ಹುಬ್ಬಳ್ಳಿ: ಕೊರೊನಾ ಎಫೆಕ್ಟ್ನಿಂದಾಗಿ ನಗರದಲ್ಲಿ ಗಣೇಶ ಮೂರ್ತಿ ಖರೀದಿ ಭರಾಟೆ ನೀರಸವಾಗಿದ್ದು, ಸಂಕಷ್ಟದ ನಡುವೆ ಗಣೇಶೋತ್ಸವ ಆಚರಿಸಲು ಜನರು ಹಿಂದೇಟು ಹಾಕಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ವಿಧಿಸಿರುವ ಷರತ್ತುಗಳಿಂದಾಗಿ ಗಣೇಶ ಮಂಡಳಿಗಳಲ್ಲಿ ಗೊಂದಲ ಉಂಟಾಗಿದ್ದು, ಪ್ರತೀ ವರ್ಷ ನೆರವೇರುತ್ತಿದ್ದ ಸಾರ್ವಜನಿಕ ಗಣೇಶೋತ್ಸವ ಈ ಬಾರಿ ಇಲ್ಲದಂತಾಗಿದೆ. ಮನೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುವವರೂ ಸಹ ಈ ಬಾರಿ ಅದ್ಧೂರಿ ಆಚರೆಣೆಗೆ ಬ್ರೇಕ್ ಹಾಕಿದ್ದಾರೆ.
ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಸ್ಥಾಪನೆಗೆ ಜನರಲ್ಲಿ ಉತ್ಸಾಹ ಕಡಿಮೆಯಾಗಿದ್ದು, ದುರ್ಗದ ಬೈಲ್, ಜನತಾ ಬಜಾರ್ ಮಾರಯಕಟ್ಟೆಗಳು ಬಿಕೋ ಎನ್ನುತ್ತಿವೆ. ಮನೆಯಲ್ಲಿ ಹಬ್ಬ ಆಚರಿಸುವ ಉತ್ಸಾಹದಲ್ಲಿನ ಜನರು ಮಾರುಕಟ್ಟೆಗೆ ಬಂದು ಗಣೇಶ ಮೂರ್ತಿ ಖರೀದಿಸುತ್ತಿದ್ದಾರೆ.