ETV Bharat / state

ಕೇಂದ್ರದ ಮುಕ್ತ ವ್ಯಾಪಾರ ನೀತಿಗೆ ಎಸ್.ಆರ್. ಹಿರೇಮಠ  ವಿರೋಧ - ಸಮಾಜ ಪರಿವರ್ತನ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ

ಕೃಷಿ ವಲಯಕ್ಕೆ ಮತ್ತು ಹೈನುಗಾರಿಕೆ ನಂಬಿ ಜೀವನ ನಡೆಸುತ್ತಿರುವವರಿಗೆ ಅಪಾಯ ತರುವ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಬೇಕೆಂದು ಸಮಾಜ ಪರಿವರ್ತನ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಒತ್ತಾಯ ಮಾಡಿದರು.

ಎಸ್.ಆರ್. ಹಿರೇಮಠ
author img

By

Published : Nov 6, 2019, 11:12 AM IST

ಹುಬ್ಬಳ್ಳಿ: ಮುಕ್ತ ವ್ಯಾಪಾರ ಒಪ್ಪಂದಗಳು ಹಾಗೂ ಭಾರತ ಪ್ರಸ್ತಾಪದಲ್ಲಿರುವ ಆರ್​ಸಿಇಪಿ (ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ) ಒಪ್ಪಂದದಿಂದ ಕೃಷಿ ವಲಯಕ್ಕೆ ಮತ್ತು ಹೈನುಗಾರಿಕೆ ನಂಬಿ ಜೀವನ ನಡೆಸುತ್ತಿರುವವರಿಗೆ ಅಪಾಯ ತರುವ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಬೇಕು ಎಂದು ಸಮಾಜ ಪರಿವರ್ತನ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಒತ್ತಾಯ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಾಜ ಪರಿವರ್ತನ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ .

ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವದ ಬಗ್ಗೆ ಕೇಂದ್ರ ಸರ್ಕಾರ ಪಾರ್ಲಿಮೆಂಟ್​ನಲ್ಲಿ ಸುದೀರ್ಘ ಚರ್ಚೆ ನಡೆಸಬೇಕು. ಅಲ್ಲದೇ ಸಾಮಾನ್ಯ ಜನರಿಗೆ ಹಾಗೂ ಹೈನುಗಾರಿಕೆಯನ್ನೇ ನಂಬಿಕೊಂಡು ಬದುಕುವ ರೈತರಿಗೆ ಅನುಕೂಲವಾಗುವ ಹಾಗೂ ಸಮಾಜದ ಪ್ರತಿಯೊಬ್ಬ ವ್ಯಕ್ತಿಗೆ ಸೌಲಭ್ಯಗಳನ್ನು ಒದಗಿಸುವ ದೃಷ್ಟಿಯಿಂದ ಮಾನವ ಅಭಿವೃದ್ಧಿ ಜೊತೆಗೆ ಪರಿಸರ ಸಂರಕ್ಷಣೆ ಕೆಲಸವನ್ನು ಸರ್ಕಾರ ಮಾಡಬೇಕೆಂದು ಆಗ್ರಹಿಸಿದರು.

ಇನ್ನು ಡಿ.ಕೆ.ಶಿವಕುಮಾರ್​ ಅಕ್ರಮ ಆಸ್ತಿ ಹಾಗೂ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಲುಕಿದ್ದು, ಈ ವಿಚಾರದಲ್ಲಿ ಸರ್ಕಾರ ಸಿಬಿಐ ತನಿಖೆಗೆ ಒಪ್ಪಿಕೊಂಡಿದ್ದು ಸ್ವಾಗತಾರ್ಹ. ಇದರ ಮುಂದಿನ ತನಿಖೆಯನ್ನು ಕ್ರಮಬದ್ಧವಾಗಿ ಮಾಡಬೇಕೆಂದು ಒತ್ತಾಯಿಸಿದರು.

