ಹುಬ್ಬಳ್ಳಿ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮಠಾಧೀಶರು ರಾಜಕೀಯ ಪ್ರವೇಶ ಮಾಡುತ್ತೇವೆ. ಯೋಗಿ ಆದಿತ್ಯನಾಥ್ ಮಠದಲ್ಲಿ ಕುಳಿತುಕೊಂಡಿದ್ದರೆ, ಇಷ್ಟೊಂದು ದೊಡ್ಡ ಮಟ್ಟದಲ್ಲಿ ಕೆಲಸ ಮಾಡಲು ಆಗುತ್ತಿರಲಿಲ್ಲ. ಒಳ್ಳೆಯ ಕೆಲಸ ಮಾಡಲಿಕ್ಕೆ ರಾಜಕೀಯ ಪ್ರವೇಶ ಮಾಡಬೇಕಿದೆ ಎಂದು ತಿಪಟೂರು ರುದ್ರಮುನಿ ಸ್ವಾಮೀಜಿ ಹೇಳಿದ್ದಾರೆ.
ನಗರದ ಮೂರು ಸಾವಿರ ಮಠದಲ್ಲಿ ಮಾತನಾಡಿದ ಅವರು, ಜಂಗಮರನ್ನ ಕೆಲವು ರಾಜಕಾರಣಿಗಳು ತುಳಿಯುತ್ತಿದ್ದಾರೆ. ಯಾವ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಬೇಕೆಂದು ಇನ್ನೂ ತೀರ್ಮಾನ ಮಾಡಿಲ್ಲ. ನಾವು ಯಾವುದೇ ಒಂದು ರಾಜಕೀಯ ಪಕ್ಷಕ್ಕೆ ಸೀಮಿತವಾಗಿರುವುದಿಲ್ಲ. ಎಷ್ಟು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಬೇಕೆನ್ನುವುದರ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನ ಮಾಡುತ್ತೇವೆ. ಆದರೆ ರಾಜಕೀಯ ಪ್ರವೇಶ ಮಾತ್ರ ಖಚಿತ ಎಂದರು.
ಇದನ್ನೂ ಓದಿ: ನಾರಿಯರ ಕೆಲಸಕ್ಕೆ ಸಾಥ್ ನೀಡಿದ ನಲ್ಕುದುರೆ ಗ್ರಾಮಸ್ಥರು: ಸಿದ್ಧವಾಯಿತು ಭವ್ಯ ಕಲ್ಯಾಣ ಮಂಟಪ, ದೇವಾಲಯಗಳು