ETV Bharat / state

ಹು-ಧಾ ಸ್ಮಾರ್ಟ್​​ ಸಿಟಿ ಯೋಜನೆಯ ಇ-ಶೌಚಾಲಯಗಳ ಬಳಕೆ ಹೇಗಿದೆ? - Smart City project

ಸಾರ್ಟ್ ಸಿಟಿ ಯೋಜನೆಯಡಿ ಮಹಾನಗರದ ವಿವಿಧೆಡೆ 98.25 ಲಕ್ಷ ರೂ. ವೆಚ್ಚದಲ್ಲಿ ನಗರದ 7 ಕಡೆ 15 ಇ-ಟಾಯ್ಲೆಟ್ ಅಳವಡಿಸಲಾಗಿತ್ತು. ದುರ್ಬಳಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಇ-ಟಾಯ್ಲೆಟ್ ಬಳಕೆಗೆ ನಿರಾಸಕ್ತಿ ತೋರುವಂತಾಗಿದೆ.

hubli
ಇ- ಶೌಚಾಲಯಗಳ ದುರ್ಬಳಕೆಯೇ ಹೆಚ್ಚು
author img

By

Published : Dec 17, 2019, 1:46 PM IST

ಹುಬ್ಬಳ್ಳಿ: ಅವಳಿನಗರದಲ್ಲಿ ಸ್ವಚ್ಛತೆ ದೃಷ್ಟಿಯಿಂದ ನಿರ್ಮಾಣಗೊಂಡಿರುವ ಇ-ಟಾಯ್ಲೆಟ್​ ಸರಿಯಾಗಿ ಉಪಯೋಗವಾಗುತ್ತಿಲ್ಲ. ಸಾರ್ವಜನಿಕ ಸ್ವಚ್ಛತೆಗಾಗಿ ನಿರ್ಮಾಣಗೊಂಡಿರುವ ಶೌಚಾಲಯಗಳ ಸದ್ಬಳಕೆಗಿಂತ ದುರ್ಬಳಕೆಯೇ ಹೆಚ್ಚಾಗಿದೆ ಎನ್ನುವ ಆರೋಪಗಳು ಕೇಳಿ ಬಂದಿವೆ.

ಇ- ಶೌಚಾಲಯಗಳ ದುರ್ಬಳಕೆ?

ಮಹಾನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಅಳವಡಿಸಿರುವ 15 ಸುಧಾರಿತ ಇ-ಶೌಚಾಲಯಗಳನ್ನು ಬಳಕೆ ಮಾಡುವವರಿಗಿಂತಲೂ ದುರ್ಬಳಕೆ ಮಾಡುವವರೇ ಹೆಚ್ಚಾಗುತ್ತಿದ್ದಾರೆ. ಇದರಿಂದಾಗಿ ಸ್ವಚ್ಛತೆ ಕಣ್ಮರೆಯಾಗಿದ್ದು, ಸಾರ್ವಜನಿಕರಿಗೆ ಕೆಲವು ಕಡೆ ಮೂಗು ಮುಚ್ಚಿಕೊಂಡೆ ಇ-ಶೌಚಾಲಯ ಬಳಕೆ ಮಾಡುವ ಅನಿವಾರ್ಯತೆ ಎದುರಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಸಾರ್ಟ್ ಸಿಟಿ ಯೋಜನೆಯಡಿ ಮಹಾನಗರದ ವಿವಿಧೆಡೆ 98.25 ಲಕ್ಷ ರೂ. ವೆಚ್ಚದಲ್ಲಿ ನಗರದ 7 ಕಡೆ 15 ಇ-ಟಾಯ್ಲೆಟ್ ಅಳವಡಿಸಲಾಗಿತ್ತು. ದುರ್ಬಳಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಇ-ಟಾಯ್ಲೆಟ್ ಬಳಕೆಗೆ ನಿರಾಸಕ್ತಿ ತೋರುವಂತಾಗಿದೆಯಂತೆ.

