ETV Bharat / state

ಹುಬ್ಬಳ್ಳಿ-ಬೆಂಗಳೂರು ಮಧ್ಯೆ ಮಾ. 20ರಿಂದ ವಿಶೇಷ ಎಕ್ಸ್​ಪ್ರೆಸ್ ರೈಲುಗಳ ಸಂಚಾರ: ಪ್ರಹ್ಲಾದ್ ಜೋಶಿ - South Western Railway

ಪ್ರಯಾಣಿಕರ ಬೇಡಿಕೆ - ಹುಬ್ಬಳ್ಳಿ- ಬೆಂಗಳೂರು ಮಧ್ಯೆ ವಿಶೇಷ ರೈಲು ಸಂಚಾರ ಆರಂಭಿಸಲು ತೀರ್ಮಾನ - ಫೇಸ್​ಬುಕ್ ಖಾತೆಯಲ್ಲಿ ಸಚಿವ ಜೋಶಿ ಮಾಹಿತಿ

special-express-trains-to-run-between-hubli-bangalore-from-march-20-prahlad-joshi
ಹುಬ್ಬಳ್ಳಿ-ಬೆಂಗಳೂರು ಮಧ್ಯೆ ಮಾರ್ಚ್ 20ರಿಂದ ವಿಶೇಷ ಎಕ್ಸ್​ಪ್ರೆಸ್ ರೈಲುಗಳ ಸಂಚಾರ: ಪ್ರಹ್ಲಾದ್ ಜೋಶಿ
author img

By

Published : Mar 5, 2023, 10:00 PM IST

ಹುಬ್ಬಳ್ಳಿ: ಹುಬ್ಬಳ್ಳಿ-ಬೆಂಗಳೂರು ಮಧ್ಯೆ ಮಾರ್ಚ್ 20 ರಿಂದ ವಿಶೇಷ ಎಕ್ಸ್​ಪ್ರೆಸ್ ರೈಲುಗಳ ಸಂಚಾರ ಆರಂಭಿಸಲಿದೆ ಎಂದು ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸಧೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಮಾಹಿತಿ ಹಂಚಿಕೊಂಡಿದ್ದಾರೆ. ತಮ್ಮ ಅಧಿಕೃತ ಫೇಸ್​ಬುಕ್ ಖಾತೆಯಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿರುವ ಅವರು, ಪ್ರಯಾಣಿಕರ ಬೇಡಿಕೆ ಹಿನ್ನೆಲೆಯಲ್ಲಿ ಕಾಯ್ದಿರಿಸಿದ ವಿಶೇಷ ಸೇವೆಯ ಈ ರೈಲುಗಳು ಮಾರ್ಚ್ 20 ರಿಂದ ಸಂಚಾರ ಆರಂಭಿಸಲಿವೆ ಎಂದು ತಿಳಿಸಿದ್ದಾರೆ.

  • South Western Railway has decided to run two more trains between Bengaluru and Hubballi.https://t.co/pyC26uZBgS

    — South Western Railway (@SWRRLY) March 5, 2023 " class="align-text-top noRightClick twitterSection" data=" ">

ರೈಲುಗಳ ಸಂಚಾರ ವಿವರ: ರಾತ್ರಿ 11:15ಕ್ಕೆ ಹುಬ್ಬಳ್ಳಿಯಿಂದ (ರೈಲು ಸಂ: 07339) ಹೊರಡುವ ರೈಲು ಬೆಳಗ್ಗೆ 6:50ಕ್ಕೆ ಬೆಂಗಳೂರು ತಲುಪಲಿದೆ ಹಾಗೂ ಬೆಂಗಳೂರಿನಿಂದ (ರೈಲು ಸಂ: 07340) ರಾತ್ರಿ 11:15ಕ್ಕೆ ಹೊರಡುವ ರೈಲು ಬೆಳಗ್ಗೆ 7:30ಕ್ಕೆ ಹುಬ್ಬಳ್ಳಿ ತಲುಪಲಿದೆ.

ಮತ್ತೊಂದು ರೈಲು ಬೆಳಗ್ಗೆ 7:45ಕ್ಕೆ ಬೆಂಗಳೂರಿನಿಂದ (ರೈಲು ಸಂ: 07353) ಹೊರಟು ಮಧ್ಯಾಹ್ನ 2:30ಕ್ಕೆ ಹುಬ್ಬಳ್ಳಿ ತಲುಪಲಿದೆ ಹಾಗೂ ಹುಬ್ಬಳ್ಳಿಯಿಂದ (ರೈಲು ಸಂ: 07354) ಮ. 3:15ಕ್ಕೆ ಹೊರಡುವ ರೈಲು ರಾತ್ರಿ 11:10ಕ್ಕೆ ಬೆಂಗಳೂರು ತಲುಪಲಿದೆ.

