರಾಷ್ಟ್ರ ಮಾರ್ಗವಾಗಿ ಈಗ ಕರ್ನಾಟಕದ ಮೂಲಕ ಜಾಗೃತಿ ಜಾಥಾ ಹಮ್ಮಿಕೊಂಡಿದ್ದಾರೆ.
ಈ ವೇಳೆ ಮಾತನಾಡಿದ ಓಂಕಾರ್ ಸಿಂಗ್, ನಾನು ಮುಂದೆ ಚೆನ್ನೈಯಿಂದ ಕೋಲ್ಕತಾವರೆಗೂ ತೆರಳಿ ದೇಶದಲ್ಲಿ ಒಂದೇ ಮಾದರಿಯ ಚುನಾವಣೆ ನಡೆಸಬೇಕು. ಚುನಾವಣೆಗಳಲ್ಲಿ ಇವಿಎಂ ಯಂತ್ರಗಳನ್ನು ಬಳಕೆ ಮಾಡಬಾರದು ಎಂಬ ಸಂದೇಶವನ್ನು ಸಾರುತ್ತಿದ್ದೇನೆ. ಇವಿಎಂ ಹಠಾವೋ ದೇಶ್ ಬಚಾವೋ ಎಂಬ ಆಂದೋಲನದ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದೇನೆ ಎಂದರು.