ಧಾರವಾಡ: ಆರು ದಿನಗಳ ಮುಂಚಿತವಾಗಿಯೇ ನೈಋತ್ಯ ಮುಂಗಾರು ಜಿಲ್ಲೆಗೆ ಆಗಮನವಾಗಿದೆ ಎಂದು ಧಾರವಾಡ ಕೃಷಿ ವಿವಿ ಹವಾಮಾನ ವಿಭಾಗ ಮಾಹಿತಿ ನೀಡಿದೆ. ಸಾಮಾನ್ಯವಾಗಿ ಜುಲೈ 8ರಿಂದ ದೇಶದಲ್ಲಿ ಮುಂಗಾರು ಮಳೆ ಆರಂಭವಾಗುತ್ತಿತ್ತು. ಆದ್ರೆ ಈ ಬಾರಿ ನೈಋತ್ಯ ಭಾಗಕ್ಕೆ 6 ದಿನಗಳ ಮುಂಚಿತವಾಗಿಯೇ ಮಳೆಯ ಆಗಮನವಾಗಿದೆ.
ಉತ್ತರ ಕರ್ನಾಟಕ ಭಾಗದಲ್ಲಿ ಮಳೆ ಪ್ರಮಾಣ ಇನ್ನೂ ದುರ್ಬಲವಾಗಿದೆ. ಜೂನ್ ನಿಂದ ಇಲ್ಲಿಯವರೆಗೆ ಯಾದಗಿರಿ, ಬೀದರ್ ಸೇರಿದಂತೆ ಉಳಿದ ಜಿಲ್ಲೆಗಳಲ್ಲೂ ಕಡಿಮೆ ಮತ್ತು ಅತಿ ಕಡಿಮೆ ಮಳೆಯಾಗಿದೆ. ಈ ಬಾರಿ ಮಳೆಯ ಪ್ರಮಾಣ ದುರ್ಬಲವಾಗಿದ್ದು ಅಲ್ಲಲ್ಲಿ ಕಡಿಮೆ ಮಳೆ ಬೀಳುವ ಸಾಧ್ಯತೆ ಇದೇ ಎಂದು ಕೃವಿವಿ ಹವಾಮಾನ ವಿಭಾಗ ಮಾಹಿತಿ ನೀಡಿದೆ.
ಇದನ್ನೂ ಓದಿ:ದಕ್ಷಿಣಕನ್ನಡದಲ್ಲಿ ವರುಣನ ಅಬ್ಬರ: ಬೆಳ್ತಂಗಡಿ ತಾಲೂಕಿನ ಶಾಲಾ, ಕಾಲೇಜುಗಳಿಗೆ ರಜೆ