ಧಾರವಾಡ : ಜಲ ಮಂಡಳಿಯ ನಿರ್ಲಕ್ಷ್ಯದಿಂದ ಜಿಲ್ಲೆಯಲ್ಲಿ ನೀರಿನ ಪೈಪ್‌ಲೈನ್ ಒಡೆದು ನೀರು ಪೋಲಾಗುತ್ತಿದೆ. ಕಳೆದ ಹಲವು ದಿನಗಳಿಂದ ದುರಸ್ತಿ ನಡೆದರೂ ನೀರಿನ ಸೋರಿಕೆ ಕಡಿಮೆಯಾಗಿಲ್ಲ.
ನಗರದ ಯಾಲಕ್ಕಿ ಶೆಟ್ಟರ್ ಕಾಲೋನಿಯಲ್ಲಿ ಅಪಾರ ಪ್ರಮಾಣದ ನೀರು ಸೋರಿಕೆಯಾಗುತ್ತಿದೆ. ಕುಡಿಯುವ ನೀರಿನ ಪೈಪ್ ಒಡೆದು ಹೋದರೂ ಜಲ ಮಂಡಳಿ ಅಧಿಕಾರಿಗಳು ಇತ್ತ ಕಡೆ ತಿರುಗಿಯೂ ನೋಡಿಲ್ಲ. ಹಲವು ದಿನಗಳಿಂದ ಕಾಮಗಾರಿ ನಡೆಸಿದ್ದರೂ ಅಲ್ಲಲ್ಲಿ ನೀರು ಪೋಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇಂದು ನಸುಕಿನ ಜಾವ 3 ರಿಂದ ಮತ್ತೊಂದು ಕಡೆ ಪೈಪ್‌ಲೈನ್ ಒಡೆದಿದೆ. ಸುದ್ದಿ ತಿಳಿದರೂ ಜಲ ಮಂಡಳಿ ಸಿಬ್ಬಂದಿ ಸ್ಥಳಕ್ಕೆ ಬಂದಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.