ETV Bharat / state

ಡಿಹೆಚ್ಒ ಕಚೇರಿಯಲ್ಲಿ ಹೋಮ: ಅಧಿಕಾರಿಗೆ ನೋಟಿಸ್ ನೀಡಲು ಸಚಿವ ಆಚಾರ್ ಸೂಚನೆ - ಉಸ್ತುವಾರಿ ಸಚಿವ ಹಾಲಪ್ಪ ಆಚಾರ್

ಸರ್ಕಾರಿ ಕಚೇರಿಯಲ್ಲಿ ಸುದರ್ಶನ ಹೋಮ ನಡೆಸಿದ ಅಧಿಕಾರಿಗೆ ನೋಟಿಸ್​ ನೀಡುವಂತೆ ಸಚಿವ ಹಾಲಪ್ಪ ಆಚಾರ್ ಅವರು ಜಿಲ್ಲಾಧಿಕಾರಿಗೆ ತಿಳಿಸಿದ್ದಾರೆ.

Minister Halappa Achar
ಉಸ್ತುವಾರಿ ಸಚಿವ‌ ಹಾಲಪ್ಪ ಆಚಾರ್​
author img

By

Published : Sep 11, 2022, 12:40 PM IST

ಧಾರವಾಡ: ಧಾರವಾಡ ಡಿಹೆಚ್ಒ ಕಚೇರಿಯಲ್ಲಿ ಸುದರ್ಶನ ಹೋಮ ಮಾಡಿಸಿದ ಹಿನ್ನೆಲೆಯಲ್ಲಿ ಅಧಿಕಾರಿಗೆ ನೋಟಿಸ್ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ‌ ಹಾಲಪ್ಪ ಆಚಾರ್​ ಡಿಸಿಗೆ ಸೂಚನೆ ನೀಡಿದ್ದಾರೆ. ಗಣೇಶ ಹಬ್ಬ ಹಾಗೂ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಕಾರಣ ಡಿಹೆಚ್ಒ ಕರಿಗೌಡರ ಹೋಮ ಮಾಡಿಸಿದ್ದರು.

ಉಸ್ತುವಾರಿ ಸಚಿವ‌ ಹಾಲಪ್ಪ ಆಚಾರ್​ ಸುದ್ದಿಗಾರರೊಂದಿಗೆ ಮಾತನಾಡಿದರು

ಮೊದಲು, ಅಧಿಕಾರಿಯನ್ನು ಸಚಿವರು ಸಮರ್ಥಿಸಿಕೊಂಡಿದ್ದರು. ಸರ್ಕಾರಿ ಕಚೇರಿಗೆ ಒಳ್ಳೆಯದಾಗಲಿ ಎನ್ನುವ ಕಾರಣಕ್ಕೆ ಮಾಡಿರಬಹುದು. ಆದರೆ ಸರ್ಕಾರಿ ಕಚೇರಿಯಲ್ಲಿ ಇದಕ್ಕೆ ಅವಕಾಶವಿಲ್ಲ. ಘಟನೆಗೆ ಹೆಚ್ಚು ಒತ್ತು ನೀಡುವ ಅವಶ್ಯಕತೆಯೂ ಇಲ್ಲ. ದೇವರ ಮೇಲೆ ನಂಬಿಕೆ ಇದ್ದವರು ಹೀಗೆ ಮಾಡುತ್ತಾರೆ ಎಂದಿದ್ದರು.

ಇದನ್ನೂ ಓದಿ: ಅನಧಿಕೃತವಾಗಿ ನಡೆಸುತ್ತಿರುವ ಕಾರ್ಖಾನೆಗಳ ಬಗ್ಗೆ ಸರ್ವೇಗೆ ಸಚಿವ ಆಚಾರ್​ ಸೂಚನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.