ಧಾರವಾಡ: ನಗರದ ಕಮಲಾಪುರ ಹೊರವಲಯದಲ್ಲಿ ಹಿಂದಿನ ರಾತ್ರಿ ರಿಯಲ್ ಎಸ್ಟೇಟ್ ಉದ್ಯಮಿ ಸೇರಿ ಇಬ್ಬರನ್ನು ಭೀಕರ ಹತ್ಯೆ ಮಾಡಿ ಪರಾರಿಯಾಗಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಧಾರವಾಡ ವಿದ್ಯಾಗಿರಿ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಧಾರವಾಡ ಡಬಲ್ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸ್ರು ಬಂಧಿಸಿದ್ದಾರೆ. ಅರ್ಬಾಜ್ ಹಂಚಿನಾಳ, ನದೀಮ್, ರಹಿಮ್ ಸೇರಿ ನಾಲ್ವರು ಬಂಧಿತ ಆರೋಪಿಗಳು. ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆ ಬಳಿಕ ದಾಂಡೇಲಿಗೆ ಹೋಗಿ ಆರೋಪಿಗಳು ತಲೆಮರೆಸಿಕೊಂಡಿದ್ದರು. ದಾಂಡೇಲಿಯಲ್ಲಿ ಪೊಲೀಸರ ಹುಡುಕಾಟಕ್ಕೆ ಜಾಲ ಬೀಸುತ್ತಿದ್ದಂತೆ ಆರೋಪಿಗಳು ಮುಂಡಗೋಡಕ್ಕೆ ಪರಾರಿಯಾಗಿದ್ದರು. ನಂತರ ಮುಂಡಗೋಡದಲ್ಲಿ ಆರೋಪಿಗಳನ್ನು ಪೊಲೀಸರು ಬಂಧಿಸಿ ಧಾರವಾಡಕ್ಕೆ ಕರೆತಂದಿದ್ದಾರೆ.
ಕಳೆದ ರಾತ್ರಿ ಕಮಲಾಪುರದಲ್ಲಿ ರಿಯಲ್ ಎಸ್ಟೆಲ್ ಉದ್ಯಮಿ ಮಹಮ್ಮದ್ ಕುಡಚಿ ಕೊಲೆ ನಡೆದಿತ್ತು. ಇದೇ ವೇಳೆ, ಒಬ್ಬ ವ್ಯಕ್ತಿಗೂ ಏಟು ತಾಗಿ ಓಡಿ ಹೋಗುವಾಗ ದಾರಿ ಮಧ್ಯೆಯೇ ಆರೋಪಿ ಗಣೇಶ ಮೃತಪಟ್ಟಿದ್ದರು. ಕೊಲೆ ಮಾಡಿ ಆರೋಪಿಗಳು ರಾತ್ರಿಯೇ ಪರಾರಿಯಾಗಿದ್ದರು.
