ETV Bharat / state

ಕಸ ವಿಲೇವಾರಿಗೆ ಸ್ವಚ್ಛ ಸ್ವಸ್ಥ ಟ್ರಸ್ಟ್​​ ಹೊಸ ಪ್ರಯತ್ನ: ಅತ್ಯಾಧುನಿಕ ತಂತ್ರಜ್ಞಾನ ಬಳಸಿ ವಾಹನ ತಯಾರಿಕೆ - ಕಸ ವಿಲೇವಾರಿಗೆ ಸ್ವಚ್ಛ ಸ್ವಸ್ಥ ಟ್ರಸ್ಟ್​​ ಹೊಸ ಪ್ರಯತ್ನ

ಭೂಮಿಯೊಳಗೆ ಕಸದ ಡಬ್ಬಿ ನಿರ್ಮಿಸಿ ಜನರ ಮೆಚ್ಚುಗೆಗೆ ಪಾತ್ರವಾಗಿದ್ದ ಅವರು, ತ್ಯಾಜ್ಯ ನಿರ್ವಹಣೆಗೆ ಬೇಕಾದ ಅಗತ್ಯ ವಾಹನವೊಂದನ್ನು ಸಜ್ಜುಗೊಳಿಸಿದ್ದಾರೆ. ಸಮಾನ ಮನಸ್ಕರೊಂದಿಗೆ ಸ್ವಚ್ಛ ಸ್ವಸ್ಥ ಟ್ರಸ್ಟ್ ರಚಿಸಿಕೊಂಡ ಆತ ಸತತ ನಾಲ್ಕು ವರ್ಷಗಳ ಪ್ರಯೋಗದ ಪರಿಣಾಮ ಸುಸಜ್ಜಿತ ವ್ಯವಸ್ಥೆಯೊಂದು ಸಿದ್ಧಗೊಳಿಸಿದ್ದಾರೆ.

Swachha swstha Trust New Initiative for Garbage Disposal in Hubli
ಕಸ ವಿಲೇವಾರಿಗೆ ಸ್ವಚ್ಛ ಸ್ವಸ್ಥ ಟ್ರಸ್ಟ್​​ ಹೊಸ ಪ್ರಯತ್ನ
author img

By

Published : Jan 30, 2021, 2:09 PM IST

ಹುಬ್ಬಳ್ಳಿ: ನಗರದಲ್ಲಿ ಕಸ ವಿಲೇವಾರಿ ಮಾಡುವುದೇ ಒಂದು ದೊಡ್ಡ ತಲೆನೋವು ಆಗಿ ಪರಿಣಮಿಸಿದೆ. ಇಲ್ಲಿ ವ್ಯಕ್ತಿವೋರ್ವ ಆ ಸಮಸ್ಯೆ ಪರಿಹರಿಸಲು ಹಸಿ ತ್ಯಾಜ್ಯ ವಿಲೇವಾರಿಗೆ ಅತ್ಯಾಧುನಿಕ ತಂತ್ರಜ್ಞಾನದ ಸ್ಪರ್ಶ ನೀಡಿ ಭೂಗತ ಕಸದ ಡಬ್ಬಿ ಹಾಗೂ ಅತ್ಯಾಧುನಿಕ ವಿಲೇವಾರಿ ವಾಹನ ಸಿದ್ಧಗೊಳಿಸಿದ್ದಾರೆ‌‌.

ಕಸ ವಿಲೇವಾರಿಗೆ ಸ್ವಚ್ಛ ಸ್ವಸ್ಥ ಟ್ರಸ್ಟ್​​ ಹೊಸ ಪ್ರಯತ್ನ

ಹೌದು, ಅಧ್ಯಾಪಕ ನಗರದ ನಿವಾಸಿ ವಿಶ್ವನಾಥ್​ ಪಾಟೀಲ್ ಎಂಬ ವ್ಯಕ್ತಿ ಹಾಗೂ ಸಂಗಡಿಗರು ಸೇರಿಕೊಂಡು ಕಸ ವಿಲೇವಾರಿಗೆ ಹೊಸ ತಂತ್ರಜ್ಞಾನ ಬಳಸಿಕೊಂಡು ಹೊಸ ಕಸ ವಿಲೇವಾರಿಗೆ ಆಧುನಿಕ ಟಚ್ ನೀಡಿದ್ದಾರೆ. ಭೂಮಿಯೊಳಗೆ ಕಸದ ಡಬ್ಬಿ ನಿರ್ಮಿಸಿ ಜನರ ಮೆಚ್ಚುಗೆಗೆ ಪಾತ್ರವಾಗಿದ್ದ ಅವರು, ತ್ಯಾಜ್ಯ ನಿರ್ವಹಣೆಗೆ ಬೇಕಾದ ಅಗತ್ಯ ವಾಹನವೊಂದನ್ನು ಸಜ್ಜುಗೊಳಿಸಿದ್ದಾರೆ. ಸಮಾನ ಮನಸ್ಕರೊಂದಿಗೆ ಸ್ವಚ್ಛ ಸ್ವಸ್ಥ ಟ್ರಸ್ಟ್ ರಚಿಸಿಕೊಂಡ ಆತ ಸತತ ನಾಲ್ಕು ವರ್ಷಗಳ ಪ್ರಯೋಗದ ಪರಿಣಾಮ ಸುಸಜ್ಜಿತ ವ್ಯವಸ್ಥೆಯೊಂದು ಸಿದ್ಧಗೊಳಿಸಿದ್ದಾರೆ. ಈ ಕಸದ ಡಬ್ಬಿ ಹಾಗೂ ವಾಹನ ಇರುವುದರಿಂದ ಕಸ ಸಾಗಿಸುವ ವಾಹನಕ್ಕಾಗಿ ಜನರು ಕಾಯಬೇಕಾಗಿಲ್ಲ ಅಥವಾ ಕಸ ತರುವವರೆಗೂ ಸಿಬ್ಬಂದಿ ನಿಲ್ಲಬೇಕಾಗಿಲ್ಲ. 10 ರಿಂದ15 ಅದರ ಜೊತೆಗೆ ಮನೆಗಳಿಗೆ ಚಿಕ್ಕದಾದ ಈ ಡಸ್ಟ್ ಬಿನ್ ಅಳವಡಿಸಿ ಅವರಿಗೆ ಜವಾಬ್ದಾರಿ ನೀಡಿದರೆ ಸಾಕು, ಹೇಗೆಂದರೆ ಹಾಗೇ ಕಸ ಚೆಲ್ಲುವ ಪ್ರಮೇಯ ಉಂಟಾಗುವುದಿಲ್ಲಾ, ಪಾಲಿಕೆ ವಾಹನ ಬರುವವರೆಗೆ ಕಾಯುವ ಅವಶ್ಯಕತೆ ಇಲ್ಲ ಎನ್ನುತ್ತಾರೆ ವಾಹನ ತಯಾರಕ ವಿಶ್ವನಾಥ್.

