ಧಾರವಾಡ: ಸಾಮ್ರಾಜ್ಯಗಳು, ಸರ್ವಾಧಿಕಾರಿಗಳು ಕೆಳಗೆ ಇಳಿದರೆ ಬೇರೆ ಶಕ್ತಿಯಿಂದ ಅಲ್ಲ ಅವರಲ್ಲಿನ ವೈಫಲ್ಯದಿಂದ ಕೆಳಗೆ ಇಳಿತಾರೆ ಎಂದು ಧಾರವಾಡದಲ್ಲಿ ಸಾಮಾಜಿಕ ಹೋರಾಟಗಾರ ಎಸ್ ಆರ್ ಹಿರೇಮಠ ಹೇಳಿದರು. ಈ ಕುರಿತು ಮಾಧ್ಯಮಗೋಷ್ಟಿ ಮಾತನಾಡಿದ ಅವರು, ರೆಡ್ಡಿ ರಾಜಕೀಯದಿಂದ ಅಧಿಕಾರಕ್ಕೆ ಬರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಮಾಜಿ ಸಚಿವ ಜನಾರ್ದನ ರೆಡ್ಡಿ ಬಿಜೆಪಿಯಲ್ಲಿಲ್ಲ, ಹೀಗಾಗಿ ಅಧಿಕಾರಕ್ಕೆ ಬರುವುದಿಲ್ಲ. ಯಡಿಯೂರಪ್ಪ ಸಹ ಪ್ರಾಂತೀಯ ಪಕ್ಷ ಸ್ಥಾಪಿಸಿದ್ದರು. ಶ್ರೀರಾಮುಲು ಸಹ ಬಿಎಸ್‌ಆರ್ ಪಕ್ಷ ಮಾಡಿದ್ದರು. ಸುಗಲಮ್ಮ ದೇವಸ್ಥಾನಕ್ಕೆ ಧಕ್ಕೆ ಮಾಡಿ ದುರಾಸೆ ವ್ಯಕ್ತಪಡಿಸಿದ್ದರು. ಅದಾದ ಬಳಿಕವೇ ರೆಡ್ಡಿ ಕಪಾಳಕ್ಕೆ ಹೊಡಿಸಿಕೊಂಡು ಅರೆಸ್ಟ್ ಆಗಿ ಹೋದ ಎಂದು ಸಾಮಾಜಿಕ ಹೋರಾಟಗಾರ ಎಸ್.ಆರ್. ಹಿರೇಮಠ್ ಹೇಳಿದರು.
ಪ್ರಚಾರಕ್ಕೆ ರೆಡ್ಡಿ ಪತ್ನಿ, ಮಗಳು ಬರುತ್ತಿದ್ದಾರೆ. ರೆಡ್ಡಿಗೆ ಕೈದಿ ನಂಬರ್ ಹಾಕಿದ ಫೋಟೊ ಬಂದಿತ್ತು. ಆಗ 2-3 ವಾರ ಮಗಳು ಶಾಲೆಗೆ ಹೋಗಿರಲಿಲ್ಲ. ಅಷ್ಟು ಅಪಮಾನ, ಅವಮಾನ ಆಗಿತ್ತು. ಇವರು ಈಗ ಹೇಗೆ ಜನರ ಮಧ್ಯೆ ಹೋಗುತ್ತಿದ್ದಾರೆ? ಗೆದ್ದ ಮೇಲೆ ಸಂವಿಧಾನದ ಚೌಕಟ್ಟಿನಲ್ಲಿ ಜನಹಿತ ಮಾಡಬೇಕು ಎಂದು ಹೇಳಿದರು.
ಚುನಾವಣೆಯಲ್ಲಿ ಗೆದ್ದ ಮೇಲೆ ಸಂವಿಧಾನದ ಚೌಕಟ್ಟಿನಲ್ಲಿ ಜನಹಿತ ಮಾಡಬೇಕು. ಇವರು ಅದನ್ನು ದರೋಡೆಯ ಸ್ಥಳ ಮಾಡಿದ್ದಾರೆ. ನಾನು ಎನ್ನುವ ಅಹಂಕಾರ ನಡೆಯುವುದಿಲ್ಲ. ಬಿ.ಶ್ರೀರಾಮುಲು ಕೂಡ ಸ್ವಂತ ಪಕ್ಷ ಕಟ್ಟಿದ್ದರು. ಆಗ ನಾವು ಶಿವಮೊಗ್ಗದಿಂದ ಬಳ್ಳಾರಿವರೆಗೆ ಜನಜಾಗೃತಿ ಮಾಡಿದ್ದೆವು. ಆಗ ಪ್ರತಿ ತಿಂಗಳು ಯಡಿಯೂರಪ್ಪಗೆ ಕಾಣಿಕೆ ಹೋಗುತ್ತಿತ್ತು. ಇದನನ್ನೇನು ರಾಮುಲು ಬೆವರು ಸುರಿಸಿ ತಂದಿದ್ದಾ? ಈ ಗಣಿ ಕಳ್ಳ ಅಕ್ರಮ ಹಣವನ್ನು ಕೊಟ್ಟಿದ್ದ. ಇಂಥವನು ಉದ್ದಟತನದಿಂದ ಬಿಆರ್‌ಎಸ್ ಪಕ್ಷ ಮಾಡಿದ್ದ. ಅವತ್ತು ಶ್ರೀರಾಮುಲು ಜೊತೆಗೆ ಹೋಗಿದ್ದ ಸ್ವಾಮೀಜಿಗಳನ್ನೂ ನಾನು ಪ್ರಶ್ನಿಸಿದ್ದೆ. ಪ್ರಜಾಪ್ರಭುತ್ವದಲ್ಲಿ ಜನರೇ ಮಾಲೀಕರು ಎಂದರು.
