ETV Bharat / state

ಭಾರಿ ಮಳೆ, ಪ್ರವಾಹ : ನವಲಗುಂದದ ಬೆಣ್ಣೆ ಹಳ್ಳದಲ್ಲಿ ಸಿಲುಕಿದ್ದ ಇಬ್ಬರ ರಕ್ಷಣೆ - ಧಾರವಾಡ ಮಳೆ

ನವಲಗುಂದದ ಬೆಣ್ಣೆ ಹಳ್ಳದಲ್ಲಿ ಸಿಲುಕಿಕೊಂಡಿದ್ದ ಇಬ್ಬರನ್ನು ರಕ್ಷಣೆ ಮಾಡಲಾಗಿದೆ.

Two persons rescued
ಬೆಣ್ಣೆ ಹಳ್ಳದಲ್ಲಿ ಸಿಲುಕಿದ್ದವರನ್ನು ರಕ್ಷಣೆ ಮಾಡಲಾಯಿತು
author img

By

Published : Jul 25, 2021, 1:19 PM IST

ಹುಬ್ಬಳ್ಳಿ : ಧಾರವಾಡದ ಜಿಲ್ಲೆ ನವಲಗುಂದ ತಾಲೂಕಿನ ಕೊಂಗವಾಡ ಗ್ರಾಮದ ಬೆಣ್ಣೆ ಹಳ್ಳದಲ್ಲಿ ಸಿಲುಕಿಕೊಂಡಿದ್ದ ಇಬ್ಬರನ್ನು ತಹಶೀಲ್ದಾರ್ ನೇತೃತ್ವದ ತಂಡ ರಕ್ಷಣೆ ಮಾಡಿದೆ. ಶನಿವಾರ ತಡರಾತ್ರಿ, ಗ್ರಾಮದ ದೇಸಾಯಿ ಸಂಗಯ್ಯ ಜವಳಿ (30) ಮತ್ತು ಶರಣಯ್ಯ ಸಂಗಯ್ಯ ಜವಳಿ (40) ಬೆಣ್ಣೆ ಹಳ್ಳದಲ್ಲಿ ಸಿಲುಕಿಕೊಂಡಿದ್ದರು.

ಬೆಣ್ಣೆ ಹಳ್ಳದಲ್ಲಿ ಸಿಲುಕಿದ್ದವರನ್ನು ರಕ್ಷಣೆ ಮಾಡಲಾಯಿತು

ಓದಿ : ತುಂಗಭದ್ರಾ ಆರ್ಭಟಕ್ಕೆ ನಲುಗಿದ ದಾವಣಗೆರೆ ಜಿಲ್ಲಾ ಜನತೆ

ಈ ಬಗ್ಗೆ ಮಾಹಿತಿ ಪಡೆದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ, ನವಲಗುಂದ ತಹಶೀಲ್ದಾರ್ ನವೀನ ಹುಲ್ಲೂರ ಹಾಗೂ ಸಿಪಿಐ ಚಂದ್ರಶೇಖರ ಮಠಪತಿ ನೇತೃತ್ವದಲ್ಲಿ ರಕ್ಷಣಾ ಕಾರ್ಯಾಚರಣೆ ಮಾಡಿದ್ದಾರೆ. ಸಂಕಷ್ಟಕ್ಕೆ ಸಿಲುಕಿದ್ದವರನ್ನು ಟ್ಯೂಬ್​ ಬೋಟ್ ಮೂಲಕ ರಕ್ಷಿಸಿ ಕರೆತರಲಾಗಿದೆ. ​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.