ETV Bharat / state

ರಾಹುಲ್ ಗಾಂಧಿ ತಿಳುವಳಿಕೆ ಇಲ್ಲದ ಹುಡುಗ: ಸಚಿವ ಜೋಶಿ ಲೇವಡಿ

ಪಾಪ ರಾಹುಲ್ ಗಾಂಧಿಗೆ ತಿಳುವಳಿಕೆ ಇಲ್ಲ, ಅವರನ್ನು ಬಿಟ್ಟು ನೀವು ಪ್ರಬುದ್ಧರಾಗಿ ಮಾತನಾಡಿ ಎಂದು ಡಿಕೆಶಿ ಹಾಗೂ ಸಿದ್ದರಾಮಯ್ಯ ಅವರಿಗೆ ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಸಲಹೆ ನೀಡಿದರು.

union minister pralhad joshi teases rahul gandhi
ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಪ್ರತಿಕ್ರಿಯೆ
author img

By

Published : Nov 6, 2021, 3:26 PM IST

ಧಾರವಾಡ: ರಾಹುಲ್ ಗಾಂಧಿಗೆ ತಿಳುವಳಿಕೆ ಇಲ್ಲ, ಮನೆಯಲ್ಲಿ ತಿಳುವಳಿಕೆ ಇಲ್ಲದ ಈ ಹುಡುಗನಿಗೆ ವಿನಾಯ್ತಿ ಕೊಡ್ತಾರೆ‌, ಹಾಗೇ ರಾಹುಲ್ ಗಾಂಧಿ ಬಿಟ್ಟು ನೀವು ಪ್ರಬುದ್ಧರಾಗಿ ಮಾತನಾಡಿ ಎಂದು ಡಿಕೆಶಿ ಹಾಗೂ ಸಿದ್ದರಾಮಯ್ಯ ಅವರಿಗೆ ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಸಲಹೆ ನೀಡಿದರು.

ಧಾರವಾಡದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ‌ ಈಗ ಎಲ್ಲಿದ್ದಾರೆ ಗೊತ್ತಿಲ್ಲ. ಬಹುತೇಕ ಇಟಲಿಗೆ ಹೋಗಿರಬಹುದು. ಹೋಗುವವರೂ ಇರಬಹುದು ಒಂದು ತಿಂಗಳಗಟ್ಟಲೆ ಅವರು ಇಟಲಿಗೆ ಹೋಗುವವರಿದ್ದಾರೆ, ನಾನು ಆ ಬಗ್ಗೆ ಈಗಲೇ ಹೇಳುತ್ತಿರುವೆ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್ ಆಡಳಿತ ರಾಜ್ಯಗಳಲ್ಲಿ ನಯಾಪೈಸೆ ವ್ಯಾಟ್ ಕಡಿಮೆ ಮಾಡಿಲ್ಲ, ಹಾಗಾದ್ರೆ ಚುನಾವಣೆ ಫಲಿತಾಂಶ ಅವರ ಪರ ಬಂತು ಅಂತಾ ಕಡಿಮೆ ಮಾಡೋಲ್ವೇನು? ಎಂದು ಪ್ರಶ್ನಿಸಿದ್ರು. ಕಾಂಗ್ರೆಸ್ ಪಕ್ಷಕ್ಕೆ ಜನ ಹಿತ ಏನು ಅಂತ ಗೊತ್ತಿಲ್ಲ ಜನ ಎಲ್ಲಿ ಹೋಗಿ ಓಟು ಹಾಕಿದ್ರು ಅಂತಾ ಗೊತ್ತಿಲ್ಲ ದೇಶದಲ್ಲಿ 29 ಕಡೆ ಉಪಚುನಾವಣೆ ಇತ್ತು. ಅದರಲ್ಲಿ ಎನ್​​ಡಿಎ ಮೈತ್ರಿಕೂಟ 12 ಸ್ಥಾನಗಳನ್ನು ಗೆದ್ದಿದೆ.

