ETV Bharat / state

ಜೆಡಿಎಸ್​​ನಲ್ಲಿ ಜಾತ್ಯತೀತತೆ ಇಲ್ಲ, ಅವರನ್ನು ಮನೆಗೆ ಕಳುಹಿಸಬೇಕು: ಎಸ್.ಆರ್. ಹಿರೇಮಠ - Social activist S R Hiremath reaction

ಈ ಬಾರಿ ಜನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಬೇಕು ಎಂದು ಎಸ್.ಆರ್. ಹಿರೇಮಠ ಕರೆ ನೀಡಿದ್ದಾರೆ.

social-activist-s-r-hiremath-reaction-on-bjp-and-jds-alliance
ಜೆಡಿಎಸ್​ ಆಚರಣೆಯಲ್ಲಿ ಜಾತ್ಯತೀತತೆ ಇಲ್ಲ, ಅವರನ್ನು ನಿರ್ನಾಮ ಮಾಡಿ ಮನೆಗೆ ಕಳುಹಿಸಬೇಕು: ಎಸ್.ಆರ್. ಹಿರೇಮಠ
author img

By

Published : Jul 17, 2023, 3:54 PM IST

Updated : Jul 17, 2023, 5:40 PM IST

ಸಾಮಾಜಿಕ ಹೋರಾಟಗಾರ ಎಸ್.ಆರ್. ಹಿರೇಮಠ

ಧಾರವಾಡ: ಜೆಡಿಎಸ್ ​ಅನ್ನು ಮಾತಿನಿಂದ ಪರಿಗಣಿಸಬಾರದು. ನಡತೆಯಿಂದ ಪರಿಗಣಿಸಬೇಕಿದೆ ಎಂದು ಸಾಮಾಜಿಕ ಹೋರಾಟಗಾರ ಎಸ್.ಆರ್. ಹಿರೇಮಠ​ ಹೇಳಿದ್ದಾರೆ. ಧಾರವಾಡದಲ್ಲಿಂದು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಕುರಿತು ಮಾತನಾಡಿ ಅವರು,
"2006ರಲ್ಲಿ ಇದೇ ಹೆಚ್‌ಡಿ ಕುಮಾರಸ್ವಾಮಿ ಅವರು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದರು. ಅದರ ಪರಿಣಾಮಗಿ 2008ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂತು. ನನ್ನ ಅಭಿಪ್ರಾಯದಲ್ಲಿ ಅವರ ಜಾತ್ಯತೀತತೆ ಎನ್ನುವುದು ನಾಮಕೇವಾಸ್ತೆ ಮಾತ್ರ" ಎಂದು ಹೇಳಿದ್ದಾರೆ.

"ಜೆಡಿಎಸ್​ ಆಚರಣೆಯಲ್ಲಿ ಜಾತ್ಯತೀತತೆ ಇಲ್ಲ, ಈ ಸಲ ಕರ್ನಾಟಕ ಜನ ಜಾಗೃತ ಆಗಬೇಕು. ಈಗ ಅವರು ಶೇ.20 ಪರ್ಸಂಟ್​ ಮಾಡಿದ್ದಾರೆ. ಮುಂದೆ ಲೋಕಸಭೆಯಲ್ಲಿ ಶೇ. 5 ಪರ್ಸಂಟ್​ಗೆ ಇಳಿಸಬೇಕು. ಆ ಮೂಲಕ ಅವರನ್ನು ನಿರ್ನಾಮ ಮಾಡಿ ಮನೆಗೆ ಕಳುಹಿಸಬೇಕು ಎಂದು ಮನವಿ ಮಾಡಿದರು. ಕರ್ನಾಟಕದಲ್ಲಿ ಈ ಸಲ ಬಿಜೆಪಿ ಸೋಲಿಸಿದ್ದೇವೆ, ಅದೇ ಮಾದರಿಯಲ್ಲಿ ಲೋಕಸಭೆ ಚುನಾವಣೆಯಲ್ಲಿಯೂ ಆಗಬೇಕಿದೆ. ಬಿಜೆಪಿ ಮತ್ತು ಸಂಘ ಪರಿವಾರದ ಶಕ್ತಿಗಳನ್ನು ಸೋಲಿಸಬೇಕಿದೆ. ಅದಕ್ಕಾಗಿ ಮಹಾರಾಷ್ಟ್ರದಲ್ಲಿ ವಿವಿಧ ಸಂಘಟನೆಗಳಿಂದ ಜು. 22ರಂದು ಸಭೆ ನಡೆಯಲಿದೆ. ಪುಣೆಯಲ್ಲಿ ಈ ಸಭೆ ನಡೆಯಲಿದೆ" ಎಂದು ತಿಳಿಸಿದರು.

