ETV Bharat / state

ಹಣಕಾಸಿನ ವ್ಯವಹಾರದ ಬಗ್ಗೆ ಸಿಬಿಐ ಅಧಿಕಾರಿಗಳು ಇಂದು ಯಾವುದೇ ಪ್ರಶ್ನೆ ಕೇಳಿಲ್ಲ: ನಾಗರಾಜ್ ಗೌರಿ

ಹಣಕಾಸಿನ ಬಗ್ಗೆ ಇಂದು ಯಾವುದೇ ಪ್ರಶ್ನೆ ಕೇಳಿಲ್ಲ. ಆದ್ರೆ ಈ ಹಿಂದೆ ವಿಚಾರಣೆಯಲ್ಲಿ ಕೇಳಿದ್ರು. ಅದಕ್ಕೆ ಉತ್ತರ ನೀಡಿದ್ದೇನೆ. ಮಲ್ಲಮ್ಮ ಏನ್ ಹೇಳಿದ್ದಾರೆ ಗೊತ್ತಿಲ್ಲ. ಆಕೆಗೆ ನಾವು ಯಾವುದೇ ಹಣ ನೀಡಿಲ್ಲ ಎಂದು ನಾಗರಾಜ್ ಗೌರಿ ತಿಳಿಸಿದರು.

Nagaraj Gauri
ಕೆಪಿಸಿಸಿ ಕಾರ್ಯದರ್ಶಿ ನಾಗರಾಜ್ ಗೌರಿ
author img

By

Published : Nov 8, 2020, 9:00 PM IST

ಹುಬ್ಬಳ್ಳಿ: ಸಿಬಿಐ ಅಧಿಕಾರಿಗಳು‌ ಕೇಳಿದ ಪ್ರಶ್ನೆಗಳಿಗೆ ನಾನು ಗೊತ್ತಿರುವುದನ್ನು ಹೇಳಿದ್ದೇನೆ. ನಂಗೆ ಇವತ್ತು ಸಿಬಿಐ ಅಧಿಕಾರಿಗಳು ಕೇವಲ ಮಲ್ಲಮ್ಮಳನ್ನ ಪಕ್ಷ ಸೇರ್ಪಡೆ ವಿಚಾರವಾಗಿ ಪ್ರಶ್ನೆ ಮಾಡಿದ್ರು. ಅದಕ್ಕೆ ನಾನು ಉತ್ತರ ನೀಡಿದ್ದೇನೆ ಎಂದು ಕೆಪಿಸಿಸಿ ಕಾರ್ಯದರ್ಶಿ ನಾಗರಾಜ್ ಗೌರಿ ಹೇಳಿದರು.

ವಿಚಾರಣೆ ಬಳಿಕ ಮಾಧ್ಯಮಗಳ ಬಳಿ ಮಾತನಾಡಿದ ಅವರು, ನನ್ನ ಬಳಿ ಸುರೇಶ್ ಗೌಡ ಹಾಗೂ ಶಿವಾನಂದ ಕರಿಗಾರ ಮಲ್ಲಮ್ಮಳನ್ನ ಪಕ್ಷ ಸೇರ್ಪಡೆ ಮಾಡಿಕೊಳ್ಳುವಂತೆ ಹೇಳಿದ್ರು. ಅಲ್ಲದೇ ನನ್ನ ಬಳಿಯೂ ಬಂದ ಮಲ್ಲಮ್ಮ ಕಣ್ಣೀರಿಟ್ಟಿದ್ದಳು. ಆದ್ರೆ ವಿನಯ್ ಕುಲಕರ್ಣಿ ಮಾತ್ರ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಶಿವಾನಂದ ಕರಿಗಾರ ನೇತೃತ್ವದಲ್ಲಿ ಕುರುಬ ಸಮಾಜದ ಮುಖಂಡರೊಂದಿಗೆ ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಿದ್ದಳು. ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸೇರಿದ್ದಳು. ಆವಾಗ ನಾನು ಹುಬ್ಬಳ್ಳಿ ಜಿಲ್ಲಾ ಪಂಚಾಯತ್ ಉಸ್ತುವಾರಿಯಾಗಿದ್ದೆ. ಅದಕ್ಕೆ ಪಕ್ಷ ಸೇರ್ಪಡೆ ಬಗ್ಗೆ ನಾನು ಮಾತುಕತೆ ನಡೆಸಿದ್ದೆ‌. ನಮ್ಮ ಮನೆಯಲ್ಲೆ ವಿನಯ್ ಕುಲಕರ್ಣಿ ಮಾಡಿಸಿದ್ದು ನಿಜ. ಇದನ್ನೆಲ್ಲವನ್ನ ನಾನು ಸಿಬಿಐ ಅಧಿಕಾರಿಗಳಿಗೆ ಉತ್ತರ ನೀಡಿದ್ದೇನೆ.

ವಿನಯ್ ಕುಲಕರ್ಣಿ ಬಂಧನ ರಾಜಕೀಯ ಷಡ್ಯಂತ್ರ..

ವಿನಯ ಕುಲಕರ್ಣಿ ಬಂಧನದ ಹಿಂದೆ ಪ್ರಹ್ಲಾದ್ ಜೋಶಿ ಕೈವಾಡವಿದೆ. ವಿನಯ್ ಕುಲಕರ್ಣಿ ಹುಲಿ, ಅದನ್ನ ಎಷ್ಟು ದಿನ ಬೋನಿನಲ್ಲಿ ಇಡ್ತಾರೆ. ಹೊರಗಡೆ ಬಂದ ಮೇಲೆ ಹುಲಿ ಏನು ಅನ್ನೋದನ್ನ ತೋರಿಸುತ್ತೆ. ಲಿಂಗಾಯತ ನಾಯಕನನ್ನ ವ್ಯವಸ್ಥಿತವಾಗಿ ಮುಗಿಸೋ ಹುನ್ನಾರ ನಡೆದಿದೆ. ಡಿಕೆಶಿಯವರಿಗೂ ಸಿಬಿಐ ಇದೇ ರೀತಿ ಮಾಡಿದೆ. ಅವರು ಇವಾಗ ಕೆಪಿಸಿಸಿ ಅಧ್ಯಕ್ಷ, ಮುಂದೆ ಸಿಎಂ ಸಹ ಆಗ್ತಾರೆ. ನಮ್ಮ ನಾಯಕರು ಕೂಡಾ ಮುಂದೆ ಬೆಳದೆ ಬೆಳೆಯುತ್ತಾರೆ‌ ಎಂದು ಪ್ರಹ್ಲಾದ್ ಜೋಶಿ ವಿರುದ್ದ ನಾಗರಾಜ್ ಗೌರಿ‌ ಕಿಡಿಕಾರಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.