ETV Bharat / state

ನೈರುತ್ಯ ರೈಲ್ವೆ ವಲಯದಿಂದ ಸುರೇಶ್​ ಅಂಗಡಿಯವರಿಗೆ ಸಂತಾಪ

ನಗರದ ಗದಗ ರಸ್ತೆಯಯಲ್ಲಿರುವ ನೈರುತ್ಯ ರೈಲ್ವೆ ಪ್ರಧಾನ ಕಚೇರಿಯಲ್ಲಿ ಅಂಗಡಿಯವರ ಭಾವಚಿತ್ರಕ್ಕೆ ಗೌರವ ಸಲ್ಲಿಸಿ, ಮೌನಾಚಾರಣೆ ಮೂಲಕ ಮೃತರ ಆತ್ಮಕ್ಕೆ ಶಾಂತಿ ಕೊರಲಾಯಿತು.

ದಿ. ಸುರೇಶ ಅಂಗಡಿ
ದಿ. ಸುರೇಶ ಅಂಗಡಿ
author img

By

Published : Sep 25, 2020, 1:43 AM IST

ಹುಬ್ಬಳ್ಳಿ: ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರ ನಿಧನಕ್ಕೆ ನೈರುತ್ಯ ರೈಲ್ವೆ ವಲಯದಿಂದ ಸಂತಾಪ ಸೂಚಿಸಲಾಯಿತು.

ನಗರದ ಗದಗ ರಸ್ತೆಯಯಲ್ಲಿರುವ ನೈರುತ್ಯ ರೈಲ್ವೆ ಪ್ರಧಾನ ಕಚೇರಿಯಲ್ಲಿ ಅಂಗಡಿಯವರ ಭಾವಚಿತ್ರಕ್ಕೆ ಗೌರವ ಸಲ್ಲಿಸಿ, ಮೌನಾಚಾರಣೆ ಮೂಲಕ ಮೃತರ ಆತ್ಮಕ್ಕೆ ಶಾಂತಿ ಕೊರಲಾಯಿತು.

ಸೌತ್ ವೆಸ್ಟರ್ನ್ ರೈಲ್ವೆ ಪ್ರಧಾನ ಕಚೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಅಲ್ಲದೇ ಬೆಂಗಳೂರು, ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಚೇರಿಗಳು, ಬೆಂಗಳೂರು ಕಂಟೋನ್ಮೆಂಟ್‌ನಲ್ಲಿ ಮುಖ್ಯ ಆಡಳಿತಾಧಿಕಾರಿ, ಕಾರ್ಯಾಗಾರಗಳು, ಲೊಕೊ ಶೆಡ್‌ಗಳಲ್ಲಿಯ ಸಿಬ್ಬಂದಿ ಸುರೇಶ ಅಂಗಡಿಯವರ ಭಾವಚಿತ್ರಕ್ಕೆ ಹೂಗುಚ್ಛ ಇಟ್ಟು ಒಂದು ನಿಮಿಷ ಮೌನ ಆಚರಿಸುವುದರ ಮೂಲಕ ಗೌರವ ಸಲ್ಲಿಸಿದರು.

ಸಂತಾಪ ಸೂಚಿಸಿ ಮಾತನಾಡಿದ, ಸೌತ್ ವೆಸ್ಟರ್ನ್ ರೈಲ್ವೆಯ ಜನರಲ್ ಮ್ಯಾನೇಜರ್ ಅಜಯ್ ಕುಮಾರ್ ಸಿಂಗ್ ಅವರು, ಸುರೇಶ್ ಅಂಗಡಿ ಅವರು ಕಡಿಮೆ ಸಮಯದಲ್ಲಿ ‌ರೈಲ್ವೆ ಇಲಾಖೆಗೆ ಸಲ್ಲಿಸಿದ ಸೇವೆಯನ್ನು ಮೆಲುಕು ಹಾಕಿದರು. ಬೆಳಗಾವಿ ಮತ್ತು ಸುತ್ತಮುತ್ತಲಿನ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುತ್ತಿದ್ದರು. ಅವರ ಪ್ರಯತ್ನದಿಂದ, ಬೆಳಗಾವಿ ಸ್ಮಾರ್ಟ್ ಸಿಟಿಯಲ್ಲಿ 4 ರೋಡ್ ಓವರ್ ಬ್ರಿಡ್ಜಸ್ ಪೂರ್ಣಗೊಂಡಿತು. 16 ತಿಂಗಳ ಕಾಲ ರೈಲ್ವೆ ರಾಜ್ಯ ಸಚಿವರಾಗಿರುವ ಅವರ ಅಲ್ಪಾವಧಿಯಲ್ಲಿ ಭಾರತೀಯ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಮತ್ತು ಸುರಕ್ಷತೆಯ ವರ್ಧನೆಗೆ ಬೃಹತ್ ಹೆಜ್ಜೆ ಇಟ್ಟಿದೆ ಎಂದರು.

ಆನ್‌ಲೈನ್‌ನಲ್ಲಿ ಮೂರು ಐತಿಹಾಸಿಕ ಘಟನೆಗಳಿಗೆ ಅವರು ಚಾಲನೆ ನೀಡಿದರು. ಹುಬ್ಬಳ್ಳಿ ರೈಲ್ವೆ ಮ್ಯೂಸಿಯಂನ ಸಮರ್ಪಣೆ, ರಾಜ್ಯದ ಹಲವು ಹೊಸ ಯೋಜನೆಗೆ ಶಂಕು ಸ್ಥಾಪನೆ, ಬೆಳಗಾವಿ ಮತ್ತು ಬೆಂಗಳೂರು ನಡುವೆ ವಿಶೇಷ ರೈಲು, ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ಸಿದ್ದಾರೂಢರ ‌ಹೆಸರು ನಾಮಕರಣ ಸೇರಿದಂತೆ ಹಲವು ಕಾರ್ಯಗಳನ್ನು ರೈಲ್ವೆ ಅಧಿಕಾರಿಗಳು ಮೆಲಕು ಹಾಕಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.