Intro:HubliBody:ಕೇಂದ್ರದ ಮುಕ್ತ ವ್ಯಾಪಾರ ನೀತಿ ಖಂಡನೀಯ : ಹಿರೇಮಠ

ಹುಬ್ಬಳ್ಳಿ:-ಮುಕ್ತ ವ್ಯಾಪಾರ ಒಪ್ಪಂದಗಳು ಹಾಗೂ ಭಾರತ ಪ್ರಸ್ತಾಪದಲ್ಲಿರುವ ಆರ್ ಸಿಇಪಿ (ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ) ಒಪ್ಪಂದದಿಂದ ಕೃಷಿ ವಲಯಕ್ಕೆ ಮತ್ತು ಹೈನುಗಾರಿಕೆ ನಂಬಿ ಜೀವನ ನಡೆಸುತ್ತಿರುವವರಿಗೆ ಅಪಾಯ ತರುವ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಬೇಕೆಂದು ಸಮಾಜ ಪರಿವರ್ತನ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಒತ್ತಾಯ ಮಾಡಿದರು.. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸಕ್ತ ಕೇಂದ್ರ ಸರಕಾರದ ಮುಕ್ತ ವ್ಯಾಪಾರ ಒಪ್ಪಂದವನ್ನು ಸಿಎಫ್ ಡಿ ಉಗ್ರವಾಗಿ ವಿರೋಧಿಸುವುದು. ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವದ ಬಗ್ಗೆ ಕೇಂದ್ರ ಸರ್ಕಾರ ಪಾರ್ಲಿಮೆಂಟ್ ನಲ್ಲಿ ಸುದೀರ್ಘ ಚರ್ಚೆ ನಡೆಸಬೇಕು. ಅಲ್ಲದೇ ಸಾಮಾನ್ಯ ಜನರಿಗೆ ಹಾಗೂ ಹೈನುಗಾರಿಕೆ ನಂಬಿಕೊಂಡಿ ಬದುಕುವ ರೈತರಿಗೆ ಅನುಕೂಲವಾಗುವ ಹಾಗೂ ಸಮಾಜದ ಪ್ರತಿಯೊಬ್ಬ ವ್ಯಕ್ತಿಗೆ ಸೌಲಭ್ಯಗಳನ್ನು ಒದಗಿಸುವ ದೃಷ್ಟಿಯಿಂದ ಮಾನವ ಅಭಿವೃದ್ಧಿ ಜೊತೆಗೆ ಪರಿಸರ ಸಂರಕ್ಷಣೆ ಕೆಲಸವನ್ನು ಸರ್ಕಾರ ಮಾಡಬೇಕೆಂದು ಆಗ್ರಹಿಸಿದರು. ಪರಿಸರ ರಕ್ಷಣೆ ಮಾಡದಿದ್ರೆ, ಕೊಡಗು,ಕೇರಳ,ಉತ್ತರ ಕರ್ನಾಟಕದಲ್ಲಿ ಆದ ಅನಾಹುತ ಗಳು ಬೇರೆ ಕಡೆ ಆಗುವ ಸಾಧ್ಯತೆವಿದೆ.ಹೀಗಾಗಿ ಪರಿಸರ ರಕ್ಷಣೆ ಮಾಡಬೇಕಾಗಿದೆ.ಇನ್ನೂ ಬೆಳೆಕೆರೆ ಬಂದರಿನಲ್ಲಿ ಅದಿರು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯ ಗಾಲಿ ಜನಾರ್ದನ ರೆಡ್ಡಿ ಅವರನ್ನು ಖುಲಾಸೆ ಮಾಡಿರುವುದು ನ್ಯಾಯಕ್ಕೆ ಅಪಚಾರ ಮಾಡಿದಂತಾಗಿದ್ದು,ಇದನ್ನು ಪ್ರಶ್ನಿಸಿ ಸಿ.ಬಿ.ಐ‌ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿತ್ತು.ಇತ್ತಿಚೆಗೆ ವಿಚಾರಣೆಗೆ ಬಂದಿದ್ದು,ಆಗ ನ್ಯಾಯಾಲಯ ಸಿಬಿಐ ಪ್ರಶ್ನೆಯನ್ನು ಎತ್ತಿ ಹಿಡಿದು ಕೆಳ ಕೋರ್ಟಿನ ಆದೇಶವನ್ನು ತಿರಸ್ಕರಿಸಿ ವಿಚಾರಣೆಗೆ ಅನುವು ಮಾಡಿ ಕೊಟ್ಟಿದೆ.ಇದನ್ನು ಜನಾಂದೋಲನಗಳ ಮಹಾಮೈತ್ರಿ, ಸಮಾನ ಮನಸ್ಕ ಸಂಘಟನೆಗಳು ಸ್ವಾಗತಿಸುತ್ತವೆ ಎಂದರು.ಡಿ.ಕೆ.ಶಿವಕುಮಾರ ಅಕ್ರಮ ಆಸ್ತಿ ಹಾಗೂ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಲುಕಿದ್ದು, ಈ ವಿಚಾರದಲ್ಲಿ ಸರ್ಕಾರ ಸಿ.ಬಿ.ಐ ತನಿಖೆಗೆ ಒಪ್ಪಿಕೊಂಡಿದ್ದು ಸ್ವಾಗತಾರ್ಹ,ಡಿಕೆಶಿ ಮಗಳು ಚಿಕ್ಕ ವಯಸ್ಸಿನಲ್ಲಿ ೨೦ ಕೋಟಿ ಸಾಲ ಕೊಟ್ಟಿದ್ದಾಳೆ,ಭ್ರಷ್ಟಾಚಾರ ತಾಂಡವಾಡಿತ್ತಿದೆ. ಅಲ್ಲದೇ ಬ್ರಷ್ಟಾಚಾರ ನಿಯಂತ್ರಣ ಕಾಯ್ದೆ 1988 ಅಡಿಯಲ್ಲಿ ಅಕ್ರಮ ಆಸ್ತಿ ಮಾಡಿದ್ದರು ಎಂಬುದು ಸಾಬೀತಾಗಿದೆ. ಇದರ ಮುಂದಿನ ತನಿಖೆಯನ್ನು ಕ್ರಮಬದ್ದವಾಗಿ ಮಾಡಬೇಕೆಂದು ಆಗ್ರಹಿಸಿದರು.

ಬೈಟ್:-ಎಸ್.ಆರ್.ಹಿರೇಮಠ..(ಸಮಾಜ ಪರಿವರ್ತನ ಸಮುದಾಯದ ಮುಖ್ಯಸ್ಥ. ಹೋರಾಟಗಾರ)

____________________________Conclusion:Yallappa kundagol
ETV Bharat Logo

Copyright © 2025 Ushodaya Enterprises Pvt. Ltd., All Rights Reserved.