ETV Bharat / state

ಯೋಗೇಶ್ ಗೌಡ ಮಾತ್ರವಲ್ಲ, ಅವರ ಸಹೋದರನ‌ ಹತ್ಯೆಗೂ ನಡೆದಿತ್ತು ಸಂಚು...? - yogesh gowda brother gurunathgowda murder sketch

ಧಾರವಾಡ ಜಿಲ್ಲಾ ಪಂಚಾಯತ್​​ ಸದಸ್ಯ ಯೋಗೇಶ ಗೌಡ ಕೊಲೆ ನಂತರ, ಸಹೋದರನ ಸಾವಿನ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದ ಅಣ್ಣ ಗುರುನಾಥ ಗೌಡ ಹತ್ಯೆಗೂ ಸ್ಕೆಚ್​ ಹಾಕಲಾಗಿತ್ತು ಎಂಬ ಆಘಾತಕಾರಿ ಮಾಹಿತಿಯೊಂದು ತನಿಖೆ ವೇಳೆ ಹೊರಬಿದ್ದಿದೆ.

supari to kill yogesh gowda brother news
ಯೋಗೀಶ ಗೌಡ
author img

By

Published : Nov 9, 2020, 11:49 AM IST

ಹುಬ್ಬಳ್ಳಿ:ಯೋಗೇಶ ಗೌಡ ಕೊಲೆ ಪ್ರಕರಣ ವಿಚಾರಣೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳೇ ಶಾಕ್ ಆಗುವಂತ ಮತ್ತೊಂದು ಅಂಶ ಬೆಳಕಿಗೆ ಬಂದಿದೆ. ಯೋಗೇಶ್ ಕೊಲೆ ಮಾತ್ರ ಅವರ ಅಣ್ಣ ಗುರುನಾಥಗೌಡ ಹತ್ಯೆಗೂ ಸ್ಕೆಚ್​ ಹಾಕಲಾಗಿತ್ತು ಎಂಬ ವಿಚಾರ ವಿಚಾರಣೆಯಿಂದ ಬಯಲಾಗಿದೆ ಎನ್ನಲಾಗಿದೆ.

supari to kill yogesh gowda brother news
ಗುರುನಾಥ ಗೌಡ
ಯೋಗೇಶ ಗೌಡ ಹತ್ಯೆಯ ನ್ಯಾಯಕ್ಕಾಗಿ ಗುರುನಾಥಗೌಡ ಹೋರಾಟ ನಡೆಸಿದ್ದರು. ಸಹೋದರನ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ಆಗ್ರಹಿಸಿ ಕಾನೂನು ಹೋರಾಟಕ್ಕೆ ಮುಂದಾಗಿದ್ದರು. ಹೀಗಾಗಿ ಗುರುನಾಥ ಗೌಡನನ್ನೇ ಕೊಲೆ ಮಾಡಿಸಲು ಸಂಚು ನಡೆದಿತ್ತು. ಮೊದಲಿಗೆ ಪೊಲೀಸ್‌ ದುರ್ಬಳಕೆ ಮಾಡಿಕೊಂಡು ಗುರುನಾಥ ಗೌಡ ಎನ್‌ಕೌಂಟರ್‌ಗೂ ಯೋಜನೆ ಹಾಕಲಾಗಿತ್ತು. ಇದಕ್ಕೆ ಪುಷ್ಟಿ ನೀಡುವಂತೆ ಗುರುನಾಥ್ ಗೌಡ ಅವರ ಗೋವನಕೊಪ್ಪದ ಮನೆ ಮೇಲೆ ಅಕ್ರಮವಾಗಿ ಶಸ್ತಾಸ್ತ್ರ ಹೊಂದಿದ್ದ ಆರೋಪದಡಿ ದಾಳಿ ಮಾಡಲಾಗಿತ್ತು. ಗುರುನಾಥ್ ಗೌಡ ಆ ವೇಳೆ ಪರಾರಿಯಾಗಿ ಬಚಾವ್ ಆಗಿದ್ದರು. ಎನ್‌ಕೌಂಟರ್ ಪ್ಲಾನ್​​​ನಿಂದ ಕೂದಲೆಳೆ ಅಂತರದಲ್ಲಿ ಬಚಾವ್ ಆಗಿದ್ರು. ಆ ಬಳಿಕ ಯೋಗೇಶಗೌಡ ಪರ ಹೋರಾಟ ತೀವ್ರಗೊಂಡ ಹಿನ್ನೆಲೆಯಲ್ಲಿ ಎನ್‌ಕೌಂಟರ್ ಪ್ಲಾನ್​ ಫೇಲ್ ಆದ ಬಳಿಕ ಆ ಕೇಸ್‌ನಲ್ಲಿ ಗುರುನಾಥಗೌಡ ಜೈಲುವಾಸು ಅನುಭವಿಸಿದ್ದ. ಆ ಬಳಿಕ ಸುಪಾರಿ ಹತ್ಯೆಯ ಸ್ಕೆಚ್​ ಹಾಕಲಾಗಿತ್ತು. ಆ ಪ್ಲಾನ್​ ಕೂಡ ಫೇಲ್ ಆಗಿತ್ತು ಎಂಬ ಮಾಹಿತಿ ವಿಚಾರಣೆ ವೇಳೆ ಬೆಳಕಿಗೆ ಬಂದಿದ್ದು, ಯಾರು ಸುಪಾರಿ ಕೊಟ್ಟಿದ್ದರು ಎಂಬ ಬಗ್ಗೆ ತೀವ್ರ ವಿಚಾರಣೆ ನಡೆಸುವ ಸಾಧ್ಯತೆ ಹೆಚ್ಚಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.