ETV Bharat / state

ಸಂಚಾರ ನಿಯಮಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು.. ತಹಶೀಲ್ದಾರ್‌ ಮಾಡ್ಯಾಳ - Hubli Tahsildar Shashidhar Madyaala

31ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಕುಂದಗೋಳ ತಾಲೂಕಿನ ಹರ್ಲಾಪುರದ ಯುವಜನ ಹಾಗೂ ಸಾಂಸ್ಕೃತಿಕ ಅಭಿವೃದ್ಧಿ ಕೇಂದ್ರ ಮತ್ತು ಜನಪದ ಫೌಂಡೇಷನ್ ಕಲಾ ತಂಡಗಳಿಂದ ಬೀದಿನಾಟಕ ಮತ್ತು ಜನಪದ ಗೀತೆಗಳ ಪ್ರದರ್ಶನ ಜರುಗಿದವು.

Traffic rules must be followed by everyone said by Sasidhara Madyala
ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿಯು ಏರ್ಪಡಿಸಿದ್ದ ಜಾಗೃತಿ ಕಾರ್ಯಕ್ರಮ
author img

By

Published : Jan 20, 2020, 6:01 PM IST

ಹುಬ್ಬಳ್ಳಿ: ಮನುಷ್ಯ ಬದುಕಿದ್ದರೆ ಜಗತ್ತನ್ನು ನೋಡಬಲ್ಲ. ಆದರೆ, ಜೀವ ಕಳೆದುಕೊಂಡರೆ ಏನನ್ನೂ ನೋಡಲು ಆಗುವುದಿಲ್ಲ. ಸರಕು ಸಾಗಣೆ ವಾಹನಗಳಲ್ಲಿ ಜನರನ್ನು ಕರೆದೊಯ್ಯುವುದು ಕಾನೂನು ಬಾಹಿರ. ಸಾರ್ವಜನಿಕರು ಸಾರಿಗೆ ಸಂಸ್ಥೆ ವಾಹನಗಳನ್ನೇ ಸಂಚಾರಕ್ಕೆ ಬಳಸಬೇಕು. ಸಂಚಾರ ನಿಯಮಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಹುಬ್ಬಳ್ಳಿ ತಹಶೀಲ್ದಾರ್​ ಶಶಿಧರ್ ಮಾಡ್ಯಾಳ ಹೇಳಿದ್ದಾರೆ.

ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಏರ್ಪಡಿಸಿದ್ದ ಜಾಗೃತಿ ಕಾರ್ಯಕ್ರಮ..

ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಬಳಿ ಇಂದು ಬೆಳಗ್ಗೆ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಏರ್ಪಡಿಸಿದ್ದ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇಂದು ಪ್ರತಿ ಕುಟುಂಬದಲ್ಲಿ ದ್ವಿಚಕ್ರ ವಾಹನಗಳಿವೆ. ನಿತ್ಯ ಹೆಲ್ಮೇಟ್ ಬಳಸುವುದನ್ನು ಕಡ್ಡಾಯವಾಗಿ ರೂಢಿಸಿಕೊಳ್ಳಬೇಕು. ರಸ್ತೆ ದಾಟುವಾಗ, ಬಸ್‌ ಹತ್ತುವಾಗ, ಇಳಿಯುವಾಗ, ವಾಹನ ಚಾಲನೆ ಮಾಡುವಾಗ ಯಾವುದೇ ಅಪಾಯವಿಲ್ಲದಂತೆ ಎಚ್ಚರವಹಿಸಬೇಕು ಎಂದರು.

31ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಕುಂದಗೋಳ ತಾಲೂಕಿನ ಹರ್ಲಾಪುರದ ಯುವಜನ ಹಾಗೂ ಸಾಂಸ್ಕೃತಿಕ ಅಭಿವೃದ್ಧಿ ಕೇಂದ್ರ ಮತ್ತು ಜನಪದ ಫೌಂಡೇಷನ್ ಕಲಾ ತಂಡಗಳಿಂದ ಬೀದಿನಾಟಕ ಮತ್ತು ಜನಪದ ಗೀತೆಗಳ ಪ್ರದರ್ಶನ ಜರುಗಿದವು.

ಹುಬ್ಬಳ್ಳಿ: ಮನುಷ್ಯ ಬದುಕಿದ್ದರೆ ಜಗತ್ತನ್ನು ನೋಡಬಲ್ಲ. ಆದರೆ, ಜೀವ ಕಳೆದುಕೊಂಡರೆ ಏನನ್ನೂ ನೋಡಲು ಆಗುವುದಿಲ್ಲ. ಸರಕು ಸಾಗಣೆ ವಾಹನಗಳಲ್ಲಿ ಜನರನ್ನು ಕರೆದೊಯ್ಯುವುದು ಕಾನೂನು ಬಾಹಿರ. ಸಾರ್ವಜನಿಕರು ಸಾರಿಗೆ ಸಂಸ್ಥೆ ವಾಹನಗಳನ್ನೇ ಸಂಚಾರಕ್ಕೆ ಬಳಸಬೇಕು. ಸಂಚಾರ ನಿಯಮಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಹುಬ್ಬಳ್ಳಿ ತಹಶೀಲ್ದಾರ್​ ಶಶಿಧರ್ ಮಾಡ್ಯಾಳ ಹೇಳಿದ್ದಾರೆ.

ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಏರ್ಪಡಿಸಿದ್ದ ಜಾಗೃತಿ ಕಾರ್ಯಕ್ರಮ..

ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಬಳಿ ಇಂದು ಬೆಳಗ್ಗೆ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಏರ್ಪಡಿಸಿದ್ದ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇಂದು ಪ್ರತಿ ಕುಟುಂಬದಲ್ಲಿ ದ್ವಿಚಕ್ರ ವಾಹನಗಳಿವೆ. ನಿತ್ಯ ಹೆಲ್ಮೇಟ್ ಬಳಸುವುದನ್ನು ಕಡ್ಡಾಯವಾಗಿ ರೂಢಿಸಿಕೊಳ್ಳಬೇಕು. ರಸ್ತೆ ದಾಟುವಾಗ, ಬಸ್‌ ಹತ್ತುವಾಗ, ಇಳಿಯುವಾಗ, ವಾಹನ ಚಾಲನೆ ಮಾಡುವಾಗ ಯಾವುದೇ ಅಪಾಯವಿಲ್ಲದಂತೆ ಎಚ್ಚರವಹಿಸಬೇಕು ಎಂದರು.

31ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಕುಂದಗೋಳ ತಾಲೂಕಿನ ಹರ್ಲಾಪುರದ ಯುವಜನ ಹಾಗೂ ಸಾಂಸ್ಕೃತಿಕ ಅಭಿವೃದ್ಧಿ ಕೇಂದ್ರ ಮತ್ತು ಜನಪದ ಫೌಂಡೇಷನ್ ಕಲಾ ತಂಡಗಳಿಂದ ಬೀದಿನಾಟಕ ಮತ್ತು ಜನಪದ ಗೀತೆಗಳ ಪ್ರದರ್ಶನ ಜರುಗಿದವು.

Intro:ಹುಬ್ಬಳ್ಳಿ -05

ಮನುಷ್ಯ ಬದುಕಿದ್ದರೆ ಜಗತ್ತನ್ನು ನೋಡಬಲ್ಲ,ಆದರೆ ಜೀವ ಕಳೆದುಕೊಂಡರೆ ಏನನ್ನೂ ನೋಡಲು ಆಗುವುದಿಲ್ಲ. ಸರಕು ಸಾಗಣೆ ವಾಹನಗಳಲ್ಲಿ ಜನರನ್ನು ಕರೆದೊಯ್ಯುವುದು ಕಾನೂನು ಬಾಹಿರ, ಸಾರ್ವಜನಿಕ ಸಾರಿಗೆ ವಾಹನಗಳನ್ನೇ ಸಂಚಾರಕ್ಕೆ ಬಳಸಬೇಕು. ಸಂಚಾರ ನಿಯಮಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಹುಬ್ಬಳ್ಳಿ ತಹಶೀಲ್ದಾರ ಶಶಿಧರ ಮಾಡ್ಯಾಳ ಹೇಳಿದರು.

ಹುಬ್ಬಳ್ಳಿ ರೇಲ್ವೆ ನಿಲ್ದಾಣದ ಬಳಿ ಇಂದು ಬೆಳಿಗ್ಗೆ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿಯು ಏರ್ಪಡಿಸಿದ್ದ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು .

ಇಂದು ಪ್ರತಿಯೊಂದು ಕುಂಟಬದಲ್ಲಿ ದ್ವಿ ಚಕ್ರ ವಾಹನಗಳಿವೆ. ದಿನನಿತ್ಯ ಹೆಲ್ಮೆಟ್ ಬಳಸುವದನ್ನು ಕಡ್ಡಾಯವಾಗಿ ರೂಢಿಸಿಕೊಳ್ಳಬೇಕು.
ರಸ್ತೆ ದಾಟುವಾಗ, ಬಸ್‌ ಹತ್ತುವಾಗ, ಇಳಿಯುವಾಗ, ವಾಹನ ಚಾಲನೆ ಮಾಡುವಾಗ ಯಾವುದೇ ಅಪಾಯವಿಲ್ಲದಂತೆ ಎಚ್ಚರವಹಿಸಬೇಕು. ಸುರಕ್ಷತೆ ನಿಯಮ ಪಾಲನೆ ಮೊದಲ ಆದ್ಯತೆಯಾಗಿರಬೇಕು. ಸಂಚಾರ ನಿಯಮಗಳನ್ನು ಅರಿತುಕೊಂಡು ಪಾಲಿಸಬೇಕು ಜೀವನ ,ಪ್ರಾಣ ಅಮೂಲ್ಯವಾದ್ದು ಎಂದು ಹೇಳಿದರು.

31ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಕುಂದಗೋಳ ತಾಲೂಕು ಹರ್ಲಾಪುರದ ಯುವಜನ ಹಾಗೂ ಸಾಂಸ್ಕೃತಿಕ ಅಭಿವೃದ್ಧಿ ಕೇಂದ್ರ ಮತ್ತು ಜನಪದ ಫೌಂಡೇಷನ್ ಕಲಾ ತಂಡಗಳಿಂದ ಬೀದಿನಾಟಕ ಮತ್ತು ಜನಪದ ಗೀತೆಗಳ ಪ್ರದರ್ಶನಗಳು ಜರುಗಿದವು.

ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರ ಪ್ರಕಾಶ ನಾಶಿ,ವಾರ್ತಾ ಇಲಾಖೆಯ ಅಧೀಕ್ಷಕ ವಿನೋದಕುಮಾರ್ ಭಗವತಿ ಮತ್ತಿತರರು ಭಾಗವಹಿಸಿದ್ದರು.Body:H B GaddadConclusion:Etv hubli
ETV Bharat Logo

Copyright © 2025 Ushodaya Enterprises Pvt. Ltd., All Rights Reserved.