ಹುಬ್ಬಳ್ಳಿ: ನೈಋತ್ಯ ರೈಲ್ವೆ ಇಲಾಖೆಯ ದ್ವೀಪಥ ಹಾಗೂ ಸಿಗ್ನಲ್ ಕಾಮಗಾರಿ ಹಿನ್ನೆಲೆಯಲ್ಲಿ ರೈಲ್ವೆ ಸಮಯದಲ್ಲಿ ವಿಳಂಬವಾಗುತ್ತಿದ್ದು, ಸಾರ್ವಜನಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಬುಧವಾರ ಹುಬ್ಬಳ್ಳಿಯಿಂದ ಸಂಜೆ 6-50ಕ್ಕೆ ಹೊರಡಬೇಕಿದ್ದ ಚಿಕ್ಕಜಾಜೂರ ಪ್ಯಾಸೆಂಜರ್ ರೈಲು 8-40ಕ್ಕೆ ಪ್ರಯಾಣ ಬೆಳೆಸಿದ್ದು, ಸಾರ್ವಜನಿಕರು ಸಂಕಷ್ಟ ಅನುಭವಿಸುವಂತಾಗಿದೆ. ಹಳ್ಳಿಗಳಿಂದ ಹುಬ್ಬಳ್ಳಿ ನಗರಕ್ಕೆ ಆಗಮಿಸುವ ಸಾರ್ವಜನಿಕರು ಚಿಕ್ಕಜಾಜೂರ ರೈಲಿನ ಎರಡು ಗಂಟೆ ವಿಳಂಬದಿಂದ ನಿಲ್ದಾಣದಲ್ಲಿಯೇ ನಿಂತು ಪರದಾಡುವಂತಾಯಿತು.
ಕಳೆದ ಕೆಲವು ದಿನಗಳ ಹಿಂದೆ ರೈಲ್ವೆ ಕಾಮಗಾರಿ ಹಿನ್ನೆಲೆಯಲ್ಲಿ ರೈಲ್ವೆ ಸಂಚಾರ ಕೆಲಕಾಲ ತಾತ್ಕಾಲಿಕವಾಗಿ ರದ್ದುಗೊಂಡಿತ್ತು. ಅಲ್ಲದೇ ಪ್ರಸ್ತುತ ರೈಲು ನಿರ್ದಿಷ್ಟ ಕಾಲಮಿತಿಗಿಂತ ವಿಳಂಬವಾಗಿ ಚಲಿಸುವ ಮೂಲಕ ಪ್ರಯಾಣಿಕರು ಸಂಕಷ್ಟ ಎದುರಿಸುವಂತಾಗಿದೆ.