ETV Bharat / state

ಸ್ವಾಮಿಗಳು ಹಾಗೂ ರಾಜಕಾರಣಿಗಳ ನಡುವೆ ಅಪವಿತ್ರ ಮೈತ್ರಿ: ಎಸ್​ಆರ್​ ಹಿರೇಮಠ ಕಿಡಿ - ರಾಜಕೀಯದಲ್ಲಿ ಮಠಾಧೀಶರು ಹಸ್ತಕ್ಷೇಪ

ರಾಜಕೀಯದಲ್ಲಿ ಮಠಾಧೀಶರು ಹಸ್ತಕ್ಷೇಪ ಬಿಡಬೇಕು. ರಾಜಕಾರಣದ ಬಗ್ಗೆ ಕೆಲಸ ಮಾಡಬಾರದು ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್ಆ​ರ್ ಹಿರೇಮಠ ಒತ್ತಾಯಿಸಿದರು.

unholy-alliance-between-swamijis-and-politicians-says-sr-hiremath
ಸ್ವಾಮಿಗಳು ಹಾಗೂ ರಾಜಕಾರಣಿಗಳ ನಡುವೆ ಅಪವಿತ್ರ ಮೈತ್ರಿ: ಎಸ್​ಆರ್​ ಹಿರೇಮಠ ಕಿಡಿ
author img

By

Published : Sep 8, 2022, 9:18 PM IST

Updated : Sep 9, 2022, 3:56 PM IST

ಧಾರವಾಡ: ಕಳೆದ ಎರಡ್ಮೂರು ದಶಕಗಳಿಂದ ಸ್ವಾಮಿಗಳು ಹಾಗೂ ರಾಜಕಾರಣಿಗಳ ನಡುವೆ ಅಪವಿತ್ರ ಮೈತ್ರಿ ಬೆಳೆಯುತ್ತಿದ್ದು, ಇದು ವಿಪರ್ಯಾಸದ ಸಂಗತಿಯಾಗಿದೆ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್ಆ​ರ್ ಹಿರೇಮಠ ಹೇಳಿದರು.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ಇತ್ತೀಚೆಗೆ ಸ್ವಾಮೀಜಿಯೊಬ್ಬರ ವಿರುದ್ಧದ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದರು. ಇದು ಒಳ್ಳೆ ಬೆಳವಣಿಗೆ ಅಲ್ಲ. ಸಂವಿಧಾನ ಮೌಲ್ಯಗಳಿಗೆ ಇದು ಅಪಾಯಕಾರಿ. ಇಂತಹ ಕೇಸುಗಳನ್ನು ತಾರ್ಕಿಕ ಅಂತ್ಯಕ್ಕೆ ಒಯ್ಯಬೇಕು. ಪೊಲೀಸರು ತಡವಾಗಿ ಸ್ವಾಮೀಜಿ ಬಂಧಿಸಿದರು. ಇಂತಹ ಲೋಪಗಳು ಆಗಬಾರದು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸ್ವಾಮಿಗಳು ಹಾಗೂ ರಾಜಕಾರಣಿಗಳ ನಡುವೆ ಅಪವಿತ್ರ ಮೈತ್ರಿ: ಎಸ್​ಆರ್​ ಹಿರೇಮಠ ಕಿಡಿ

ಸ್ವಾಮಿಗಳು ಆಧ್ಯಾತ್ಮದತ್ತ ಗಮನ ಹರಿಸಬೇಕು. 12ನೇ ಶತತಮಾನದಲ್ಲಿ ಮೂಢನಂಬಿಕೆ ಹೋಗಲಾಡಿಸಲು ಸ್ವಾಮೀಜಿಗಳು ಯತ್ನಿಸಿದರು. ಆದರೆ ಇವತ್ತು ಇಂತಹ ಕೆಲಸ ನಡೆದಿದೆ ಎಂದು ಬೇಸರ ಹೊರಹಾಕಿದರು.

ಅಲ್ಲದೇ, ರಾಜಕೀಯದಲ್ಲಿ ಮಠಾಧೀಶರು ಹಸ್ತಕ್ಷೇಪ ಬಿಡಬೇಕು. ರಾಜಕಾರಣದ ಬಗ್ಗೆ ಕೆಲಸ ಮಾಡಬಾರದು. ಬಿಎಸ್​ವೈ ನಾಚಿಕೆ ಇಲ್ಲದೇ ಎಲ್ಲ ಮಠಗಳಿಗೆ ಅನುದಾನ ಕೊಟ್ಟರು. ಇಂಥದ್ದನ್ನು ಯಾರು ಕೂಡ ಮಾಡಬಾರದು ಎಂದು ಕಿಡಿ ಕಾರಿದರು.

ಇದನ್ನೂ ಓದಿ: ಮಠಾಧೀಶರ ಬಗ್ಗೆ ಮಹಿಳೆಯರಿಬ್ಬರ ಆಡಿಯೋ ಸಂಭಾಷಣೆ ವಿಚಾರ.. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು

Last Updated : Sep 9, 2022, 3:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.