ಹುಬ್ಬಳ್ಳಿ: ಅಪರಿಚಿತ ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿದ್ದ ಇಲಿಯಾಸ್ (44) ಎಂಬಾತ ವ್ಯಕ್ತಿಯಿಂದು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಇದನ್ನೂ ಓದಿ...ಕರ್ತವ್ಯ ನಿರತ ಗ್ರಾಪಂ ಸಹಾಯಕ ಚುನಾವಣಾ ಅಧಿಕಾರಿ ನಿಧನ
ಹಲವು ವರ್ಷಗಳಿಂದ ನಗರದ ಸಿಬಿಟಿ ಬಳಿ ಎಗ್ರೈಸ್ ಅಂಗಡಿ ಇಟ್ಟುಕೊಂಡು ಇಲಿಯಾಸ್ ಜೀವನ ಸಾಗಿಸುತ್ತಿದ್ದ. ಆದರೆ, ಕಾರ್ಪೊರೇಷನ್ನಿಂದ ಚೀಟಿ ತೆಗೆಯುವವರಿಂದ ಹಲ್ಲೆ ನಡೆದಿದೆ ಎಂದು ಮೃತನ ಸಂಬಂಧಿಕರು ಆರೋಪಿಸಿದ್ದಾರೆ.
ಇಲಿಯಾಸ್ ಅವರ ಮೇಲೆ ಡಿ.11ರಂದು ಇಬ್ಬರು ಅಪರಿಚಿತರು ಹಲ್ಲೆ ಮಾಡಿದ್ದರು. ತೀವ್ರವಾಗಿ ಗಾಯಗೊಂಡ ಪರಿಣಾಮ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ಕುರಿತು ಹುಬ್ಬಳ್ಳಿ ಶರಹ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.