ಹುಬ್ಬಳ್ಳಿ-ಬೆಂಗಳೂರು ಮಧ್ಯೆ ಮಾರ್ಚ್ 20ರಿಂದ ವಿಶೇಷ ಎಕ್ಸ್​ಪ್ರೆಸ್ ರೈಲುಗಳ ಸಂಚಾರ: ಪ್ರಹ್ಲಾದ್ ಜೋಶಿ
ಹುಬ್ಬಳ್ಳಿ-ಬೆಂಗಳೂರು ಮಧ್ಯೆ ಮಾರ್ಚ್ 20ರಿಂದ ವಿಶೇಷ ಎಕ್ಸ್​ಪ್ರೆಸ್ ರೈಲುಗಳ ಸಂಚಾರ: ಪ್ರಹ್ಲಾದ್ ಜೋಶಿ

ಈ ಎರಡು ರೈಲುಗಳು ಕರ್ಜಗಿ, ದಾವಣಗೆರೆ, ಬೀರೂರು, ತುಮಕೂರು ಹಾಗೂ ಯಶವಂತಪುರ ಮಾರ್ಗವಾಗಿ ಸಂಚರಿಸಲಿವೆ. ನಮ್ಮ ಕೋರಿಕೆಗೆ ಸ್ಪಂದಿಸಿ ರೈಲು ಸಂಚಾರ ಆರಂಭಿಸಲು ಆದೇಶ ನೀಡಿದ ಕೇಂದ್ರ ರೈಲು ಸಚಿವರಾದ ಅಶ್ಬಿನಿ ವೈಷ್ಣವ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

ಇದನ್ನೂ ಓದಿ: ಗ್ರಾಹಕರಿಗೆ ಸಿಲಿಂಡರ್​ ಪೂರೈಸುವಾಗ, ಹೆಚ್ಚುವರಿ ಡೆಲಿವರಿ ಚಾರ್ಜ್‌ ತಗೊಂಡ್ರೆ ಲೈಸೆನ್ಸ್ ರದ್ದು: ಡಿಸಿ ಎಚ್ಚರಿಕೆ

ಪ್ರಯಾಣಿಕರಿಗೆ ತಕ್ಕಂತೆ ಬೋಗಿಗಳ ನವೀಕರಣ: ಈ ಬಾರಿ ಬಜಟ್​ನಲ್ಲಿ ರೈಲ್ವೆ ಪ್ರಯಾಣಿಕರನ್ನು ಗಮನದಲ್ಲಿಟ್ಟುಕೊಂಡು ರಾಜಧಾನಿ, ಶತಾಬ್ದಿ, ಡುರೊಂಟೊ, ಹಮ್‌ಸಫರ್ ಮತ್ತು ತೇಜಸ್‌ನಂತಹ ಪ್ರೀಮಿಯರ್ ರೈಲುಗಳ 1,000ಕ್ಕೂ ಹೆಚ್ಚು ಬೋಗಿಗಳನ್ನು ಪ್ರಯಾಣಿಕರಿಗೆ ಅನುಕೂಲವಾಗುವಂತೆ ನಿರ್ಮಿಸಲಾಗುತ್ತದೆ ಎಂದು ಘೋಷಿಸಿದ್ದರು. ಮತ್ತು ರೈಲುಗಳ ವೇಗವನ್ನು ಹೆಚ್ಚಿಸಲು ಹಲವು ಕಡೆಗಳಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಪ್ರಾರಂಭಿಸಲು ರೈಲ್ವೆಯು ಯೋಜನೆ ರೂಪಿಸಿದೆ. ಇದಕ್ಕೆ ಪೂರಕವಾಗಿ ಹಳೆಯ ಹಳಿಗಳನ್ನು ಬದಲಾಯಿಸಲು ಬೇಕಾದ ಕ್ರಮ ಕೈಗೊಳ್ಳಲಾಗುತ್ತದೆ.

ಹಲವು ದಾಖಲೆಗಳಿಗೆ ಸಾಕ್ಷಿಯಾಗಿರುವ ನೈರುತ್ಯ ರೈಲ್ವೆ: ನೈರುತ್ಯ ರೈಲ್ವೆ ವಲಯ ಕಳೆದ 2022ರಲ್ಲಿ ಹತ್ತು ಹಲವಾರು ದಾಖಲೆಗಳನ್ನು ತನ್ನ ಮುಡಿಗೇರಿಸಿಕೊಂಡಿದೆ. ಕೋವಿಡ್ ಸವಾಲುಗಳನ್ನು ಎದುರಿಸಿದ ನೈರುತ್ಯ ರೈಲ್ವೆ 511.7 ರೂಟ್ ಕಿಲೋಮೀಟರ್ ವಿದ್ಯುದೀಕರಣಗೊಳಿಸಿತ್ತು. ಅಲ್ಲದೇ ಸರಕು ಸಾಗಾಣಿಕೆಯಲ್ಲಿ ಕಳೆದ ವರ್ಷಕ್ಕಿಂತ 27.34% ಹೆಚ್ಚಿಗೆ ಆದಾಯಗಳಿಸಿತ್ತು. 4,160.04 ಕೋಟಿ ಆದಾಯದ ಮೂಲಕ ದಾಖಲೆ ನಿರ್ಮಿಸಿತ್ತು. ಗುಜರಿ ವಸ್ತುಗಳ ಮಾರಾಟದಲ್ಲಿಯೇ ಇತಿಹಾಸ ನಿರ್ಮಾಣ, ಗುಜರಿ ಮಾರಾಟದಿಂದ ಸುಮಾರು 138.04 ಕೋಟಿ ಆದಾಯ ಗಳಿಕೆ. ನೈರುತ್ಯ ರೈಲ್ವೆಯು 6,214.85 ಕೋಟಿ ಆರಂಭಿಕ ಆದಾಯವನ್ನು ಹೊಂದುವ ಮೂಲಕ ಮಹತ್ವದ ಸಾಧನೆಗೆ ಪಾತ್ರವಾಗಿತ್ತು.

ಇದನ್ನೂ ಓದಿ: ಭ್ರಷ್ಟ ಜನತಾ ಪಕ್ಷದ (ಬಿಜೆಪಿ) ಭ್ರಷ್ಟಾಚಾರ ವಿರೋಧಿಸಿ ಮಾ. 9 ರಂದು ಕರ್ನಾಟಕ ಬಂದ್: ಡಿಕೆಶಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.