ಧಾರವಾಡ: ಕಬ್ಬು ಬೆಳೆಗಾರರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರೈತ ಮುಖಂಡ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಧಾರವಾಡ ಜಿಲ್ಲಾಧಿಕಾರಿ ಕಚೇರಿಗೆ ರೈತರು ಮುತ್ತಿಗೆ ಹಾಕಿದರು.
ಇದಕ್ಕೂ ಮುನ್ನ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದ ರೈತರು, ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಆಗಮಿಸಬೇಕು ಎಂದು ಪಟ್ಟು ಹಿಡಿದರು. ಆದರೆ ಸ್ಥಳಕ್ಕೆ ಡಿಸಿ ಬಾರದ ಹಿನ್ನೆಲೆ ಪೊಲೀಸರನ್ನೇ ಗೇಟ್‌ನಲ್ಲಿ ದೂರ ತಳ್ಳಿ ಒಳನುಗ್ಗಿದರು.
ಈ ವೇಳೆ ಶಾಂತಕುಮಾರ್ ಮತ್ತು ಪೊಲೀಸರ ಮಧ್ಯೆ ಕೆಲಹೊತ್ತು ವಾಗ್ವಾದ ನಡೆಯಿತು. ಬ್ಯಾರಿಕೇಡ್ ಮತ್ತು ಗೇಟ್ ತಳ್ಳಿ ಒಳನುಗ್ಗಿದ ನೂರಾರು ರೈತರು ಸಚಿವರು ಸ್ಥಳಕ್ಕೆ ಆಗಮಿಸಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: ಕಬ್ಬು ಬೆಲೆ ಹೆಚ್ಚಳಕ್ಕೆ ಆಗ್ರಹ: ಸಕ್ಕರೆ ಕಾರ್ಖಾನೆ ಮೇಲೆ ಕಲ್ಲು, ಕಬ್ಬು ತೂರಾಟ