ಧಾರವಾಡ: ಕೊರೊನಾದಿಂದ ಕಂಗೆಟ್ಟ ರೈತರಿಗೀಗ ಕಳ್ಳರ ಭಯ ಶುರುವಾಗಿದೆ. ತಾಲೂಕಿನ ಮನಗುಂಡಿ ಹಾಗೂ ನಾಯಕನ ಹುಲಿಕೊಪ್ಪ ಗ್ರಾಮದ ರೈತರ ಹೊಲದಲ್ಲಿನ ಸ್ಪ್ರಿಂಕ್ಲರ್ ಹಾಗೂ ತಾಮ್ರದ ತಂತಿ ಕಳ್ಳತನವಾಗುತ್ತಿವೆ.
ಈ ಗ್ರಾಮಗಳ ಸುತ್ತಮುತ್ತ ಇರುವ ಹೊಲಗಳಲ್ಲಿರುವ ನೀರು ಚಿಮ್ಮುವ ಸ್ಪ್ರಿಂಕ್ಲರ್ ಹಾಗೂ ತಾಮ್ರದ ತಂತಿಯನ್ನ ಕಳ್ಳರು ಕಳ್ಳತನ ಮಾಡುತ್ತಿದ್ದಾರೆ. ಬೋರ್ವೆಲ್ಗೆ ಅಳವಡಿಸಿರುವ ತಾಮ್ರದ ಕೇಬಲ್ ಸುಟ್ಟಿರುವ ಕಳ್ಳರು, ಸುಮಾರು ಒಂದು ಲಕ್ಷ ರೂ. ಮೌಲ್ಯದ ತಾಮ್ರ ಕಳ್ಳತನ ಮಾಡಿದ್ದಾರೆ. ಅಲ್ಲದೆ 50 ಸಾವಿರ ರೂ. ಮೌಲ್ಯದ ಸ್ಪ್ರಿಂಕ್ಲರ್ಗಳನ್ನ ಕಳ್ಳತನ ಮಾಡಲಾಗಿದೆ.
ಈ ಹಿಂದೆ ಕೂಡಾ ಈ ಗ್ರಾಮಗಳ ಸರಹದ್ದಿನಲ್ಲಿರುವ ಮಹಾಮನೆ ಮಠದ ಹೊಲಗಳಿಗೆ ಕನ್ನ ಹಾಕಿದ್ದ ಕಳ್ಳರು, ಅಲ್ಲಿ ಕೂಡ ಇದೇ ರೀತಿಯಾಗಿ ಬೋರ್ವೆಲ್ಗಳ ತಾಮ್ರದ ತಂತಿಯನ್ನ ಕಳ್ಳತನ ಮಾಡಿದ್ದರು. ಈಗ ಎರಡನೇ ಬಾರಿ ನಡೆದ ಕಳ್ಳತನವಾಗಿದೆ. ಸದ್ಯ ಧಾರವಾಡ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.