ಧಾರವಾಡ: ಡಿಕೆ ಶಿವಕುಮಾರ್ ಅವರ ಹೇಳಿಕೆಯು ಅಕ್ಷಮ್ಯ ಅಪರಾಧವಾಗಿದೆ. ಮತಕ್ಕಾಗಿ ಕಾಂಗ್ರೆಸ್ ತುಷ್ಟೀಕರಣ ಮಾಡಿದ ಪರಿಣಾಮ ಇಡೀ ದೇಶದಲ್ಲಿ ಕಸದ ಬುಟ್ಟಿಯಲ್ಲಿ ಬಿದ್ದಿದೆ. ಆದರೂ ಇವರಿಗೆ ಬುದ್ಧಿ ಬಂದಿಲ್ಲ. ಕಾಂಗ್ರೆಸ್ ಅಧ್ಯಕ್ಷರಾಗಿ ಬೇಜವಾಬ್ದಾರಿ ಹೇಳಿಕೆ ನೀಡುವುದು ಸರಿಯಲ್ಲ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಕ್ರೋಶ ಹೊರಹಾಕಿದ್ದಾರೆ.
ಭಯೋತ್ಪಾದಕರ ಬೆಂಬಲಿಸಿ ನೀಡಿರುವ ಹೇಳಿಕೆ ಸರಿಯಲ್ಲ. ಪೊಲೀಸ್ ಇಲಾಖೆಯು ಅನಾಹುತ ಆಗುವುದನ್ನು ತಪ್ಪಿಸಿದೆ. ಅದನ್ನ ಬಿಟ್ಟು ವೋಟಿಗಾಗಿ ಟೆರರಿಸ್ಟ್ ಪರ ಮಾತನಾಡಿರುವುದು ದೇಶಕ್ಕೆ ಅಪಾಯಕಾರಿ. ಡಿಕೆಶಿ ಈ ಹೇಳಿಕೆಯನ್ನು ವಾಪಸ್ ಪಡೆದು, ದೇಶದ ಕ್ಷಮೆ ಕೇಳಬೇಕು ಎಂದು ಮುತಾಲಿಕ್ ಒತ್ತಾಯಿಸಿದ್ದಾರೆ.
ದೇಶಕ್ಕೆ ಸುರಕ್ಷತೆ ಮುಖ್ಯ, ನಿಮ್ಮ ರಾಜಕಾರಣ ಅಲ್ಲ. ನಿಮ್ಮ ತುಷ್ಟೀಕರಣದಿಂದಲೇ ನೀವು ಇಲ್ಲಿಗೆ ಬಂದು ನಿಂತಿದ್ದೀರಿ. ಆದರೆ ನೀವು ಇನ್ನೂ ಅರ್ಥ ಮಾಡಿಕೊಂಡಿಲ್ಲ. ನಿಮ್ಮ ಹೇಳಿಕೆ ವಾಪಸ್ ಪಡೆಯದೇ ಇದ್ದರೆ, ರಾಜ್ಯಾದ್ಯಂತ ಹೋರಾಟ ಮಾಡ್ತೇವೆ ಎಂದು ಅವರು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಡಿಕೆಶಿ ಹೇಳಿಕೆ ಭಯೋತ್ಪಾದನಾ ಚಟುವಟಿಕೆಗೆ ಪ್ರೇರಣೆ: ನಳಿನ್ ಕುಮಾರ್ ಕಟೀಲ್