ರೆಡ್ಡಿಯನ್ನು ಮೂರು ಜಿಲ್ಲೆಗಳಿಂದ ಗಡಿಪಾರು ಮಾಡಿದೆ. ಸೋಮಶೇಖರ ರೆಡ್ಡಿ ವಿರುದ್ಧವಾಗಿಯೇ ಇವರು ನಿಲ್ಲುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಚುನಾವಣೆಗೆ ಸ್ಪರ್ಧಿಸುವ ಹಕ್ಕಿದೆ. ಆದರೆ ಆ ಹಕ್ಕಿಗೆ ಅವರ ಅರ್ಹತೆ, ಹಿನ್ನೆಲೆ ಗಮನಿಸಬೇಕು. ಅವರು ಇಡಿಗಂಟು(ಠೇವಣಿ) ಕಳೆದುಕೊಂಡರೂ ಅಚ್ಚರಿ ಇಲ್ಲ ಎಂದು ಭವಿಷ್ಯ ಹೇಳಿದರು.
ಇದನ್ನೂ ಓದಿ:ಬಳ್ಳಾರಿ ನಗರದಿಂದ ಪತ್ನಿ ಲಕ್ಷ್ಮೀ ಅರುಣಾ ಸ್ಪರ್ಧೆ : ಜನಾರ್ದನ ರೆಡ್ಡಿ ಘೋಷಣೆ
ಉದ್ಯಮ ಮುಂದುವರಿಸಿದ್ದರೆ ಅಂಬಾನಿ ಅದಾನಿ ಆಗುತ್ತಿದ್ದೆ: ಶನಿವಾರ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ನೆಹರೂ ಮೈದಾನದಲ್ಲಿ ಹಮ್ಮಿಕೊಂಡಿದ್ದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಬೃಹತ್ ಸಮಾವೇಶ ಉದ್ಘಾಟಿಸಿ ಮಾತನಾಡಿದ್ದ ಜನಾರ್ದನ ರೆಡ್ಡಿ. ಹಿರಿಯೂರು ಅಂದ್ರೆ ಖುಷಿ ತರುತ್ತದೆ. ಹಿರಿಯೂರಿಗೆ ನನ್ನ ಪ್ರೀತಿ ಹಾಗೂ ಋಣ ಇದೆ. ಹಿಂದೆ 2008 ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಹಿರಿಯೂರು ಜನತೆಯೇ ಕಾರಣ ಎಂದು ತಿಳಿಸಿದ್ದರು. ತಾಯಿ ಸುಷ್ಮಾ ಸ್ವರಾಜ್ ಅವರಿಗೋಸ್ಕರ ನಾನು ರಾಜಕೀಯಕ್ಕೆ ಬಂದಿದ್ದೆ. ನಾನು ಅದೇ ಉದ್ಯಮವನ್ನು ಮುಂದುವರಿಸಿದ್ದರೇ ಇವತ್ತು ಅಂಬಾನಿ ಅದಾನಿ ಸಾಲಿನಲ್ಲಿ ಇರುತ್ತಿದ್ದೆನು ಎಂದು ಹೇಳಿದ್ದರು.
ರೆಡ್ಡಿ ಸಿಎಂ ಆಗುವನೆಂದು ಜೈಲಿನಲ್ಲಿಟ್ಟರು: 4 ವರ್ಷಗಳ ಕಾಲ ಜೈಲಿನಲ್ಲಿ ಇಟ್ಟಿದ್ದರು. ರೆಡ್ಡಿ ಮುಖ್ಯಮಂತ್ರಿ ಸ್ಥಾನಕ್ಕೆ ಹೋಗುತ್ತಾನೆ ಎಂಬ ನಿಟ್ಟಿನಲ್ಲಿ ನನ್ನನ್ನು ಬಂಧಿಸಿದ್ದರು. ನಾನು ಯಾವುದೇ ಸರ್ಕಾರಿ ಜಮೀನು, ಜಾಗ ಕಬಳಿಸಿ ಜೈಲಿಗೆ ಹೋಗಲಿಲ್ಲ. ನಮ್ಮವರೇ ನನ್ನನ್ನು ಬಂಧನದಲ್ಲಿ ಇರುವಂತೆ ಮಾಡಿದರು. ರಾಜಕೀಯವಾಗಿ ನನ್ನನ್ನು ತುಳಿಯಲು ಆರಂಭಿಸಿದರು. ನನ್ನ ಜೊತೆಯಲ್ಲಿ ಇದ್ದವರು ನನಗೆ ಮೋಸ ಮಾಡಿದರು ಎಂದು ಬೇಸರ ವ್ಯಕ್ತಪಡಿಸಿದ್ದರು.