ಹುಬ್ಬಳ್ಳಿ: ಯಾರು ಏನೇ ಹೇಳಿದ್ರು ಸಹ ಸಮ್ಮಿಶ್ರ ಸರ್ಕಾರಕ್ಕೆ ಏನೂ ತೊಂದರೆ ಇಲ್ಲ. ಸರ್ಕಾರ ಸ್ಥಿರವಾಗಿದ್ದು, ಇನ್ನೂ ನಾಲ್ಕು ವರ್ಷ ಮುಂದುವರೆಯಲಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ವರ್ಷವೆಲ್ಲಾ ಪಕ್ಷ ಸಂಘಟನೆ ಮಾಡ್ತಾನೆ ಇರ್ತೀವಿ. ಕುಂದಗೋಳಕ್ಕೆ ಹೋಗಲು ಹುಬ್ಬಳ್ಳಿಗೆ ಬಂದಿದ್ದೇನೆ ಎಂದರು. ಇನ್ನು ಮಧ್ಯಂತರ ಚುನಾವಣೆ ಕುರಿತು ಜೆಡಿಎಸ್ ವರಿಷ್ಠ ದೇವೇಗೌಡರು ನೀಡಿರುವ ಹೇಳಿಕೆ ಇದೇ ವೇಳೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.
ಲೋಕಸಭಾ ಚುನಾವಣೆ ವೇಳೆ ಮೈಸೂರು ಕ್ಷೇತ್ರ ನಮಗೆ ಬೇಕು ಅಂದಿದ್ದು ನಿಜ, ಆದರೆ ಒತ್ತಾಯದಿಂದ ಪಡೆದಿರಲಿಲ್ಲ. ತುಮಕೂರು ಕ್ಷೇತ್ರವನ್ನೂ ಕೇಳಿದ್ದು ಜೆಡಿಎಸ್ನವರೇ ಎಂದು ಹೇಳಿದ್ರು. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ದೂರು ಕೊಟ್ಟ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, ಊಹಾಪೋಹಗಳಿಗೆ ಉತ್ತರ ಕೊಡಲ್ಲ. ನಾನು ಹಾಗೂ ರಾಹುಲ್ ಗಾಂಧಿ ಮಾತ್ರ ಮೀಟಿಂಗ್ ಮಾಡಿದ್ದು, ಅವರು ಯಾರಿಗೂ ಏನು ಹೇಳಿಲ್ಲ, ನಾನು ಏನು ಹೇಳಿಲ್ಲ ಅಂತಾ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ರು.
ದೇವೇಗೌಡರು ಈ ರೀತಿ ಹೇಳಿರಬಹುದು, ರಾಹುಲ್ ಗಾಂಧಿ ಹಾಗೇ ಹೇಳಿರಬಹುದು ಎಂಬ ಊಹೆ ಬೇಡ. ನಾನು ಎಲ್ಲಾದ್ರು ಹೀಗೆ ಹೇಳಿದ್ದೀನಾ ಎಂದು ಮಾಧ್ಯಮದವರಿಗೆ ಸಿದ್ದರಾಮಯ್ಯ ಪ್ರಶ್ನಿಸಿದರು. ಕುಮಾರಸ್ವಾಮಿ ಅವರು ಹಿಂದೆಯೂ ಗ್ರಾಮ ವಾಸ್ತವ್ಯ ಮಾಡಿದ್ರು, ಈಗಲೂ ಮಾಡ್ತಾ ಇದ್ದಾರೆ. ಸಮ್ಮಿಶ್ರ ಸರ್ಕಾರಕ್ಕೆ ಇದರಿಂದ ಲಾಭ ಆಗಲಿದೆ ಮಾಜಿ ಸಿಎಂ ಅಭಿಪ್ರಾಯಪಟ್ಟರು.