ETV Bharat / state

ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಸ್ಫೋಟ ಪ್ರಕರಣ: ಪೊಲೀಸರಿಗೆ ಸಿಕ್ತು ಮಹತ್ವದ ಸುಳಿವು!! - investigation by police

ರೈಲ್ವೆ ನಿಲ್ದಾಣದಲ್ಲಿ ನಡೆದಿದ್ದ ಸ್ಫೋಟ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಮಹತ್ವದ ಸುಳಿವು ಸಿಕ್ಕಿದೆ. ಹುಬ್ಬಳ್ಳಿ ಮಾದರಿಯಲ್ಲೆ ಕೊಲ್ಲಾಪುರದಲ್ಲಿ ಈ ಹಿಂದೆ ಸ್ಫೋಟ ನಡೆದಿತ್ತು. ಮಹಾ ಚುನಾವಣೆ ವೇಳೆ ಸ್ಫೋಟಕ್ಕೆ ಸಂಚು ಮಾಡಲಾಗಿತ್ತಾ ಎಂಬ ಶಂಕೆಯ ಜಾಡು ಹಿಡಿದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

hbl
author img

By

Published : Oct 22, 2019, 8:57 PM IST

Updated : Oct 22, 2019, 9:43 PM IST

ಹುಬ್ಬಳ್ಳಿ: ನಿನ್ನೆ ಮುಂಜಾನೆ ಶಾಂತವಾಗಿದ್ದ ಹುಬ್ಬಳ್ಳಿ ರೈಲ್ವೆ ನಿಲ್ದಾಣ, ಮಧ್ಯಾಹ್ನದ ಹೊತ್ತಿಗೆ ಬೆಚ್ಚಿ ಬಿದ್ದಿತ್ತು. 12.36ಕ್ಕೆ ರೈಲ್ವೆ ನಿಲ್ದಾಣದಲ್ಲಿ ಸ್ಫೋಟಕಗಳಿದ್ದ ಬಾಕ್ಸ್ ಬ್ಲಾಸ್ಟ್ ಆಗುತ್ತಿದ್ದಂತೆ ಜನರು ಬೆಚ್ಚಿ ಬಿದ್ದಿದ್ದರು.‌ ಇದರ ತನಿಖೆಯನ್ನು ಚುರುಕುಗೊಳಿಸಿರುವ ರೈಲ್ವೆ ಪೊಲೀಸರಿಗೆ ಮಹತ್ವದ ಮಾಹಿತಿ ಸಿಕ್ಕಿದೆ ಎನ್ನಲಾಗಿದೆ.

ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಸ್ಫೋಟಗೊಂಡ ಬಾಕ್ಸ್​ಗಳನ್ನು ಕೊಲ್ಲಾಪುರಕ್ಕೆ ಸಾಗಿಸಲಾಗುತ್ತಿತ್ತಾ ಎನ್ನುವ ಅನುಮಾನ ತನಿಖಾಧಿಕಾರಿಗಳಿಗೆ ಕಾಡುತ್ತಿದೆ. ಕಳೆದ ಮೂರು ದಿನಗಳ ಹಿಂದೆ ಕೊಲ್ಲಾಪುರದಲ್ಲಿಯೂ ಹುಬ್ಬಳ್ಳಿ ಮಾದರಿಯಲ್ಲೆ ಸ್ಫೋಟ ಸಂಭವಿಸಿತ್ತು. ಕೊಲ್ಲಾಪುರದಲ್ಲಿ ನಡೆದ ಸ್ಫೋಟದ ಬಗ್ಗೆಯೂ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಬೋರಲಿಂಗಯ್ಯ, ಆರ್‌ಪಿಎಫ್ ಎಸ್‌ಪಿ

ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ತನಿಖಾ ತಂಡಗಳನ್ನ ನೇಮಕ ಮಾಡಲಾಗಿದೆ. ವಿಜಯವಾಡದಿಂದ ಹುಬ್ಬಳ್ಳಿಗೆ ಸ್ಫೋಟಕ ತುಂಬಿದ್ದ ಬಾಕ್ಸ್​ಗಳು ಬಂದಿದ್ದು ಹೇಗೆ ಎನ್ನುವುದನ್ನ ತನಿಖೆ ಮಾಡಲಾಗುತ್ತಿದೆ. ಅಷ್ಟೆ ಅಲ್ಲದೆ ಬಾಕ್ಸ್​ಗಳ ಮೇಲಿರುವ ಬರಹಗಳು ಸಂಚಲನ ಮೂಡಿಸಿದ್ದು, ತನಿಖೆಗೆ ಮಹತ್ವದ ಸುಳಿವು ನೀಡಿವೆ. ರೈಲ್ವೆ ಆವರಣದ ಬಯಲು ಪ್ರದೇಶದಲ್ಲಿ ಮರಳು ತುಂಬಿದ ಚೀಲಗಳ ರಾಶಿಯಲ್ಲಿ ಸ್ಫೋಟಕಗಳಿರುವ ಬಾಕ್ಸ್ ಇಡಲಾಗಿದ್ದು, ಇಂದು ಆರ್‌ಪಿಎಫ್ ಡಿಜಿ ಅರುಣಕುಮಾರ್ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದರು.

ಎಸ್‌ಎಫ್‌ಎಲ್ ತಂಡ ಸ್ಥಳಕ್ಕೆ ಆಗಮನಿಸಿ ಸ್ಫೋಟಕದ ಸ್ಯಾಂಪಲ್​ಗಳನ್ನು ಸಂಗ್ರಹಿಸಿಕೊಂಡು ಹೋಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ಯಾರನ್ನು ಬಂಧಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ನಡೆದಿರುವ ಸ್ಫೋಟ ಪ್ರಕರಣಕ್ಕೂ ಕೊಲ್ಲಾಪುರಕ್ಕೂ ಲಿಂಕ್ ಇದೆ ಎನ್ನುವ ಅನುಮಾನ ಬಲವಾಗುತ್ತಿದ್ದು, ತನಿಖೆ ಚುರುಕುಗೊಂಡಿದೆ. ಮತ್ತೊಂದೆಡೆ ರೈಲ್ವೆ ಪೊಲೀಸರ ಭದ್ರತಾ ವೈಫಲ್ಯದ ಬಗ್ಗೆ ಪ್ರಶ್ನೆ ಮೂಡಿದೆ.

Intro:ಹುಬ್ಬಳ್ಳಿ-08

Anchor
ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ನಡೆದಿದ್ದ ಸ್ಪೋಟ ಪ್ರಕರಣಕ್ಕೆ ಮಹತ್ವದ ಸುಳಿವು ಸಿಕ್ಕಿದೆ. ಹುಬ್ಬಳ್ಳಿ ಮಾದರಿಯಲ್ಲೆ ಕೊಲ್ಲಾಪುರದಲ್ಲಿ ನಡೆದಿತ್ತು ಸ್ಪೋಟ. ಮಹಾ ಚುನಾವಣೆ ವೇಳೆ ಸ್ಪೋಟಕ್ಕೆ ಸಂಚು ಮಾಡಲಾಗಿತ್ತಾ ಎಂಬ ಶಂಕೆ ಜಾಡು ಹಿಡಿದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Voice over..

ನಿನ್ನೆ ಮುಂಜಾನೆ ಶಾಂತವಾಗಿದ್ದ ಹುಬ್ಬಳ್ಳಿ ರೈಲ್ವೆ ನಿಲ್ದಾಣ, ಮಧ್ಯಾಹ್ನದ ಹೊತ್ತಿಗೆ ಬೆಚ್ಚಿ ಬಿದ್ದಿತ್ತು. 12.36 ಕ್ಕೆ ರೈಲ್ವೆ ನಿಲ್ದಾಣದಲ್ಲಿ ಸ್ಪೋಟಕಗಳಿದ್ದ ಬಾಕ್ಸ್ ಬ್ಲಾಸ್ಟ್ ಆಗುತ್ತಿದ್ದಂತೆ ಜನರು ಬೆಚ್ಚಿ ಬಿದ್ದಿತ್ತು.‌ಇದರ ತನಿಖೆಯನ್ನು ಚುರುಕುಗೊಂಡಿರುವ ರೈಲ್ವೆ ಪೋಲಿಸರಿಗೆ ಮಹತ್ವದ ಮಾಹಿತಿ ಸಿಕ್ಕಿದೆ ಎನ್ನಲಾಗಿದೆ. ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಸ್ಪೋಟಗೊಂಡ ಬಾಕ್ಸ್ ಗಳನ್ನ ಕೊಲ್ಲಾಪುರಕ್ಕೆ ಸಾಗಿಸಲಾಗುತ್ತಿತ್ತಾ ಎನ್ನುವ ಅನುಮಾನ ತನಿಖಾಧಿಕಾರಿಗಳಿಗೆ ಕಾಡುತ್ತಿದೆ. ಕಳೆದ ಮೂರು ದಿನಗಳ ಹಿಂದೆ ಕೊಲ್ಲಾಪುರದಲ್ಲಿಯು ಹುಬ್ಬಳ್ಳಿ ಮಾದರಿಯಲ್ಲೆ ಸ್ಟೋಟ ಸಂಭವಿಸಿತ್ತು. ಕೊಲ್ಲಾಪುರದಲ್ಲಿ ನಡೆದ ಸ್ಪೋಟದ ಬಗ್ಗೆಯು ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಬೈಟ್: ಬೋರಲಿಂಗಯ್ಯ, ಆರ್‌ಪಿಎಫ್ ಎಸ್‌ಪಿ.

