ಧಾರವಾಡ: ಕೊರೊನಾ ಭಯದಿಂದ ಮೊದಲ ಪರೀಕ್ಷೆಗೆ ಗೈರಾಗಿದ್ದ ವಿದ್ಯಾರ್ಥಿನಿಯೊಬ್ಬಳಿಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಆತ್ಮವಿಶ್ವಾಸ ತುಂಬಿ ಇಂದು ನಡೆದ ಗಣಿತ ಪರೀಕ್ಷೆಗೆ ಕರೆದುಕೊಂಡು ಬಂದ ಘಟನೆ ಜಿಲ್ಲೆಯ ಅಳ್ನಾವರದಲ್ಲಿ ನಡೆದಿದೆ.
ಭಯಗೊಂಡಿದ್ದ ವಿದ್ಯಾರ್ಥಿನಿ ಮನೆಗೆ ತೆರಳಿ ಆತ್ಮಸ್ಥೈರ್ಯ ತುಂಬಿದ ಅಧಿಕಾರಿಗಳು ಅಳ್ನಾವರ ಬಳಿಯ ಕಾಶೇನಟ್ಟಿ ಗ್ರಾಮದ ಲಕ್ಷ್ಮಿ ಕುಳೆ ಎಂಬ ವಿದ್ಯಾರ್ಥಿನಿ ಕೊರೊನಾ ಹರಡುವ ಭೀತಿಯಿಂದ ಜೂನ್ 25ರಂದು ನಡೆದ ದ್ವಿತೀಯ ಭಾಷೆ ಇಂಗ್ಲಿಷ್ ಪರೀಕ್ಷೆಯನ್ನು ಬರೆಯದೆ ಮನೆಯಲ್ಲೇ ಇದ್ದಳು. ನಂತರ ವಿಷಯ ತಿಳಿದ ಡಿಡಿಪಿಐ ಮಾರ್ಗದರ್ಶನದಲ್ಲಿ ಸ್ಥಳೀಯ ಶಿಕ್ಷಣಾಧಿಕಾರಿಗಳು ಅವರ ಮನೆಗೆ ತೆರಳಿ ವಿದ್ಯಾರ್ಥಿನಿ ಲಕ್ಷ್ಮೀ ಹಾಗೂ ಅವರ ಪಾಲಕರಿಗೆ ಆತ್ಮಸ್ಥೈರ್ಯ ತುಂಬಿದ್ದಾರೆ.ಭಯಗೊಂಡಿದ್ದ ವಿದ್ಯಾರ್ಥಿನಿ ಮನೆಗೆ ತೆರಳಿ ಆತ್ಮಸ್ಥೈರ್ಯ ತುಂಬಿದ ಅಧಿಕಾರಿಗಳು ಇಂದು ಅಳ್ನಾವರದ ಪರೀಕ್ಷಾ ಕೇಂದ್ರದಲ್ಲಿ ಲಕ್ಷ್ಮಿ ಕುಳೆಯಿಂದ ಗಣಿತ ಪರೀಕ್ಷೆ ಬರೆಯಿಸಲಾಯಿತು. ಅಲ್ಲದೇ ಇನ್ನುಳಿದ ಎಲ್ಲಾ ಪರೀಕ್ಷೆಯನ್ನು ಸಹ ಭಯವಿಲ್ಲದೆ ಬರೆಯುವುದಾಗಿ ಲಕ್ಷ್ಮಿ ಭರವಸೆ ನೀಡಿದ್ದಾಳೆ ಎಂದು ಡಿಡಿಪಿಐ ಮೋಹನ ಹಂಚಾಟೆ ತಿಳಿಸಿದ್ದಾರೆ.