ಹುಬ್ಬಳ್ಳಿ: ನಗರದ ಬಸವವನ ಆವರಣದಲ್ಲಿರುವ ಡಬ್ಬಿಯೊಂದರಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಸುಮಾರು 40 ವರ್ಷ ಆಸುಪಾಸಿನ ವ್ಯಕ್ತಿಯಾಗಿದ್ದು, ಬಸವವನ ಆವರಣದಲ್ಲಿ ಡಬ್ಬಿಯೊಂದರಲ್ಲಿ ಶವ ಪತ್ತೆಯಾಗಿದೆ. ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಮುಖಕ್ಕೆ ಹುಳುಗಳು ಹತ್ತಿದ್ದು, ಆತ ಭಿಕ್ಷುಕ ಇರಬಹುದು. ಅನಾರೋಗ್ಯದ ಕಾರಣದಿಂದ ಮೃತಪಟ್ಟಿರಬಹದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.