ಧಾರವಾಡ: ಅಮೆರಿಕದಲ್ಲಿರುವ ಅನಿವಾಸಿ ಭಾರತೀಯ ಮಹಿಳೆ ಹೊಸ ಮೈಲಿಗಲ್ಲನ್ನು ಸ್ಥಾಪಿಸಲು ಮುಂದಾಗಿದ್ದಾರೆ. ಇಂದು ಅಂತರಿಕ್ಷಯಾನ ಕೈಗೊಳ್ಳಲಿರುವ ಸಿರಿಷಾ ಬಾಂಡ್ಲಾ ಅವರಿಗೆ ಧಾರವಾಡದ ಕಲಾವಿದರು ಶುಭ ಹಾರೈಸಿದ್ದಾರೆ. ಅವರ ಭಾವಚಿತ್ರ ರಚನೆ ಮಾಡಿ ಶುಭಾಶಯ ಕೋರಿದ್ದಾರೆ.
ಕೆಲಗೇರಿ ಗಾಯತ್ರಿಪುರದ ಕಲಾವಿದರಾದ ಮಂಜುನಾಥ ಹಿರೇಮಠ ಹಾಗೂ ಅವರ ಮಕ್ಕಳಾದ ಕಾಂತೇಶ ಮತ್ತು ವಿನಾಯಕ ಅವರು ಸಿರಿಷಾ ಬಾಂಡ್ಲಾ ಅವರ ಭಾವಚಿತ್ರ ರಚಿಸಿ ಶುಭಾಶಯ ಕೋರಿದ್ದಾರೆ. ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ 34 ವರ್ಷದ ಸಿರಿಷಾ ಅವರು ನ್ಯೂ ಮೆಕ್ಸಿಕೋದ ವರ್ಜಿನ್ ಗೆಲ್ಯಾಕ್ಟಿಕ್ನಿಂದ ಅಂತರಿಕ್ಷಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಒಟ್ಟು ಆರು ಜನರು ಇರುವ ತಂಡದಲ್ಲಿ ಇವರೂ ಒಬ್ಬರಾಗಿದ್ದು, ಭಾರತೀಯರಿಗೆ ಹೆಮ್ಮೆಯ ವಿಷಯ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ: ಹಲ್ಲು ನೋವೆಂದು ಸ್ನೇಹಿತನ ಕ್ಲಿನಿಕ್ಗೆ ಹೋದವ ಮಸಣ ಸೇರಿದ
ಸಿರಿಷಾ ಬಾಂಡ್ಲಾ ಅವರು ಅಂತರಿಕ್ಷಯಾನ ಸಾಹಸಕ್ಕೆ ಮುಂದಾಗಿದ್ದು, ಅವರಿಗೂ ಹಾಗೂ ಆ ತಂಡದಲ್ಲಿರುವ ಎಲ್ಲ ಗಗನಯಾತ್ರಿಗಳಿಗೂ ಒಳ್ಳೆಯದಾಗಲಿ ಎಂದು ಹಾರೈಸೋಣ.