ನಗರದಲ್ಲಿ ಕಸ ವಿಲೇವಾರಿ ಮಾಡುವ ವಾಹನದಿಂದ ಬರುವ ವಾಸನೆ ಅಥವಾ ಇನ್ನಿತರ ಸಮಸ್ಯೆ ಈ ವಾಹನದಲ್ಲಿ ಇರುವುದಿಲ್ಲ. ಅದೇ ರೀತಿ ಮೊದಲ ಹಂತದಲ್ಲಿ ವಾಸನೆ ಸುತ್ತಲಿನ ಪರಿಸರದಲ್ಲಿ ಗಲೀಜು ಉಂಟಾಗದಂತೆ ಭೂಮಿಯಲ್ಲಿ ಡಸ್ಟ್ ಬಿನ್ ವ್ಯವಸ್ಥೆ ಕಲ್ಪಿಸುವಲ್ಲಿ ಸಫಲರಾಗಿದ್ದಾರೆ. ವಾಹನದ ವಿಶೇಷತೆ, ಭೂಮಿಯೊಳಗಿರುವ ಕಸದ ಡಬ್ಬಿಯನ್ನು ಸುಲಭವಾಗಿ ತೆಗೆದುಕೊಳ್ಳುವುದು, ನಂತರ ಯಥಾಸ್ಥಿತಿಗೆ ಕಸದ ಡಬ್ಬಿಯನ್ನು ಇಡುವುದು ಸೇರಿದಂತೆ ಪ್ರತಿಯೊಂದು ಕಾರ್ಯವನ್ನು ಯಂತ್ರವೇ ನಿರ್ವಹಿಸುತ್ತದೆ. ಈ ವ್ಯವಸ್ಥೆಯಿಂದ ಹೆಚ್ಚಿನ ಸಿಬ್ಬಂದಿ ಬೇಕಾಗುವುದಿಲ್ಲಾ. ಓರ್ವ ಚಾಲಕ ಓರ್ವ ಸಹಾಯಕ ಇದ್ದರೆ ಸಾಕು. ನಿತ್ಯ 500 ಮನೆಯ ಕಸ ಸಾಗಿಸಬಹುದು ಹಸಿ ತಾಜ್ಯವಾಗಿರುವುದರಿಂದ ಒಳಗಿನ ನೀರಿನ ಅಂಶ ಹೊರಬೀಳದಿರಲಿ ಎನ್ನುವ ನಿಟ್ಟಿನಲ್ಲಿ ಪ್ರತ್ಯೇಕ ಟ್ಯಾಂಕ್ ವ್ಯವಸ್ಥೆಯೂ ವಾಹನಕ್ಕಿದೆ. ಈ ಯೋಜನೆ ಬಹುತೇಕ ಯಶಸ್ವಿಯಾಗಿರುವ ಹಿನ್ನೆಲೆ ಯಾವುದಾದರೂ ಸಂಘ ಸಂಸ್ಥೆಗಳು, ಮಹಾನಗರ ಪಾಲಿಕೆ ಮುಂದೆ ಬಂದರೆ ಯೋಜನೆ ಅನುಷ್ಠಾನನಕ್ಕೆ ನೆರವು ನೀಡಿದರೆ ಇನ್ನಷ್ಟು ಪರಿಣಾಮಕಾರಿಯಾಗಿ ಸ್ವಚ್ಛ ಭಾರತ ಯೋಜನೆಯನ್ನು ಸಾಕಾರಗೊಳಿಸಬಹದು ಎನ್ನುತ್ತಾರೆ ವಿಶ್ವನಾಥ್​ ಪಾಟೀಲ್​.

ಓದಿ : ದಾವಣಗೆರೆಯಲ್ಲಿ ಬಾರಕೋಲು ಚಳವಳಿ: ತೀವ್ರ ಸ್ವರೂಪ ಪಡೆದುಕೊಂಡ ಪಂಚಮಸಾಲಿ ಹೋರಾಟ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.