Voice over..
ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ತನಿಖಾ ತಂಡಗಳನ್ನ ನೇಮಕ ಮಾಡಲಾಗಿದೆ. ವಿಜಯವಾಡದಿಂದ ಹುಬ್ಬಳ್ಳಿಗೆ ಸ್ಪೋಟಕ ತುಂಬಿದ್ದ ಬಾಕ್ಸ್ ಗಳು ಬಂದಿದ್ದು ಹೇಗೆ ಎನ್ನುವುದನ್ನ ತನಿಖೆ ಮಾಡಲಾಗುತ್ತಿದೆ. ಅಷ್ಟೆ ಅಲ್ಲದೆ ಬಾಕ್ಸ್ ಗಳ ಮೇಲಿರುವ ಬರಹಗಳು ಸಂಚಲನ ಮೂಡಿಸಿದ್ದು ತನಿಖೆಗೆ ಮಹತ್ವದ ಸುಳಿವು ನೀಡಿವೆ. ರೈಲ್ವೆ ಆವರಣದ ಬಯಲು ಪ್ರದೇಶದಲ್ಲಿ ಮರಳು ತುಂಬಿದ ಚೀಲಗಳ ರಾಶಿಯಲ್ಲಿ ಸ್ಪೋಟಗಳಿರುವ ಬಾಕ್ಸ್ ಈಡಲಾಗಿದ್ದು, ಇಂದು ಆರ್‌ಪಿಎಫ್ ಡಿಜಿ ಅರುಣಕುಮಾರ್ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ರು. ಎಸ್‌ಎಫ್‌ಎಲ್ ತಂಡ ಸ್ಥಳಕ್ಕೆ ಆಗಮನಿಸಿ ಸ್ಪೋಟಕದ ಸ್ಯಾಂಪಲ್ ಗಳನ್ನ ಸಂಗ್ರಹಿಸಿಕೊಂಡು ಹೋಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ಯಾರನ್ನು ಬಂಧಿಸಿಲ್ಲವೆಂದು ಅವರು ಸ್ಪಷ್ಟಪಡಿಸಿದ್ದಾರೆ.

ಬೈಟ್: ಅರುಣಕುಮಾರ್, ಆರ್‌ಪಿಎಫ್, ಡಿಜಿ.

Voice over..
ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ನಡೆದಿರುವ ಸ್ಪೋಟ ಪ್ರಕರಣಕ್ಕು ಕೊಲ್ಲಾಪುರಕ್ಕು ಲಿಂಕ್ ಇದೆ ಎನ್ನುವ ಅನುಮಾನ ಬಲವಾಗುತ್ತಿದ್ದು, ತನಿಖೆ ಚುರುಕುಗೊಂಡಿದೆ. ಮತ್ತೊಂದೆಡೆ ರೈಲ್ವೆ ಪೋಲಿಸರ ಭದ್ರತಾ ವೈಫಲ್ಯದ ಬಗ್ಗೆಯು ಪ್ರಶ್ನೆ ಮೂಡಿದೆ.
--------------------------------------------------------------------------------
H B Gaddad
Etv BHARAT Hubballi

Plz use dgp arunkumar byte and videosBody:H B GaddadConclusion:Etv hubli
Last Updated : Oct 22, 2019, 9:43 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.