ETV Bharat / state

ಹುಬ್ಬಳ್ಳಿ: ಬೆದರಿಸಿ ಹಣ, ಮೊಬೈಲ್ ಎಗರಿಸುತ್ತಿದ್ದ ಮೂವರು ಅಂದರ್ - Hubli theft case

ಜನರನ್ನು ಬೆದರಿಸಿ ಹಣ ಹಾಗೂ ಮೊಬೈಲ್ ಎಗರಿಸುತ್ತಿದ್ದ ರೋಹಿತ್ ಗೋಪಿ ಜಾಧವ(19), ಪ್ರಕಾಶ ಬಸವರಾಜ ಬೊಮ್ಮನಾಳ(19), ಅಣ್ಣಪ್ಪ ಪಕ್ಕೀರಪ್ಪ ವಡ್ಡರ( 23) ಅವರನ್ನು ಬಂಧಿಸಲಾಗಿದೆ.

3 are arrested
3 are arrested
author img

By

Published : Aug 22, 2020, 12:03 AM IST

ಹುಬ್ಬಳ್ಳಿ: ಜನರನ್ನು ಬೆದರಿಸಿ ಹಣ ಹಾಗೂ ಮೊಬೈಲ್ ಎಗರಿಸುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಉಪನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ರೋಹಿತ್ ಗೋಪಿ ಜಾಧವ(19), ಪ್ರಕಾಶ ಬಸವರಾಜ ಬೊಮ್ಮನಾಳ(19), ಅಣ್ಣಪ್ಪ ಪಕ್ಕೀರಪ್ಪ ವಡ್ಡರ( 23) ಬಂಧಿತ ಆರೋಪಿಗಳು.‌ ಬಂಧಿತರಿಂದ 12,000 ರೂಪಾಯಿ ನಗದು ಹಾಗೂ ಒಂದು ಮೊಬೈಲ್ ಅನ್ನು ಪೊಲೀಸರು ವಶಡಿಸಿಕೊಂಡಿದ್ದಾರೆ.

ಒಂದು ವಾರದ ಹಿಂದೆ ಒಬ್ಬ ವ್ಯಕ್ತಿಗೆ ಹೊಸ ಹೋಲ್ ಸೇಲ್ ಅಂಗಡಿ ತೋರಿಸುತ್ತೇನೆ ಎಂದು ಹೇಳಿ ಆತನನ್ನು ಕರೆದುಕೊಂಡು ಹೋಗಿದ್ದಾರೆ. ಸ್ಟೇರ್ ಕೇಸ್ ಹತ್ತಿರ ಆತನನ್ನು ಇಬ್ಬರು ಹಿಡಿದುಕೊಂಡಿದ್ದು, ಉಳಿದ ಒಬ್ಬ ವ್ಯಕ್ತಿ ಅವರ ಹತ್ತಿರ ಇದ್ದ ನಗದು ಹಣವನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ಪ್ರಕರಣವನ್ನು ಬೆನ್ನು ಹತ್ತಿದ ಪೊಲೀಸರು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರು ಇದೇ ರೀತಿ ಹಲವು ಕೃತ್ಯ ಮಾಡಿದ್ದಾಗಿ ಬಾಯಿಬಿಟ್ಟಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.