ಹಿಮಾಚಲ ಪ್ರದೇಶ, ರಾಜಸ್ಥಾನ ಎರಡು ಕಡೆ ಕಾಂಗ್ರೆಸ್ ಗೆದ್ದಿದೆ. ಅದು ಬಿಟ್ಟರೆ ಸಮಗ್ರವಾಗಿ ದೇಶಾದ್ಯಂತ ಸ್ಥಾನಮಾನ ಸಿಕ್ಕಿಲ್ಲ ತೆಲಂಗಾಣ, ಕರ್ನಾಟಕ ಈಶಾನ್ಯ ರಾಜ್ಯ ಸೇರಿ ಅನೇಕ ಕಡೆ ನಾವು ಗೆದ್ದಿದ್ದೇವೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನ ಬೆಲೆ ಸತತ ಏರುತ್ತಿದೆ. ಇದನ್ನು ಕಡಿಮೆ ಮಾಡಲು ಪ್ರಯತ್ನ ಮಾಡಿದ್ದೇವೆ ಅಬಕಾರಿ ಸುಂಕ ಕಡಿಮೆ ಮಾಡಿ ಹೊರೆ ಕಡಿಮೆ ಮಾಡಿದ್ದೇವೆ ಎಂದು ಉತ್ತರಿಸಿದರು.

ಉಪಚುನಾವಣೆ ಫಲಿತಾಂಶ ಹಿನ್ನೆಲೆಯಲ್ಲಿ ನಾವು ಅಲ್ಪಸಂಖ್ಯಾತ, ಬಹುಸಂಖ್ಯಾತ ಪರ ಅಲ್ಲ ನಾವು ತುಷ್ಟೀಕರಣ ರಾಜಕಾರಣ ಮಾಡುವುದಿಲ್ಲ, ಕಾಂಗ್ರೆಸ್ ಮುಸ್ಲಿಂ ವೋಟ್ ಬ್ಯಾಂಕ್ ಮಾಡಿದ್ದಾರೆ. ಈ ಮೂಲಕ ತುಷ್ಟೀಕರಣದ ರಾಜಕಾರಣ ಮಾಡಿದ್ದಾರೆ ಎಂದು ಹರಿಹಾಯ್ದರು.

ಉಪಚುನಾವಣೆ ಸಮಯದಲ್ಲಿ ಸರ್ಕಾರ ಹಾಗೂ ಮಂತ್ರಿಗಳು ಅಭ್ಯರ್ಥಿಗಳ ಪರ ನಿಲ್ಲುವುದು ಸಹಜ. ಗುಂಡ್ಲುಪೇಟೆ ಚುನಾವಣೆ ವೇಳೆ ಸಿದ್ಧರಾಮಯ್ಯ ಅಲ್ಲೇ ಟೆಂಟ್ ಹೊಡೆಡಿದ್ರು. ಸಿಎಂ ಆದವರು ಉಪಚುನಾವಣೆ ಗೆಲ್ಲಿಸಲು ನಿಲ್ಲುವುದು ಸಹಜ. ಎರಡೂ ಕ್ಷೇತ್ರಗಳ ಒಟ್ಟು ಮತಗಳ ಸರಾಸರಿ ನೋಡಿದರೆ 53 ರಷ್ಟು ಮತ ಬಿಜೆಪಿಗೆ ಬಿದ್ದಿವೆ. ಡಿಪಾಸಿಟ್ ಕಳೆದುಕೊಂಡಿದ್ದರೆ ರೂಟ್ ಔಟ್, ನಮಗೂ 76 ಸಾವಿರ ವೋಟು ಹಾಕಿದ್ದಾರೆ ಎಂದರು. ಹಾನಗಲ್‌ನಲ್ಲಿ ಅವರಿಗೆ 4 ಸಾವಿರ ಹೆಚ್ಚು ಬಿದ್ದಿವೆ. ಸಿಂದಗಿಯಲ್ಲಿ ಅವರ ಸ್ಥಿತಿ ಏನಾಗಿದೆ, 30 ಸಾವಿರಕ್ಕೂ ಹೆಚ್ಚು ಮತಗಳಿಂದ ಸೋತಿದ್ದಾರೆ. ಸಿದ್ದರಾಮಯ್ಯ ಅಲ್ಲೇ ಟೆಂಟ್ ಹೊಡೆದಿದ್ರು. ಒಂದು ಗೆದ್ದ ನಂತರ ನಾವು ಬೀಗಬಾರದು ಸೋತ ನಂತರ ಧೃತಿಗೆಡಬಾರದು ಎಂದು ಹಾನಗಲ್ ಸೋಲನ್ನು ಸಮರ್ಥನೆ ಮಾಡಿಕೊಂಡರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.