ETV Bharat / state

ಧಾರವಾಡದಲ್ಲಿ ಕಠಿಣ ಲಾಕ್​ಡೌನ್: ಖುದ್ದು ಜಾಗೃತಿಗಿಳಿದ ಪೊಲೀಸರು - Dharwad Police

ಧಾರವಾಡದಲ್ಲಿ ಲಾಕ್​ಡೌನ್ ನಿಯಮಗಳನ್ನು​ ಕಟ್ಟುನಿಟ್ಟಾಗಿ ಜಾರಿಗೆ ತರಲು ಪೊಲೀಸ್ ಇಲಾಖೆ ಮುಂದಾಗಿದೆ. ನಗರದ ಪ್ರಮುಖ ಬೀದಿಗಳಲ್ಲಿ ಖುದ್ದಾಗಿ ಸಿಪಿಐ ಜನರಿಗೆ ತಿಳುವಳಿಕೆ ಹೇಳಿ, ಅಂಗಡಿಗಳ ಬಳಿ ತೆರಳಿ ಬಂದ್​ ಮಾಡುವಂತೆ ಮನವೊಲಿಸುತ್ತಿದ್ದರು.

Strict lockdown in Dharwad..police came out into street to close shops
ಧಾರವಾಡದಲ್ಲಿ ಕಠಿಣ ಲಾಕ್​ಡೌನ್​...ಖುದ್ದು ಜಾಗೃತಿಗಿಳಿದ ಪೊಲೀಸರು
author img

By

Published : Jul 17, 2020, 5:54 PM IST

ಧಾರವಾಡ: ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣ ಮಾಡಲು ಲಾಕ್​​​ಡೌನ್​​​ ಜಾರಿಗೊಳಿಸಲಾಗಿದೆ. ಬೆಳಗ್ಗೆ 5 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಅಗತ್ಯ ಸೇವೆಗಳ ಖರೀದಿ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ.

ಅದನ್ನು ಲೆಕ್ಕಿಸದೆ ಓಡಾಡುವ ಜನರಿಗೆ ಪೊಲೀಸರು ತಿಳಿ ಹೇಳುತ್ತಿದ್ದಾರೆ. ಮಧ್ಯಾಹ್ನ 12 ಗಂಟೆ ದಾಟಿದರೂ ಕೂಡಾ ಮಾರುಕಟ್ಟೆಯಲ್ಲಿ ತೆರೆದಿದ್ದ ಅಂಗಡಿ- ಮುಂಗಟ್ಟುಗಳಿಗೆ ಸಿಪಿಐ ಪ್ರಮೋದ್ ಯಲಿಗಾರ ಖುದ್ದು ತೆರಳಿ ಬಂದ್ ಮಾಡುವಂತೆ ಎಚ್ಚರಿಸಿದ್ದಾರೆ.

ಧಾರವಾಡದಲ್ಲಿ ಕಠಿಣ ಲಾಕ್​ಡೌನ್, ಖುದ್ದು ಜಾಗೃತಿಗಿಳಿದ ಪೊಲೀಸರು

ಅಲ್ಲದೆ ನಗರದ ಪ್ರಮುಖ ರಸ್ತೆಗಳಲ್ಲಿ ಪೊಲೀಸ್​ ವಾಹನದ ಮೂಲಕ ಪ್ರಕಟಣೆ ಹೊರಡಿಸುವ ಮೂಲಕ ಜನರಿಗೆ ಹೊರಬರದಂತೆ ಎಚ್ಚರಿಕೆ ನೀಡಿದ್ದಾರೆ.

ನಗರದ ಪ್ರಮುಖ ಮಾರುಕಟ್ಟೆ, ಶಿವಾಜಿ ವೃತ್ತ ಸೇರಿದಂತೆ ಹಲವೆಡೆ ಖುದ್ದಾಗಿ ತೆರಳಿ ಅಂಗಡಿಗಳನ್ನು ಬಂದ್​​ ಮಾಡಿಸಿದ್ದಾರೆ. ಈ ಮೂಲಕ ಅನಗತ್ಯವಾಗಿ ಸಂಚರಿಸುತ್ತಿದ್ದ ವಾಹನ ಸವಾರರಿಗೂ ತಿಳಿಹೇಳಿ ಮನೆಗೆ ತೆರಳುವಂತೆ ಸೂಚಿಸಿದ್ದು ಕಂಡುಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.