ETV Bharat / state

ಸ್ಟ್ಯಾನ್‍ಫೋರ್ಡ್ ವಿಶ್ವವಿದ್ಯಾಲಯದ ಅಗ್ರಮಾನ್ಯ ವಿಜ್ಞಾನಿಗಳ ಪಟ್ಟಿಯಲ್ಲಿ ಧಾರವಾಡದ ಇಬ್ಬರು ವಿಜ್ಞಾನಿಗಳಿಗೆ ಸ್ಥಾನ - ವಿಜ್ಞಾನಿ ಡಾ ಅಮರನಾಥ ಹೆಗಡೆ

ಅಮೆರಿಕಾದ ಪ್ರತಿಷ್ಠಿತ ಸ್ಟ್ಯಾನ್‍ಫೋರ್ಡ್​ ವಿಶ್ವವಿದ್ಯಾನಿಲಯ ವಿಶ್ವದ ಉನ್ನತ ವಿಜ್ಞಾನಿಗಳ ಕುರಿತು ಬಿಡುಗಡೆ ಮಾಡಿರುವ ವಿಶ್ವದ ಟಾಪ್ ವಿಜ್ಞಾನಿಗಳ ಪಟ್ಟಿಯಲ್ಲಿ ಧಾರವಾಡದ ಇಬ್ಬರು ವಿಜ್ಞಾನಿಗಳು ಆಯ್ಕೆಯಾಗಿದ್ದಾರೆ.

ಡಾ. ಎಸ್. ಬಸವರಾಜಪ್ಪ, ಡಾ. ಅಮರನಾಥ ಹೆಗಡೆ
ಡಾ. ಎಸ್. ಬಸವರಾಜಪ್ಪ, ಡಾ. ಅಮರನಾಥ ಹೆಗಡೆ
author img

By ETV Bharat Karnataka Team

Published : Oct 13, 2023, 9:34 AM IST

ಧಾರವಾಡ: ವಿಶ್ವದ ಉನ್ನತ ವಿಜ್ಞಾನಿಗಳ ಕುರಿತು ಅಮೆರಿಕಾದ ಪ್ರತಿಷ್ಠಿತ ಸ್ಟ್ಯಾನ್‍ಫೋರ್ಡ್​ ವಿಶ್ವವಿದ್ಯಾನಿಲಯ ಬಿಡುಗಡೆ ಮಾಡಿರುವ ವಿಶ್ವದ ಟಾಪ್ ವಿಜ್ಞಾನಿಗಳ ಪಟ್ಟಿಯಲ್ಲಿ ಧಾರವಾಡ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ)ಯ ವಿಜ್ಞಾನಿಗಳಿಬ್ಬರು ಸ್ಥಾನ ಪಡೆದುಕೊಂಡಿದ್ದಾರೆ.

ಡಾ. ಎಸ್​. ಬಸವರಾಜಪ್ಪ ಮತ್ತು ಡಾ. ಅಮರನಾಥ ಹೆಗಡೆ ಅವರು ಸ್ಥಾನಗಿಟ್ಟಿಸಿಕೊಂಡಿದ್ದು, ಅವರ ಮೌಲ್ಯಿಕ ಸಂಶೋಧನೆಗಳ ಸಾಧನೆಯಿಂದ ಧಾರವಾಡ ಐಐಟಿಗೆ ಕೀರ್ತಿ ಬಂದಿದ್ದು, ಅವರನ್ನು ಧಾರವಾಡ ಐಐಟಿಯ ಎಲ್ಲ ಸಿಬ್ಬಂದಿಗಳು ಅಭಿನಂದಿಸಿದ್ದಾರೆ. ಸ್ಟ್ಯಾನ್‍ಫೋರ್ಡ್ ವಿಶ್ವವಿದ್ಯಾನಿಲಯ ಮತ್ತು ಎಲ್ಸೆವಿಯ ಪಬ್ಲಿಕೇಶನ್‍ನ ಸಹಯೋಗದೊಂದಿಗೆ ವಿಶ್ವದ ಅಗ್ರ ಶೇ.2 ರಷ್ಟು ವಿಜ್ಞಾನಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.

ಈ ಶ್ರೇಯಾಂಕಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುಣಮಟ್ಟದ ಸಂಶೋಧನೆ, ಸಂಶೋಧನಾ ವರದಿ, ಸಂಶೋಧನಾ ಉಲ್ಲೇಖಗಳು, ಲೇಖನಗಳನ್ನು ಒಳಗೊಂಡ ಎಚ್ - ಇಂಡೆಕ್ಸ್, ಐ-ಟೆನ್ ಇಂಡೆಕ್ಸ್ ಸೇರಿದಂತೆ ವಿವಿಧ ಮಾನದಂಡಗಳನ್ನು ಪರಿಗಣಿಸಿ ಮತ್ತು ಇತರ ಸಂಯೋಜಿತ ಗ್ರಂಥಮಾಪಕ ಅಂಕಿ - ಸಂಖ್ಯೆಗಳ ಮಾಹಿತಿಯನ್ನು ಆಧರಿಸಿ ಸಿದ್ಧಪಡಿಸಲಾಗಿದೆ. ಇಂತಹ ಅಗ್ರಗಣ್ಯ ವಿಜ್ಞಾನಿಗಳ ಶ್ರೇಯಾಂಕ ಪಟ್ಟಿಯನ್ನು ಬಿಡುಗಡೆ ಮಾಡುವ ಪರಿಪಾಠ 2018 ರಿಂದ ಪ್ರಾರಂಭವಾಗಿದೆ.

