ಧಾರವಾಡ : ಲಾಕ್ಡೌನ್ನಿಂದಾಗಿ ಸ್ವಂತ ಊರುಗಳಿಗೆ ತೆರಳಲು ಸಾಧ್ಯವಾಗದೇ ವಲಸೆ ಕಾರ್ಮಿಕರಿಗೆ ಕಲ್ಪಿಸಲಾಗಿದ್ದ ವಸತಿ ನಿಲಯಯದಿಂದ ಇಬ್ಬರು ಕಾರ್ಮಿಕರು ಕಾಣೆಯಾಗಿದ್ದಾರೆ.
ಮಾರ್ಚ್ 30 ರಿಂದ ಸಪ್ತಾಪೂರ ದಲ್ಲಿರುವ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಸ್ಥಾಪಿಸಲಾಗಿರುವ ಆಶ್ರಯತಾಣದಲ್ಲಿದ್ದ ಮಧ್ಯಪ್ರದೇಶದ ಮೊರೇನ ಜಿಲ್ಲೆಯ ಸುಜಾನಗಡಿ ಗ್ರಾಮದ ಸುರೇಂದ್ರ ತಂದೆ ಪಾತಿರಾಮ (24) ಹಾಗೂ ರಾಮವೀರ ತಂದೆ ಕಮಲ್ (23) ಇಬ್ಬರು ಕಾರ್ಮಿಕರು ಕಾಣೆಯಾಗಿದ್ದಾರೆ.
ಈ ಕುರಿತು ಧಾರವಾಡ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಹಿಂದಿ ಭಾಷೆ ಮಾತನಾಡುವ ಈ ವ್ಯಕ್ತಿಗಳು ಎಲ್ಲಿಯಾದರೂ ಕಂಡು ಬಂದಲ್ಲಿ ಅಥವಾ ಏನಾದರೂ ಮಾಹಿತಿ ಲಭ್ಯವಾದಲ್ಲಿ ತಕ್ಷಣ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಂಟ್ರೋಲ್ ರೂಂ. ಅಥವಾ ಧಾರವಾಡ ಉಪನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕೆಂದು ಕೋರಲಾಗಿದೆ.
ಸಂಪರ್ಕಿಸುವ ದೂರವಾಣಿ ಸಂಖ್ಯೆಗಳು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಂಟ್ರೋಲ್ ರೂಂ- 0836-2233555/100, ಉಪನಗರ ಪೊಲೀಸ ಠಾಣೆ ಧಾರವಾಡ – 0836-2233511 / 9480802033, ಪಾಲಕರು – 9480964587 ಎಂದು ಪ್ರಕಟಣೆಯಲ್ಲಿ ತಿಳಿಸಿದೆ