ಹುಬ್ಬಳ್ಳಿ: ಶಾಲಾ-ಕಾಲೇಜುಗಳಿಗೆ ತೆರಳಲು ಸೂಕ್ತ ಬಸ್ ಸೌಲಭ್ಯ ಕಲ್ಪಿಸುವಂತೆ ವಿದ್ಯಾರ್ಥಿನಿಯರು ಸಚಿವ ಆರ್.ಅಶೋಕ್ ಅವರಿಗೆ ಮನವಿ ಸಲ್ಲಿಸಿದರು.
ಹುಬ್ಬಳ್ಳಿ ತಾಲೂಕಿನ ಛಬ್ಬಿ ಗ್ರಾಮದಲ್ಲಿ ವಿದ್ಯಾರ್ಥಿಗಳು ಹೈಸ್ಕೂಲ್ಗೆ ತೆರಳಲು ನಾಲ್ಕೈದು ಕಿ.ಮೀ. ನಡೆದುಕೊಂಡು ಬು.ಅರಳಿಕಟ್ಟಿ ಶಾಲೆಗೆ ಹೋಗಬೇಕಾಗಿದೆ. ಇರುವ ಒಂದು ಬಸ್ ಬಂದರೂ ಕೂಡ ಫುಲ್ ರಶ್ ಆಗಿರುತ್ತದೆ. ಹಾಗಾಗಿ ನಿತ್ಯ ವಿದ್ಯಾರ್ಥಿಗಳು ನಡೆದುಕೊಂಡೆ ಶಾಲೆಗೆ ಹೋಗಬೇಕಾಗಿದೆ.
ಹುಡುಗರು ಹೇಗೋ ನಡೆದುಕೊಂಡು ಹೋಗುತ್ತಾರೆ. ಆದರೆ ಹುಡುಗಿಯರನ್ನು ದೂರದ ಊರಿಗೆ ಶಾಲೆಗೆ ಕಳಿಸಲು ಪಾಲಕರು ಹಿಂದೇಟು ಹಾಕುತ್ತಿದ್ದಾರೆ. ವಿದ್ಯಾರ್ಥಿನಿಯರಿಗೂ ಕಲಿಯುವ ಆಸೆಯಿದ್ದು, ಸೂಕ್ತ ಸಾರಿಗೆ ಸೇವೆಯಿಲ್ಲದೆ ಪರಡುವಂತಾಗಿದೆ. ಈ ಹಿನ್ನೆಲೆ ಸಮರ್ಪಕ ಬಸ್ ಸೌಲಭ್ಯ ಕಲ್ಪಿಸುವಂತೆ ವಿದ್ಯಾರ್ಥಿನಿಯರು ಒಕ್ಕೊರಲಿನಿಂದ ಸಚಿವರಿಗೆ ಮನವಿ ಮಾಡಿದರು. ಮನವಿಗೆ ಸ್ಪಂದಿಸಿದ ಸಚಿವರು, ಪರಿಹಾರದ ಭರವಸೆ ನೀಡಿದರು.