ಹುಬ್ಬಳ್ಳಿ: ನಗರದ ಮುಲ್ಲಾ ಓಣಿಯ ಕೊರೊನಾ ಸೋಂಕಿತನ ಟ್ರಾವೆಲ್ ಹಿಸ್ಟರಿ ಬೆಚ್ಚಿ ಬೀಳಿಸುವಂತಿದೆ. ಪಿ.194 ನ ಅಣ್ಣ P-236 ಇಡೀ ನಗರ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕು ಸುತ್ತಾಡಿದ್ದಾನೆ.
ಮಾ.23ರಂದು ವಾಹನ ಚಾಲಕನ ಸಮೇತ ಯಲ್ಲಾಪುರಕ್ಕೆ ಪ್ರಯಾಣ ಬೆಳೆಸಿ, ಅಲ್ಲಿಂದ ತನ್ನ ಫುಟ್ವೇರ್ ಅಂಗಡಿ ಓಪನ್ ಮಾಡಿದ್ದಾನೆ. ಅಂದೇ ಭಾರತ ಲಾಕ್ ಡೌನ್ ಮೊದಲದಿನವಾದ್ದರಿಂದ ವ್ಯಾಪಾರ ನಡೆಸಿದ್ದ. ವ್ಯಾಪಾರ ಮುಗಿಸಿ LIC ಕಚೇರಿಗೆ ತೆರಳಿ ಪ್ರಿಮಿಯಂ ಕಟ್ಟಿದ್ದಾನೆ. ಅಲ್ಲಿಂದ ರಾತ್ರಿ 8ಗಂಟೆಗೆ ಹುಬ್ಬಳ್ಳಿಗೆ ಪ್ರಯಾಣ ಮಾಡಿದ್ದಾನೆ.
![Travel history](https://etvbharatimages.akamaized.net/etvbharat/prod-images/6782631_443_6782631_1586832473439.png)
ಇನ್ನು ಮಾ.24ರಂದು ಬೆಳಗ್ಗೆ ನಗರದ ವಿವಿಧ ಪ್ರದೇಶಗಳಲ್ಲಿ ಪ್ರಯಾಣ ಮಾಡಿದ್ದಾನೆ. ಹಳೇ ಹುಬ್ಬಳ್ಳಿಯಲ್ಲಿ ದಿನಸಿ, ಹಣ್ಣು, ಕಿರಾಣಿ ಸಾಮಗ್ರಿ ಖರೀದಿಸಿ, ಬಳಿಕ ಇಂಡಿಪಂಪ್, ಕೇಶ್ವಾಪುರ, ದುರ್ಗದಬೈಲ್ ಮಾರ್ಕೆಟ್ ಪ್ರದೇಶದಲ್ಲಿ ವಿವಿಧ ವಸ್ತುಗಳ ಖರೀದಿಗೆ ಸುತ್ತಾಡಿದ್ದಾನೆ. ಹೀಗಾಗಿ ಈತನ ಸಂಪರ್ಕದಲ್ಲಿರುವವರು ಹತ್ತಿರ ಆಸ್ಪತ್ರೆ ಅಥವಾ ಕಿಮ್ಸ್ಗೆ ಭೇಟಿ ನೀಡಿ ಪರೀಕ್ಷೆ ಮಾಡಿಸಿಕೊಳ್ಳಲು ಜಿಲ್ಲಾಡಳಿತ ಮನವಿ ಮಾಡಿದೆ.