ಹುಬ್ಬಳ್ಳಿ: ಮಮತಾ ಶಿಕ್ಷಣ ಸಂಸ್ಥೆಯ ವಿಶೇಷ ಚೇತನ ಮಕ್ಕಳಿಗೆ ಹೆಚ್ಡಿ ಬಿಆರ್‍ಟಿಎಸ್ ಯೋಜನೆ ಕುರಿತು ಮಾಹಿತಿ ನೀಡುವ ಕಾರ್ಯಕ್ರಮವನ್ನ ಹುಬ್ಬಳ್ಳಿಯಲ್ಲಿ ಆಯೋಜಿಸಿತ್ತು.
ಹುಬ್ಬಳ್ಳಿ-ಧಾರವಾಡ ಬಿಆರ್‍ಟಿಎಸ್ ಯೋಜನೆಯ ಸಂವಹನ ಹಾಗೂ ಸಾಮಾಜಿಕ ಹೊಣೆಗಾರಿಕೆ ಕಾರ್ಯಕ್ರಮದ ನಿಮಿತ್ತ ಧಾರವಾಡದ ಮಮತಾ ಶಿಕ್ಷಣ ಸಂಸ್ಥೆಯ ವಿಶೇಷ ಚೇತನ ಮಕ್ಕಳಿಗೆ ಹೆಚ್-ಡಿ ಬಿಆರ್‍ಟಿಎಸ್ ಯೋಜನೆಯ ಬಗ್ಗೆ ಮಾಹಿತಿ ಮತ್ತು ತಿಳಿವಳಿಕೆ ಶಿಕ್ಷಣ ಸಂವಹನದ ವಿಶೇಷ ಕಾರ್ಯಕ್ರಮವನ್ನು ಧಾರವಾಡದ ಬಸ್ ನಿಲ್ದಾಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮಕ್ಕೆ ಬಿ.ಆರ್.ಟಿ.ಎಸ್ ವ್ಯವಸ್ಥಾಪಕ ನಿರ್ದೇಶಕರಾದ ಪಿ.ರಾಜೇಂದ್ರ ಚೋಳನ್ ಇವರು ಚಾಲನೆ ನೀಡಿದರು. ವಿಶೇಷ ಚೇತನ ಮಕ್ಕಳು ಧಾರವಾಡ ಬಿ.ಆರ್.ಟಿ. ಬಸ್ ನಿಲ್ದಾಣದಿಂದ ಹುಬ್ಬಳ್ಳಿಯ ರೈಲ್ವೆ ನಿಲ್ದಾಣದವರೆಗೆ ಚಿಗರಿ ಬಸ್‍ನಲ್ಲಿ ಪ್ರಯಾಣ ಮಾಡಿ ಬಿಆರ್‍ಟಿಎಸ್ ಯೋಜನೆಯ ಬಗ್ಗೆ, ಸಾರ್ವಜನಿಕ ಸಾರಿಗೆ ಮಹತ್ವ ಮತ್ತು ಚಿಗರಿ ಸಾರಿಗೆ ವ್ಯವಸ್ಥೆಯ ಅನುಕೂಲತೆಗಳ ಕುರಿತು ಮಾಹಿತಿಯನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿದರು.
ಕಾರ್ಯಕ್ರಮದಲ್ಲಿ ಮಮತಾ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರು ಮತ್ತು ಸಿಬ್ಬಂದಿ ವರ್ಗ, ವಿವೇಕಾನಂದ ವಿಶ್ವಜ್ಞ, ಗುಡೆಣ್ಣವರ, ಗುರುಪ್ರಸಾದ, ಮಂಜುನಾಥ ಜಡೇನ್ನವರ ಸೇರಿದಂತೆ ಇತರರು ಇದ್ದರು.