1 ರೂ. ನಾಣ್ಯ ಹಾಕಿ ಒಬ್ಬರು ಮಾತ್ರ ಬಳಸಬಹುದಾದ ಇ-ಶೌಚಾಲಯವನ್ನು ಒಂದೇ ನಾಣ್ಯ ಹಾಕಿ 3-4 ಜನರು ಬಳಸುತ್ತಿದ್ದಾರೆ. ಇದರಿಂದಾಗಿ ಶೌಚಾಲಯಗಳ ನಿರ್ವಹಣೆ ಕಷ್ಟಸಾಧ್ಯವಾಗುತ್ತಿದೆ. ಇದೆಲ್ಲಕ್ಕಿಂತ ಮುಖ್ಯವಾಗಿ ನೈರ್ಮಲ್ಯ ಕಾಯ್ದುಕೊಳ್ಳುವುದೇ ಅಧಿಕಾರಿಗಳಿಗೆ ದೊಡ್ಡ ಸವಾಲಾಗುತ್ತಿದೆ. ಒಂದೇ ನಾಣ್ಯ ಹಾಕಿ 3-4 ಜನರು ಶೌಚಾಲಯ ಬಳಸುತ್ತಿರುವುದರಿಂದ ಒಬ್ಬ ವ್ಯಕ್ತಿಗೆ ಬಳಕೆ ಆಗುವ ನೀರು ನಾಲ್ಕು ಮಂದಿಗೂ ಅಷ್ಟೇ ಪ್ರಮಾಣದಲ್ಲಿ ಬಳಕೆ ಆಗುತ್ತದೆ. ಇದರಿಂದ ಬಹುತೇಕ ಇ-ಶೌಚಾಲಯಗಳು ಗಬ್ಬು ನಾರುತ್ತಿವೆ. ಸಾಂಕ್ರಾಮಿಕ ರೋಗಗಳಿಗೆ ಹಾದಿ ಮಾಡಿಕೊಟ್ಟಂತಾಗುತ್ತಿದೆ ಎಂದು ಸಾರ್ವಜನಿಕರು ಅವಲತ್ತುಕೊಂಡಿದ್ದಾರೆ.

ಒಂದು ವರ್ಷದ ಅವಧಿಯೊಳಗೆ 7 ಕಡೆ ಅಳವಡಿಸಲಾಗಿರುವ 15 ಇ-ಶೌಚಾಲಯಗಳನ್ನು 7,429 ಮಹಿಳೆಯರು ಸೇರಿದಂತೆ 21,631 ಜನರು ಬಳಕೆ ಮಾಡಿದ್ದಾರೆ. 21,630 ರೂ. ಹಣ ಸಂಗ್ರಹಣೆಯಾಗಿದೆ. ಇದರಲ್ಲಿ ಮೂರು ಸಾವಿರಕ್ಕೂ ಹೆಚ್ಚು ಬಾರಿ ಇ-ಶೌಚಾಲಯಗಳ ದುರ್ಬಳಕೆಯಾಗಿದೆ ಎನ್ನಲಾಗಿದೆ.

ಎಲ್ಲೆಲ್ಲಿವೆ ಇ-ಶೌಚಾಲಯಗಳು:
ಮಹಾನಗರದಲ್ಲಿ ಚಿಟಗುಪ್ಪಿ ಆಸ್ಪತ್ರೆ, ಗ್ಲಾಸ್‍ಹೌಸ್, ಗೋಕುಲ ರಸ್ತೆ ಮಂಜುನಾಥ ನಗರ, ಕೆಇಸಿ ಎದುರು, ಜೆಸಿ ನಗರ, ಕಾರವಾರ ರಸ್ತೆಯ ಬಾಶಲ್ ಮಿಷನ್ ಸರ್ಕಲ್ ಸೇರಿದಂತೆ ಏಳು ಕಡೆಗಳಲ್ಲಿ 15 ಇ-ಟಾಯ್ಲೆಟ್ ಘಟಕಗಳನ್ನು ಅಳವಡಿಸಲಾಗಿದೆ.

Intro:ಹುಬ್ಬಳ್ಳಿ-01

ಹು-ಧಾ ಮಹಾನಗರದಲ್ಲಿ ಸ್ವಚ್ಚತಾ ಹಿತದೃಷ್ಟಿಯಿಂದ ನಿರ್ಮಾಣಗೊಂಡಿರುವ ಇ-ಟಾಯ್ಲೆಟನಲ್ಲಿ ಅವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿವೆ‌. ಸಾರ್ವಜನಿಕ ಸ್ವಚ್ಚತೆಗಾಗಿ ನಿರ್ಮಾಣಗೊಂಡಿರುವ ಶೌಚಾಲಯಗಳನ್ನು ಸದ್ಬಳಿಕೆಗಿಂದ ದುರ್ಬಳಕೆಯೇ ಹೆಚ್ಚಾಗಿದೆ.

ಮಹಾನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಅಳವಡಿಸಿರುವ 15 ಸುಧಾರಿತ ಇ-ಶೌಚಾಲಯಗಳನ್ನು ಬಳಕೆ ಮಾಡುವವರಿಗಿಂತಲೂ ದುರ್ಬಳಕೆ ಮಾಡುವವರೇ ಹೆಚ್ಚಾಗುತ್ತಿದ್ದಾರೆ. ಇದರಿಂದಾಗಿ ಸ್ವಚ್ಛತೆ ಕಣ್ಮರೆಯಾಗಿದ್ದು, ಸಾರ್ವಜನಿಕರಿಗೆ ಕೆಲವು ಕಡೆ ಮೂಗು ಮುಚ್ಚಿಕೊಂಡೆ ಇ- ಶೌಚಾಲಯ ಬಳಕೆ ಮಾಡುವ ಅನಿವಾರ್ಯತೆ ಎದುರಾಗಿದೆ.

