ಧಾರವಾಡ: ಇಲ್ಲಿನ ಪೊಲೀಸ್ ತರಬೇತಿ ಶಾಲೆಯಲ್ಲಿ 6ನೇ ತಂಡದ ಪ್ರಶಿಕ್ಷಣಾರ್ಥಿ ನಾಗರಿಕ ಪೊಲೀಸ್ ಪೇದೆಗಳ ನಿರ್ಗಮನ ಪಥ ಸಂಚಲನ ಜರುಗಿತು.
ಇಂದಿನ ನಾಗರಿಕ ಪೊಲೀಸ್ ಪೇದೆಗಳ ನಿರ್ಗಮನ ಪಥ ಸಂಚಲನದಲ್ಲಿ 341 ಪ್ರಶಿಕ್ಷಣಾರ್ಥಿಗಳು ಪರೇಡ್ ನಡೆಸಿದರು. ಪರೇಡ್ ಕಮಾಂಡರ್ ರಂಜಿತಕುಮಾರ ಹಾಗೂ ನವೀನಕುಮಾರ ಚವ್ಹಾಣ ನೇತೃತ್ವದಲ್ಲಿ ಅತಿಥಿಗಳಿಗೆ ವಿವಿಧ ತಂಡಗಳಿಂದ ಗೌರವ ಸಲ್ಲಿಸಲಾಯಿತು.
ಬಳಿಕ ರಾಜ್ಯ ಪೊಲೀಸ್ ಇಲಾಖೆ ತರಬೇತಿ ವಿಭಾಗದ ಪೊಲೀಸ್ ಮಹಾ ನಿರೀಕ್ಷಕ ಪಿ. ಹರಿಶೇಖರನ್ ಮಾತನಾಡಿ, ಇಂದು ಸಮಾಜದಲ್ಲಿ ಸಾಮಾಜಿಕ ಜಾಲತಾಣಗಳ ಪ್ರಭಾವ ಅಧಿಕವಾಗಿದೆ. ಇವುಗಳನ್ನು ಬಳಸಿಕೊಂಡು ಜನಸಾಮಾನ್ಯರಿಗೆ ಇಲಾಖೆ ಕಾರ್ಯಕ್ರಮ, ಸುರಕ್ಷತಾ ಕ್ರಮಗಳ ಕುರಿತು ಮಾಹಿತಿ ನೀಡಬೇಕು. ಜನರ ಸಹಭಾಗೀತ್ವ, ಅಧಿಕಾರಿಗಳ ಸಹಕಾರದಿಂದ ಉತ್ತಮವಾಗಿ ಕಾರ್ಯ ನಿರ್ವಹಿಸಬಹುದು. ಗ್ರಾಮ ವಾಸ್ತವ್ಯ ಸರ್ಕಾರದ ಜನಪ್ರೀಯ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಪೊಲೀಸ್ ಅಧಿಕಾರಿ, ಸಿಬ್ಬಂದಿ ಗ್ರಾಮಗಳಿಗೆ ತೆರಳಿ, ಅದರಲ್ಲಿ ಪಾಲ್ಗೊಂಡು ಜನರಿಗೆ ಸುರಕ್ಷತೆ, ಶಾಂತಿ, ಸುವ್ಯವಸ್ಥೆ ಭಾವನೆ ಮೂಡಿಸಬೇಕು. ಜೊತೆಗೆ ಸಹಭಾಗಿತ್ವ ನೀಡುವಂತೆ ಪ್ರೇರೆಪಿಸಬೇಕು ಎಂದು ತಿಳಿಸಿದರು.
ಓದಿ:ಗದಗ ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ಸಿರಾಮಿಕ್ ಕಂಪನಿ ಬಂದ್: ಮಾಲೀಕರ ಆರೋಪ
ಪ್ರಶಿಕ್ಷಣಾರ್ಥಿಗಳು ಉತ್ತಮವಾಗಿ ಪಥಸಂಚಲನ ಪ್ರದರ್ಶಿಸಿದ್ದಕ್ಕೆ ಅವರು ಪ್ರಶಿಕ್ಷಣಾರ್ಥಿಗಳ ತರಬೇತಿದಾರರಿಗೆ ರೂ.10 ಸಾವಿರ ರೂ. ಬಹುಮಾನ ನೀಡುವುದಾಗಿ ಘೋಷಿಸಿದರು. ವಿವಿಧ ವಿಭಾಗದಲ್ಲಿ ಸಾಧನೆ ಮಾಡಿದ ಪ್ರಶಿಕ್ಷಣಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.