ಹುಬ್ಬಳ್ಳಿ: ನಿರಂತರವಾಗಿ ಸುರಿದ ಮಳೆದಿಂದಾಗಿ ನಗರದಲ್ಲಿ 2 ಮನೆಗಳು ಕುಸಿದಿವೆ.
ಇಲ್ಲಿನ ನವಾನಂದ ನಗರದಲ್ಲಿ ಎರಡು ಮನೆಗಳು ಕುಸಿದಿದ್ದು, ಅಪಾರ ಪ್ರಮಾಣದ ವಸ್ತುಗಳ ಜಖಂ ಗೊಂಡಿವೆ. ನಿವಾಸಿಗಳಾದ ಬಿಬಿಜಾನ್ ನರೆಗಲ್, ರಘು ಹೊನ್ನಳ್ಳಿ ಎಂಬುವವರಿಗೆ ಸೇರಿದ್ದ ಮನೆಗಳು ಕುಸಿದಿವೆ. ಮನೆಯಲ್ಲಿದ್ದ ಎಲ್ಲ ವಸ್ತುಗಳು ಜಖಂಗೊಂಡಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ.
ಮನೆ ಬಿದ್ದಿರುವ ವಿಚಾರ ಪಾಲಿಕೆ ಅಧಿಕಾರಿಗಳಿಗೆ ತಿಳಿದಿದ್ದರೂ ಸ್ಥಳಕ್ಕೆ ಆಗಮಿಸಿ ಪರಿಶೀಲನೆಗೆ ಮುಂದಾಗಿಲ್ಲ ಎಂದು ಮನೆಯ ಮಾಲಿಕರು ಆರೋಪಿಸಿದ್ದಾರೆ.