ಡಾ. ಎಸ್. ಬಸವರಾಜಪ್ಪ: ಡಾ. ಎಸ್. ಬಸವರಾಜಪ್ಪ ಅವರು ಐಐಟಿ ಧಾರವಾಡದ ರಿಜಿಸ್ಟ್ರಾರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಲ್ಲಿಯವರೆಗೆ ಅವರು 129 ಸಂಶೋಧನ ಲೇಖನಗಳನ್ನು ಪ್ರಕಟಿಸಿದ್ದಾರೆ. 2023ರ ಸ್ಟ್ಯಾನ್‍ಫೋರ್ಡ್ ವಿಶ್ವವಿದ್ಯಾನಿಲಯದ ಅಗ್ರ ವಿಜ್ಞಾನಿಗಳಲ್ಲಿ ವಾರ್ಷಿಕ ಶ್ರೇಯಾಂಕದೊಂದಿಗೆ ವೃತ್ತಿ ಜೀವನದ ಸಾಧನೆಯಲ್ಲಿ ಶ್ರೇಯಾಂಕವನ್ನು ಪಡೆದಿರುವುದು ಗಮನಾರ್ಹವಾಗಿದೆ. ಡಾ.ಬಸವರಾಜಪ್ಪ ಅವರದು ವಸ್ತುಗಳು, ಯಾಂತ್ರಿಕ ಮತ್ತು ಸಾರಿಗೆ ಎಂಜಿನಿಯರಿಂಗ್ ವಿಷಯಗಳ ಸಂಶೋಧನಾ ಕ್ಷೇತ್ರಗಳಾಗಿವೆ. ಈ ಹಿಂದೆಯೂ ಕೂಡ 2020 ಮತ್ತು 2021 ನೇ ಸಾಲಿನಲ್ಲಿ ಬಿಡುಗಡೆಯಾದ ಪಟ್ಟಿಯಲ್ಲಿ ಅವರು ಸ್ಥಾನ ಪಡೆದಿದ್ದರು.

ಡಾ. ಅಮರನಾಥ ಹೆಗಡೆ: ಡಾ. ಅಮರನಾಥ ಹೆಗಡೆ ಧಾರವಾಡ ಐಐಟಿಯ ಸಿವಿಲ್ ಮತ್ತು ಇನ್ಫಾಸ್ಟ್ರಕ್ಚರ್ ಇಂಜಿನಿಯರಿಂಗ್ ವಿಭಾಗದಲ್ಲಿ ಸಹ ಪ್ರಾಧ್ಯಾಪಕರಾಗಿದ್ದರೆ. ಇಲ್ಲಿಯವರೆಗೆ ಅವರು 46 ಸಂಶೋಧನೆ, ಲೇಖನಗಳನ್ನು ಪ್ರಕಟಿಸಿದ್ದಾರೆ. ಪ್ರಸ್ತುತ ವರ್ಷದ ಸ್ಟ್ಯಾನ್‍ಫೋರ್ಡ್ ವಿಶ್ವವಿದ್ಯಾಲಯದ ಅಗ್ರ ವಿಜ್ಞಾನಿಗಳ ಪಟ್ಟಿಯಲ್ಲಿ ಶ್ರೇಯಾಂಕ ಪಡೆದಿದ್ದಾರೆ. ಜಿಯೋಟೆಕ್ನಿಕಲ್ ಇಂಜಿನಿಯರಿಂಗ್, ಜಿಯೋಸಿಂಥೆಟಿಕ್ ಮತ್ತು ಗ್ರೌಂಡ್ ಇಂಪ್ರೂಮೆಂಟ್ಸ್, ಕಾಂಪ್ಯೂಟೇಶನಲ್ಲಿ ಟೆಕ್ನಿಕ್ಸ್ ವಿಷಯಗಳು ಇವರ ಅಧ್ಯಯನ ಆಸಕ್ತಿಯ ಕ್ಷೇತ್ರಗಳಾಗಿವೆ.

ಐಐಟಿ ಧಾರವಾಡದ ನಿರ್ದೇಶಕ ಪ್ರೊ.ವೆಂಕಪ್ಪಯ್ಯ ದೇಸಾಯಿ ಮತ್ತು ವಿವಿಧ ವಿಭಾಗಗಳ ಡೀನ್‍ ಗಳು, ಅಧ್ಯಾಪಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಈ ಇಬ್ಬರೂ ಸಂಶೋಧಕರನ್ನು ಧಾರವಾಡ ಐಐಟಿಗೆ ಕೀರ್ತಿ ತಂದ ಸಾಧನೆಗಾಗಿ ಅಭಿನಂದಿಸಿದ್ದಾರೆ.

ಇದನ್ನೂ ಓದಿ: ಕೃಷಿ ವಿವಿ ಸಹಾಯಕ ಪ್ರಾಧ್ಯಾಪಕ ಇಸ್ರೇಲ್​ನಲ್ಲಿ ಸೇಫ್, ಶೀಘ್ರವೇ ವಾಪಸ್​: ಕುಲಪತಿ ಡಾ.ಪಿ.ಎಲ್.ಪಾಟೀಲ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.