ಸಾರ್ಟ್ ಸಿಟಿ ಯೋಜನೆಯಡಿ ಮಹಾನಗರದ ವಿವಿಧೆಡೆ 98.25 ಲಕ್ಷ ರೂ. ವೆಚ್ಚದಲ್ಲಿ ನಗರದ 7 ಕಡೆ 15 ಇ-ಟಾಯ್ಲೆಟ್ ಅಳವಡಿಸಲಾಗಿತ್ತು. ದುರ್ಬಳಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಇ-ಟಾಯ್ಲೆಟ್ ಬಳಕೆಗೆ ನಿರಾಸಕ್ತಿ ತೊರುವಂತಾಗಿದೆ.

1 ರೂ.ಕ್ವಾಯಿನ್(ನಾಣ್ಯ)ಗಳನ್ನು ಹಾಕಿ ಒಬ್ಬರು ಮಾತ್ರ ಬಳಸಬಹುದಾದ ಇ-ಶೌಚಾಲಯವನ್ನು ಒಂದೇ ಕ್ವಾಯಿನ್ ಹಾಕಿ 3-4 ಜನರು ಶೌಚಾಲಯ ಬಳಸುತ್ತಿದ್ದಾರೆ. ಇದರಿಂದಾಗಿ ಶೌಚಾಲಯಗಳ ನಿರ್ವಹಣೆ ಕಷ್ಟಸಾಧ್ಯವಾಗುತ್ತಿದೆ. ಇದೆಲ್ಲಕ್ಕಿಂತ ಮುಖ್ಯವಾಗಿ ನೈರ್ಮಲ್ಯ ಕಾಯ್ದುಕೊಳ್ಳುವುದೇ ಅಕಾರಿಗಳಿಗೆ ದೊಡ್ಡ ಸವಾಲಾಗುತ್ತಿದೆ. ಒಂದೇ ಕ್ವಾಯಿನ್ ಹಾಕಿ 3-4 ಜನರು ಶೌಚಾಲಯ ಬಳಸುತ್ತಿರುವುದರಿಂದ ಒಬ್ಬ ವ್ಯಕ್ತಿಗೆ ಬಳಕೆ ಆಗುವ ನೀರು ನಾಲ್ಕು ಮಂದಿಗೂ ಅಷ್ಟೇ ಪ್ರಮಾಣದಲ್ಲಿ ಫ್ಲೆಶ್ ಆಗುತ್ತದೆ. ಇದರಿಂದ ಬಹುತೇಕ ಇ-ಶೌಚಾಲಯಗಳು ಗಬ್ಬು ನಾರುತ್ತಿವೆ. ಸಾಂಕ್ರಾಮಿಕ ರೋಗಗಳಿಗೆ ಹಾದಿ ಮಾಡಿಕೊಟ್ಟಂತಾಗುತ್ತಿದೆ.

ಒಂದು ವರ್ಷದ ಅವಧಿಯೊಳಗೆ 7 ಕಡೆ ಅಳವಡಿಸಲಾಗಿರುವ 15 ಇ-ಶೌಚಾಲಯಗಳನ್ನು 7429 ಮಹಿಳೆಯರು ಸೇರಿದಂತೆ 21,631 ಜನರು ಬಳಕೆ ಮಾಡಿದ್ದಾರೆ. 21,630 ರೂ. ಹಣ ಸಂಗ್ರಹಣೆಯಾಗಿದೆ. ಇದರಲ್ಲಿ ಮೂರು ಸಾವಿರಕ್ಕೂ ಹೆಚ್ಚು ಬಾರಿ ಇ-ಶೌಚಾಲಯಗಳ ದುರ್ಬಳಕೆಯಾಗಿದೆ.

ಎಲ್ಲೆಲ್ಲಿವೆ ಇ-ಶೌಚಾಲಯಗಳು:
ಮಹಾನಗರದಲ್ಲಿ ಚಿಟಗುಪ್ಪಿ ಆಸ್ಪತ್ರೆ, ಗ್ಲಾಸ್‍ಹೌಸ್, ಗೋಕುಲ ರಸ್ತೆ ಮಂಜುನಾಥ ನಗರ, ಕೆಇಸಿ ಎದುರು, ಜೆಸಿ ನಗರ, ಕಾರವಾರ ರಸ್ತೆಯ ಬಾಶಲ್ ಮಿಷನ್ ಸರ್ಕಲ್ ಸೇರಿದಂತೆ ಏಳು ಕಡೆಗಳಲ್ಲಿ 15 ಇ-ಟಾಯ್ಲೆಟ್ ಘಟಕಗಳನ್ನು ಅಳವಡಿಸಲಾಗಿದೆ.Body:H B GaddadConclusion:Etv hubli
ETV Bharat Logo

Copyright © 2025 Ushodaya Enterprises Pvt. Ltd., All Rights Reserved.