ETV Bharat / state

ಮೂವರು ಸಾಹಿತಿಗಳಿಗೆ 2020-21ನೇ ಸಾಲಿನ ಡಾ.ಬೆಟಗೇರಿ ಕೃಷ್ಣಶರ್ಮಾ ಪ್ರಶಸ್ತಿ ಪ್ರದಾನ

ಆಲೂರು ವೆಂಕಟರಾವ್ ಸಭಾಭನದಲ್ಲಿ ಬೆಳಗಾವಿಯ ಡಾ.ಬೆಟಗೇರಿ ಕೃಷ್ಣಶರ್ಮಾ ಸ್ಮಾರಕ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಹಿತಿ ಡಾ.ಗುರುಲಿಂಗ ಕಾಪಸೆ ಅವರು ಪ್ರಶಸ್ತಿ ಪ್ರದಾನ ಮಾಡಿದ್ದಾರೆ.

three-poets-awarded-dr-betageri-krishnasarma-award
ಬೆಟಗೇರಿ ಕೃಷ್ಣಶರ್ಮಾ ಪ್ರಶಸ್ತಿ ಪ್ರದಾನ
author img

By

Published : Sep 26, 2021, 7:40 PM IST

ಧಾರವಾಡ: 2020-21ನೇ ಸಾಲಿನ ಡಾ. ಬೆಟಗೇರಿ ಕೃಷ್ಣಶರ್ಮಾ ಕಾವ್ಯ, ಕಥೆ ಮತ್ತು ಕಾದಂಬರಿ ಪ್ರಶಸ್ತಿಗಳನ್ನು ಮೂವರು ಹಿರಿಯ ಸಾಹಿತಿಗಳಿಗೆ ಪ್ರದಾನ ಮಾಡಲಾಗಿದೆ.

ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಅವರಿಗೆ ಡಾ. ಬೆಟಗೇರಿ ಕೃಷ್ಣಶರ್ಮಾ ಕಾವ್ಯ ಪ್ರಶಸ್ತಿ, ಡಾ.ಕುಂ.ವೀರಭದ್ರಪ್ಪ ಅವರಿಗೆ ಡಾ.ಬೆಟಗೇರಿ ಕೃಷ್ಣಶರ್ಮಾ ಕಾದಂಬರಿ ಪ್ರಶಸ್ತಿ ಹಾಗೂ ವೈದೇಹಿ ಅವರಿಗೆ ಡಾ.ಬೆಟಗೇರಿ ಕೃಷ್ಣಶರ್ಮಾ ಕಥಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಪ್ರಶಸ್ತಿಯು ತಲಾ 50 ಸಾವಿರ ರೂ. ನಗದು ಹಾಗೂ ಪ್ರಮಾಣ ಪತ್ರ ಒಳಗೊಂಡಿದೆ.

ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಡಾ. ಗುರುಲಿಂಗ ಕಾಪಸೆ ಅವರು, ಈ ಪ್ರಶಸ್ತಿ ಆಯ್ಕೆಯಲ್ಲಿ ಭಾಷೆ, ಪ್ರಾದೇಶಿಕ ಹಾಗೂ ಸಾಮಾಜಿಕ ನ್ಯಾಯವನ್ನು ಪರಿಗಣಿಸಲಾಗಿದೆ. ಪ್ರಶಸ್ತಿ ಪಡೆದ ಮೂವರು ಸಾಹಿತಿಗಳು ಶ್ರೇಷ್ಠರಾಗಿದ್ದಾರೆ. ಈ ಪ್ರತಿಷ್ಠಾನದ ಕಾರ್ಯ ರಾಜ್ಯದ ಇತರ ಪ್ರತಿಷ್ಠಾನಕ್ಕೆ ಮಾದರಿಯಾಗಿದೆ ಎಂದರು.

ಇದನ್ನೂ ಓದಿ: ಭಾರತ್​ ಬಂದ್: ತುಮಕೂರಿನಲ್ಲಿ ವಿವಿಧ ಸಂಘಗಳಿಂದ ಭಿನ್ನ ನಿಲುವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.