ಸಿಟಿಜನ್ ಫಾರ್ ಡೆಮಾಕ್ರಸಿ ಮತ್ತು ಜನಾಂದೋಲನ ಮಹಾಮೈತ್ರಿ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಇದಕ್ಕೆ ಮಹಾರಾಷ್ಟ್ರ ನಾಗರಿಕ ಸಮಾಜ ಸಂಘಟನೆಗಳ ಬೆಂಬಲ ನೀಡುತ್ತಿವೆ. ಅದಾದ ಬಳಿಕ ಆಗಸ್ಟ್ 5 ಮತ್ತು 6 ರಂದು ದೆಹಲಿಯಲ್ಲಿ ರಾಷ್ಟ್ರೀಯ ಸಮ್ಮೇಳನ ಮಾಡುತ್ತೇವೆ. ನವದೆಹಲಿಯ ಗಾಂಧಿ ಪೀಸ್ ಫೌಂಡೇಶನ್‌ನಲ್ಲಿ ಸಮ್ಮೇಳನ ನಡೆಯಲಿದೆ. ಬಿಜೆಪಿ ಸೋಲಿಸುವುದೇ ಈ ಸಮ್ಮೇಳನದ ಗುರಿ, ಬಿಜೆಪಿ ಸೋಲಿಸುವ ಬಗ್ಗೆ ಚರ್ಚೆ ಆಗುತ್ತದೆ ಎಂದು ಹೇಳಿದರು.

ಇದನ್ನೂ ಓದಿ: ಲೋಕಸಭಾ ಚುನಾವಣೆಯಲ್ಲಿಯೂ ಬಿಜೆಪಿಗೆ ತಕ್ಕ ಪಾಠ ಕಲಿಸಿ: ಎಸ್.ಆರ್. ಹೀರೇಮಠ

ಲೋಕಸಭಾ ಚುನಾವಣೆಯಲ್ಲಿಯೂ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು: ಜು.14ರಂದು ಮೈಸೂರಿನ ಜಿಲ್ಲಾ ಪತ್ರಕರ್ತರ ಭವನದಲ್ಲಿ ಜನಾಂದೋಲನ ಮಹಾಮೈತ್ರಿ ಅಧ್ಯಕ್ಷ ಎಸ್. ಆರ್. ಹಿರೇಮಠ ಮಾತನಾಡಿ, "ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪಾಠ ಕಲಿಸಿದಂತೆ, ಮುಂದಿನ ಲೋಕಸಭಾ ಚುನಾವಣೆಯಲ್ಲಿಯೂ ಕೂಡಾ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಜನತೆ ಬಿಜೆಪಿ ಹಾಗೂ ಸಂಘ ಪರಿವಾರದ ಶಕ್ತಿಗಳ ಡಬಲ್ ಎಂಜಿನ್ ಸರ್ಕಾರವನ್ನು ಸೋಲಿಸುವ ಮೂಲಕ ಐತಿಹಾಸಿಕ ನಿರ್ಣಯ ಕೈಗೊಂಡರು. ಹೀಗಾಗಿ ಇದರ ಪ್ರೇರಣೆ ಅಡಿ ಮುಂದಿನ ಲೋಕಸಭಾ ಚುನಾವಣೆ ಇರಲಿ" ಎಂದು ಜನರಿಗೆ ಮನವಿ ಮಾಡಿದ್ದರು.

''2024ರ ಲೋಕಸಭಾ ಚುನಾವಣೆ, ಮುಂಬರುವ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ ಹಾಗೂ ಸಂಘ ಪರಿವಾರದ ಶಕ್ತಿಗಳನ್ನು ನಿರ್ಣಾಯಕವಾಗಿ ಸೋಲಿಸುವ ಹಾಗೂ ಈ ಶಕ್ತಿಗಳನ್ನು ಸಮರ್ಥವಾಗಿ ಎದುರಿಸುವ ದಿಸೆಯಲ್ಲಿ ಸಾಮಾಜಿಕ, ಸಾಂಸ್ಕೃತಿಕ ರಾಜಕಾರಣಕ್ಕಾಗಿ ಜನಾಂದೋಲನ ರೂಪಿಸಲು ವಿವಿಧೆಡೆ ಸಭೆಗಳನ್ನು ಆಯೋಜಿಸಲಾಗುತ್ತಿದೆ" ಎಂದು ತಿಳಿಸಿದ್ದರು.

Last Updated : Jul 17, 2023, 5:40 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.