ಹಳೇ ವ್ಯಷಮ್ಯವೇ ಹತ್ಯೆಗೆ ಕಾರಣ:ಅರ್ಬಾಜ್ ಹಂಚಿನಾಳ ಈ ಹಿಂದೆ ಕೊಲೆಯಾಗಿರುವ ರೌಡಿ ಶೀಟರ ಫ್ರೂಟ್ ಇರ್ಫಾನ್ ಪುತ್ರರಾಗಿದ್ದಾರೆ. ಫ್ರೂಟ್ ಇರ್ಫಾನ್ ಅವರು ಹಿಂದೆ ಮಹಮ್ಮದ ಕುಡಚಿ ಜೊತೆ ರಿಯಲ್ ಎಸ್ಟೇಟ್ ಮಾಡುತ್ತಿದ್ದರು. ತಂದೆಯ ಕೊಲೆ ಬಳಿಕ ಕುಡಚಿ ಬಳಿ ಅರ್ಬಾಜ್ ಹಣಕ್ಕೆ ಬೇಡಿಕೆ ಇಟ್ಟಿದ್ದನು. ಆಗಾಗ್ಗೆ ಈ ಸಂಬಂಧ ಇಬ್ಬರ ಮಧ್ಯೆ ಜಗಳ ಕೂಡ ನಡೆದಿತ್ತು. ಇದೇ ವೈಷಮ್ಯಕ್ಕೆ ಕುಡಚಿಯನ್ನು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ
ಇದನ್ನೂಓದಿ : ಬಾಡಿಗೆಗೆ ಮನೆ ಕೇಳುವ ನೆಪ: ಮನೆಯೊಡತಿಯ ಸರ ದೋಚಿ ಪರಾರಿಯಾದ ಮಹಿಳೆಯರು
ಭೀಕರ ಹತ್ಯೆ: ರಿಯಲ್ ಎಸ್ಟೇಟ್ ಉದ್ಯಮಿ ಮಹಮ್ಮದ್ ಕುಡಚಿ ರಾತ್ರಿ 10 ರಿಂದ 11 ಗಂಟೆಯ ಸುಮಾರಿಗೆ ಮನೆ ಎದುರು ಕುಳಿತಿದ್ದಾಗ ದುಷ್ಕರ್ಮಿಗಳ ಗುಂಪೊಂದು ಏಕಾಏಕಿ ದಾಳಿ ಮಾಡಿ ಹತ್ಯೆ ಮಾಡಿದ್ದರು. ಈ ಘಟನೆ ನಡೆದ ಕುಡಚಿ ನಿವಾಸದ ಅನತಿ ದೂರದಲ್ಲಿ ಮತ್ತೊಂದು ಅಪರಿಚಿತ ಶವ ಪತ್ತೆಯಾಗಿ ರಕ್ತಸಿಕ್ತ ಸ್ಥಿತಿಯಲ್ಲಿತ್ತು.
ಈತ ಕುಡಚಿ ಮನೆಯಿಂದ ಓಡಿ ಹೋಗಿರುವ ವ್ಯಕ್ತಿ ಶಂಕಿಸಲಾಗಿತ್ತು. ಮಹಮ್ಮದ್ ಕುಡಚಿ ಮೃತದೇಹವು ಅವರ ಮನೆಯ ಬೆಡ್ರೂಂನಲ್ಲಿ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಹುಬ್ಬಳ್ಳಿ - ಧಾರವಾಡ ಪೊಲೀಸ್ ಆಯುಕ್ತ ರಮಣ ಗುಪ್ತಾ ಭೇಟಿ ನೀಡಿ ಪರಿಶೀಲಿಸಿದ್ದರು. ಈ ಸಂದರ್ಭದಲ್ಲಿ ಆರೋಪಿಗಳನ್ನು ಸೆರೆ ಹಿಡಿಯಲು ಬೇರೆ ಬೇರೆ ತನಿಖಾ ತಂಡಗಳನ್ನು ರಚನೆ ಮಾಡಿದ್ದೇವೆ. ತನಿಖೆ ಪ್ರಾಥಮಿಕ ಹಂತದಲ್ಲಿದೆ. ತಕ್ಷಣ ಯಾವುದೇ ಮಾಹಿತಿ ಸಿಕ್ಕಿಲ್ಲ. ರಾತ್ರಿ 10:30 ರಿಂದ 11 ಗಂಟೆ ನಡುವೆ ಕೊಲೆ ನಡೆದಿದೆ. ತನಿಖೆ ಕೈಗೊಂಡಿದ್ದೇವೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದರು.
ಧಾರವಾಡ ವಿದ್ಯಾನಗರ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಶೇಷ ತಂಡ ರಚಿಸಿ ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದರು.
ಇದನ್ನೂಓದಿ:ಮದ್ಯಕ್ಕೆ ಹಣ ನೀಡದ ಮಗನ ಕೊಂದ ತಂದೆ: ವಿದೇಶದಿಂದ ಸೆಲ್ಫಿ ವಿಡಿಯೋ ಮೂಲಕ ತಾಯಿ ಕಣ್ಣೀರು