ETV Bharat / state

ಹೊರ ರಾಷ್ಟ್ರದ ಉದ್ದಿಮೆ, ಬಂಡವಾಳ ರಾಜ್ಯಕ್ಕೆ ತರಲು ಟಾಸ್ಕ್ ಫೋರ್ಸ್ ರಚನೆ: ಶೆಟ್ಟರ್​ - Task force structure

ಕೊರೊನಾದಿಂದಾದ ಮುಗ್ಗರಿಸಿದ ಆರ್ಥಿಕತೆಗೆ ಚೇತರಿಕೆ ತರಲು ರಾಜ್ಯ ಸರ್ಕಾರ ಬದ್ಧವಾಗಿದೆ. ಕೊರೊನೋತ್ತರ ದೇಶದ ಅಭಿವೃದ್ಧಿ ಇನ್ನೂ ಹೆಚ್ಚಾಗಲಿದೆ ಎಂದು ಸಚಿವ ಜಗದೀಶ್ ಶೆಟ್ಟರ್ ಆಶಯ ವ್ಯಕ್ತಪಡಿಸಿದರು.

Task force structure for economic improvement: Jagadish Shettar
ಸಚಿವ ಜಗದೀಶ್ ಶೆಟ್ಟರ್
author img

By

Published : May 12, 2020, 7:27 PM IST

ಹುಬ್ಬಳ್ಳಿ: ಕೋವಿಡ್-19 ಪರಿಣಾಮವಾಗಿ ವಿಶ್ವದ ಹಲವು ರಾಷ್ಟ್ರಗಳು ಚೀನಾದಿಂದ ತಮ್ಮ ಉದ್ದಿಮೆ ಹಾಗೂ ಬಂಡವಾಳವನ್ನು ಹಿಂತೆಗೆಯಲು ಸಿದ್ಧವಾಗಿವೆ. ಇಂತಹ ಹೊರ ರಾಷ್ಟ್ರದ ಉದ್ದಿಮೆಗಳನ್ನು ರಾಜ್ಯಕ್ಕೆ ತರಲು ಸಚಿವ ಸಂಪುಟದಲ್ಲಿ ಚರ್ಚಿಸಿ, ಟಾಸ್ಕ್ ಫೋರ್ಸ್ ರಚನೆ ಮಾಡಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.

ಹುಬ್ಬಳ್ಳಿಯ ನೂತನ ನ್ಯಾಯಾಲಯದ ಆವರಣದಲ್ಲಿ ವಕೀಲರ ಸಂಘದಡಿ ಗೌರವಧನದೊಂದಿಗೆ ಕೆಲಸ ನಿರ್ವಹಿಸುತ್ತಿರುವ ವಿವಿಧ ವಿಭಾಗದ ನೌಕರರಿಗೆ ಎಸ್.ಎಸ್.ಫೌಂಡೇಶನ್ ವತಿಯಿಂದ ಆಹಾರ ಧಾನ್ಯ ವಿತರಸಿ ಅವರು ಮಾತನಾಡಿದರು.

Task force structure for economic improvement: Jagadish Shettar
ಆಹಾರ ಧಾನ್ಯ ವಿತರಿದ ಸಚಿವ ಶೆಟ್ಟರ್

ಹೊರ ರಾಷ್ಟ್ರದಿಂದ ಬರುವ ಬಂಡವಾಳವನ್ನು ರಾಜ್ಯದ ಎರಡನೇ ಹಂತದ ನಗರಗಳಲ್ಲಿ ಹೂಡಿಕೆ ಮಾಡಲಾಗುವುದು ಎಂದು ಅವರು ತಿಳಿಸಿದರು.

41 ದಿನಗಳ ಲಾಕ್​​ಡೌನ್ ಯಶಸ್ವಿಯಾಗಿದೆ. ಅಮೆರಿಕ, ಇಟಲಿ, ಇಂಗ್ಲೆಂಡ್ ಸೇರಿದಂತೆ ಇತರೆ ಯೂರೋಪ್ ರಾಷ್ಟ್ರಗಳಿಗಿಂತ ಕೊರೊನಾ ಹಾವಳಿ ದೇಶದಲ್ಲಿ ನಿಯಂತ್ರಣದಲ್ಲಿದೆ. ಕೊರೊನಾ ಪ್ರಕರಣಗಳನ್ನು ಶೂನ್ಯಕ್ಕೆ ತರವುದು ಸಾಧ್ಯವಿಲ್ಲ. ದೇಶದಲ್ಲಿ ಕೋವಿಡ್ ದಾಳಿಗೆ ತುತ್ತಾದ 50 ಜನರು ರೋಗಮುಕ್ತರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ 107 ಕೋವಿಡ್ ಪಾಸಿಟಿವ್ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಅದರಲ್ಲಿ 37 ‌ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಇನ್ನು 37 ಜನರನ್ನು ಗುಣಮುಖರಾಗಲಿದ್ದಾರೆ. ಓರ್ವ ವೃದ್ಧೆ ಈ ರೋಗಕ್ಕೆ ಬಲಿಯಾಗಿದ್ದಾರೆ ಎಂದು ಜಿಲ್ಲೆಯ ಮಾಹಿತಿ ತಿಳಿಸಿದರು.

ಆಹಾರ ಧಾನ್ಯ ವಿತರಸಿದ ಸಚಿವ ಶೆಟ್ಟರ್

ಇನ್ನು ಮಾಸ್ಕ್ ಧರಿಸುವುದು. ಸ್ಯಾನಿಟೈಜರ್ ಬಳಕೆ, ಸಾಮಾಜಿಕ ಅಂತರ ನಮ್ಮ ಜೀವನದ ಅವಿಭಾಜ್ಯ ಅಂಗಗಳಾಗಲಿವೆ. ಲಾಕ್​​ಡೌನ್ ನಂತರ ರಾಜ್ಯದಲ್ಲಿ ಶೇ.25 ರಷ್ಟು ಕೈಗಾರಿಕೆಗಳು ಮತ್ತೆ ಕಾರ್ಯಾರಂಭ ಮಾಡಿವೆ. ಆರ್ಥಿಕ ಚಟುವಟಿಕೆಗಳ ಪ್ರಾರಂಭಕ್ಕೆ ಉತ್ತೇಜನ ನೀಡಲಾಗುವುದು. ಕೊರೊನಾ ನಂತರ ದೇಶದ ಅಭಿವೃದ್ಧಿ ಇನ್ನೂ ಹೆಚ್ಚಾಗಲಿದೆ ಎಂಬ ಆಶಯ ವ್ಯಕ್ತಪಡಿಸಿದರು.

ನಮ್ಮ ತಂದೆ ಎಸ್.ಎಸ್.ಶೆಟ್ಟರ್ ಹುಬ್ಬಳ್ಳಿ ವಕೀಲರ ಸಂಘದ ಸದಸ್ಯರಾಗಿ 50 ವರ್ಷಗಳ ಸೇವೆ ಸಲ್ಲಿಸಿದರು. ನನ್ನ ಆರಂಭದ ದಿನದಲ್ಲಿ ವಕೀಲರ ಸಂಘದ ಸದಸ್ಯನಾಗಿದ್ದೆ. ಕೊರೊನಾ ಸಂದರ್ಭದಲ್ಲಿ ಸಂಘದ ನೆರವಿಗೆ ನಿಲ್ಲುವುದು ನನ್ನ ಆದ್ಯ ಕರ್ತವ್ಯ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.