ಧಾರವಾಡ : ಮಂಡ್ಯ ಮೂಲದ ಯುವಕನನ್ನು ಮತಾಂತರ ಮಾಡಿ ಬಳಿಕ ಆ ಯುವಕನನ್ನು ಹುಬ್ಬಳ್ಳಿಗೆ ಕರೆ ತಂದು ಯುವತಿಯನ್ನು ಪ್ರೀತಿಯ ಜಾಲದಲ್ಲಿ ಬೀಳಿಸಿ ಅವಳನ್ನು ಮತಾಂತರ ಮಾಡುವ ಪ್ರಕ್ರಿಯೆ ವ್ಯವಸ್ಥಿತವಾಗಿ ಇಸ್ಲಾಮ್ ಕಡೆಯಿಂದಲೇ ನಡೆದಿತ್ತು ಎಂದು ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶ್ರೀಧರ್ ಗಂಗಾಧರ್ ಎಂಬವನು ಇಂದು ಸಲ್ಮಾನ್ ಆಗಿದ್ದಾನೆ. ಅವನಿಗೆ ಇಸ್ಲಾಂನ ಎಲ್ಲ ಪ್ರಕ್ರಿಯೆಗಳನ್ನು ಮಾಡಲಾಗಿದೆ. ಗೋಮಾಂಸ ತಿನ್ನಿಸಿದ್ದಾರೆ. ಶಸ್ತ್ರ ಚಿಕಿತ್ಸೆ ಸಹ ಆಗಿದೆ. ಒತ್ತಾಯದಿಂದ ಇದನ್ನೆಲ್ಲ ಮಾಡಿದ್ದಾರೆ ಎಂದು ಅವನೇ ಹೇಳಿದ್ದಾನೆ.
ಈ ಬಗ್ಗೆ ಕಂಪ್ಲೇಂಟ್ ಕೊಟ್ಟಿದ್ದಾನೆ. 11 ಜನರ ಮೇಲೆ ಪ್ರಕರಣ ದಾಖಲಾಗಿದೆ. ಕೆಲವರ ಬಂಧನವೂ ಆಗಿದೆ. ಅದರಲ್ಲಿ ಕಾಂಗ್ರೆಸ್ ಮಾಜಿ ಕಾರ್ಪೊರೇಟರ್ ಇದ್ದಾರೆ ಎನ್ನುವ ಸಂಗತಿಯೂ ಬಹಿರಂಗವಾಗಿದೆ. ಇಂತಹ ಕೃತ್ಯಗಳಿಗೆ ಕಾಂಗ್ರೆಸ್ ವ್ಯವಸ್ಥಿತವಾಗಿ ಕುಮ್ಮಕ್ಕು ನೀಡುತ್ತಿದೆ ಎಂದು ಹೇಳಿದರು.
ಇನ್ನು ಬನಶಂಕರಿಯ ಮಸೀದಿಯಲ್ಲಿ ಅಂಡರ್ಗ್ರೌಂಡ್ ಇದೆ. ಅಲ್ಲಿ ಇನ್ನು ಹಲವು ಜನರು ಮತಾಂತರಕ್ಕೆ ಒಳಗಾಗುತ್ತಿದ್ದಾರೆ ಎಂದು ಶ್ರೀಧರ್ ಹೇಳಿದ್ದಾನೆ. ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ : ಹಿಂದೂ ಯುವಕನ ಮತಾಂತರ ಪ್ರಕರಣ: ಇಬ್ಬರು ಆರೋಪಿಗಳ ಬಂಧನ