ಹುಬ್ಬಳ್ಳಿ: ಗಲಾಟೆ ಪ್ರಕರಣದಲ್ಲಿ ಮಗ ಜೈಲು ಪಾಲಾಗಿದ್ದರಿಂದ ನೊಂದು ತಾಯಿಯೊಬ್ಬರು ಹುಬ್ಬಳ್ಳಿಯ ಉಣಕಲ್ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಗರದಲ್ಲಿ ನಡೆದಿದೆ. ಉಣಕಲ್ ನಿವಾಸಿ ಭಾರತಿ ಪಾಟೀಲ್ (ದ್ಯಾಮವ್ವ) ಎಂಬುವವರೇ ಕೆರೆಗೆ ಬಿದ್ದು ಸಾವಿಗೆ ಶರಣಾದ ತಾಯಿ.
ಉದಯನಗರದಲ್ಲಿ ಇವರ ಮಗ ವಿನಾಯಕ ಗೌಡ ಪಾಟೀಲ ಹಾಗೂ ಮಾರುತಿ ಮಾನೆ ಎಂಬುವರ ಮಗ ಸೇರಿದಂತೆ ಇತರರು ಹೊಡೆದಾಡಿಕೊಂಡಿದ್ದರು. ಇದೇ ಘಟನೆ ಸಂಬಂಧ ಪೊಲೀಸರು ವಿನಾಯಕ ಗೌಡನನ್ನು ಬಂಧಿಸಿ, ಜೈಲಿಗೆ ಕಳುಹಿಸಿದ್ದರು.
ಇತ್ತ, ತನ್ನ ಮಗ ಜೈಲು ಸೇರಿದ್ದರಿಂದ ತಾಯಿ ಭಾರತಿ ಪಾಟೀಲ್ ಮಾನಸಿಕವಾಗಿ ನೊಂದಿದ್ದರು. ಇದೇ ಕಾರಣದಿಂದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ವಿದ್ಯಾನಗರ ಠಾಣೆ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ: ‘‘ವ್ಯಸನಿಯಾಗಬೇಡಿ" ಎಂದು ಸಲಹೆ ಕೊಟ್ಟವನಿಗೆ ಚಟ್ಟ ಕಟ್ಟಿದ ಸ್ನೇಹಿತರು!